ಬಂಟ್ವಾಳ

ಬಂಟ್ವಾಳ ಕ್ಷೇತ್ರದ ದೇವಸ್ಥಾನ, ದೈವಸ್ಥಾನಗಳಿಗೆ 1.28 ಕೋಟಿ ರೂ ಅನುದಾನ

ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಶಿಫಾರಸ್ಸಿನ ಮೇರೆಗೆ ಮುಜರಾಯಿ ಇಲಾಖೆಯಿಂದ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ದೇವಸ್ಥಾನ ಹಾಗೂ ದೈವಸ್ಥಾನಗಳಿಗೆ ರೂ 1.28 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದಾರೆ.

ಜಾಹೀರಾತು

ವಿಟ್ಲಪಡ್ನೂರು ಗ್ರಾಮದ ಕಾಪು ಶ್ರಿ ಮಲರಾಯ ದೈವಸ್ಥಾನದ 3 ಲಕ್ಷ, ನಾವೂರು ಗ್ರಾಮದ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದ– 8 ಲಕ್ಷ, ಅನಂತಾಡಿ ಗ್ರಾಮದ ಬಾಕಿಲ ಶ್ರೀ ಉಳ್ಳಾಲ್ದಿ ವೈದ್ಯನಾಥೇಶ್ವರ ದೈವಸ್ಥಾನ ನವೀಕರಣ– 4 ಲಕ್ಷ, ಕೊಳ್ನಾಡು ಗ್ರಾಮದ ಶ್ರೀ ಚಾಮುಂಡಿ,ಕೊರತಿ ಗುಳಿಗ ಕ್ಷೇತ್ರ ನವೀಕರಣ– 2 ಲಕ್ಷ, ಕನ್ಯಾನ ಗ್ರಾಮದ ದೇಲಂತಬೆಟ್ಟು ಶ್ರಿ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ– 5 ಲಕ್ಷ, ಕನ್ಯಾನ ಗ್ರಾಮದ ಆದಿ ಮುಗೇರ್ಕಳ ದೈವಸ್ಥಾನ ನವೀಕರಣ– 2 ಲಕ್ಷ, ಸಜಿಪಮೂಡ ಗ್ರಾಮದ ಶ್ರಿಮಹಾಗಣಪತಿ ದೇವಸ್ಥಾನ ಅನ್ನಪ್ಪಾಡಿ– 5 ಲಕ್ಷ, ಕೊಳ್ನಾಡು ಗ್ರಾಮದ ಸೆರ್ಕಳ ಶ್ರೀ ಮಾರಿಯಮ್ಮ ಕ್ಷೇತ್ರ– 3 ಲಕ್ಷ, ಅಜ್ಜಿಬೆಟ್ಟು ಗ್ರಾಮದ  ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಅಜ್ಜಿಬೆಟ್ಟು – 8 ಲಕ್ಷ, .ಬಂಟ್ವಾಳ ಕಸ್ಬಾ ಗ್ರಾಮದ ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದ– 3 ಲಕ್ಷ, ಕನ್ಯಾನ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರ ಕಣಿಯೂರು– 8 ಲಕ್ಷ, ಸಜಿಪನಡು ಗ್ರಾಮದ ಶ್ರೀ ಷಣ್ಮುಖಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ– 10 ಲಕ್ಷ, .ಚೆನ್ನೈತ್ತೋಡಿ ಗ್ರಾಮದ ಶ್ರೀಗುರು ನಿತ್ಯಾನಂದ ಸ್ವಾಮೀಜಿ ಮಂದಿರ ಆಶ್ರಮ ಮಂದಿರ– 2 ಲಕ್ಷ, .ಸಂಗಬೆಟ್ಟು ಗ್ರಾಮದ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ ಮುಗೇರುಗುಡ್ಡೆ– 5 ಲಕ್ಷ .ಕೊಳ್ನಾಡು ಗ್ರಾಮದ ಕಟ್ಟತ್ತಿಲ ಮಹಮ್ಮಾಯಿ ದೇವಿ ಹಾಗೂ ಪರಿವಾರ ದೈವಗಳ ದೈವಸ್ಥಾನ– 5 ಲಕ್ಷ ರೂ ತೆಂಕಕಜೆಕಾರು ಗ್ರಾಮದ ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನ– 7 ಲಕ್ಷ, .ಬಿ.ಮೂಡ ಗ್ರಾಮದ ಶ್ರೀ ರಾಮಭಕ್ತಾಂಜನೇಯ ಭಜನಾ ಮಂದಿರ ಪಲ್ಲಮಜಲು– 5 ಲಕ್ಷ, .ಬಾಳ್ತಿಲ ಗ್ರಾಮ ಕುದುರೆಬೆಟ್ಟು ಮಹಮ್ಮಾಯಿ,ಪಂಜುರ್ಲಿ ಪರಿವಾರ ದೈವಸ್ಥಾನ– 8 ಲಕ್ಷ, .ಕಡೇಶಿವಾಲ್ಯ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ– 5 ಲಕ್ಷ, ನರಿಕೊಂಬು ಗ್ರಾಮದ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನ– 25 ಲಕ್ಷ, ಮಂಚಿ ಗ್ರಾಮದ ಶ್ರೀ ಸುಳ್ಯ ಮಹಾದೇವ ದೇವಸ್ಥಾನ– 5 ಲಕ್ಷ ಇದರಲ್ಲಿ ಸೇರಿವೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.