ವಿಟ್ಲ

ಆತ್ಮನಿಷ್ಠ ಸಂಸ್ಕೃತಿಯ ಸೊಬಗು ದತ್ತತತ್ತ್ವದಲ್ಲಿದೆ: ಒಡಿಯೂರು ಶ್ರೀ

ಆತ್ಮನಿಷ್ಠ ಸಂಸ್ಕೃತಿಯ ಸೊಬಗು ದತ್ತತತ್ತ್ವದಲ್ಲಿದೆ. ಅದೊಂದು ಸುಂದರವಾದ ಸಂಸ್ಕೃತಿ. ದತ್ತ ತತ್ತ್ವವೇ ಸಮರಸ ತತ್ತ್ವ. ಸಮರಸ ತತ್ತ್ವವೇ ಆತ್ಮ ತತ್ತ್ವ. ಆತ್ಮತತ್ತ್ವವನ್ನು ಅರಿತರೆ ಎಲ್ಲರಲ್ಲೂ ಭಗವಂತನಿದ್ದಾನೆ ಎಂಬ ಅರಿವು ನಮಗಾಗುತ್ತದೆ. ಆಗ ನಮ್ಮಿಂದ ಯಾವುದೇ ದುಷ್ಕರ್ಮಗಳು ಆಗುವುದಕ್ಕೆ ಸಾಧ್ಯವಿಲ್ಲ. ಅದೊಂದು ಅನುಭಾವದ ವಿಚಾರವಾಗಿದೆ ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಂದೇಶ ನೀಡಿದರು.

ಜಾಹೀರಾತು

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ದತ್ತ ಜಯಂತಿ ಮಹೋತ್ಸವಶ್ರೀ ದತ್ತ ಮಹಾಯಾಗ ಸಪ್ತಾಹದ ಎರಡನೆಯ ದಿನ ಜರಗಿದ ಶ್ರೀ ಗುರುಚರಿತಾಮೃತ ಪ್ರವಚನದ ವೇಳೆ ಅವರು ದಿವ್ಯ ಉಪಸ್ಥಿತಿಯನ್ನು ಕರುಣಿಸಿ ಸಂಸ್ಕಾರದಿಂದ ಸಂಸ್ಕೃತಿ ಉಳಿಯಲು ಸಾಧ್ಯ. ಸುಸಂಸ್ಕೃತ ಸಮಾಜ ನಿರ್ಮಾಣವಾಗಬೇಕಾದರೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಉಜ್ಜುವುದರಿಂದ ಉಜ್ವಲತೆ ಹೆಚ್ಚಾಗುತ್ತದೆ. ಇಹದಿಂದ ಪರಕ್ಕೆ ದಾರಿ ತೋರುವವನೇ ಗುರು. ಅವರೇ ಭಗವಾನ್ ದತ್ತಾತ್ರೇಯರು. ಭೋಗದ ಬದುಕು ಶಾಶ್ವತವಲ್ಲ. ಆಧ್ಯಾತ್ಮಿಕ ಜೀವನವೇ ಶಾಶ್ವತ ಎಂದು ಜಗತ್ತಿಗೆ ಸಾರಿದವರು. ಮರಳುವ ಮುನ್ನ ಅರಳಬೇಕು. ಆಗಲೇ ಜೀವನದ ಸಾರ್ಥಕತೆ ಎಂದರು

ಗುರುತತ್ತ್ವದ ಪ್ರವಚನವನ್ನುಗೈದ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ಬುದ್ಧಿಯ ಮಟ್ಟಕ್ಕೆ ಮನಸ್ಸನ್ನು ತರುವುದು. ಮನಸ್ಸಿನ ಮಟ್ಟದಿಂದ ಬುದ್ಧಿಯ ಮಟ್ಟಕ್ಕೆ ಹೋಗುವುದಕ್ಕೆ ದಾರಿ ತೋರಿಸುವವನೇ ಗುರು. ಜಗತ್ತಿನಲ್ಲಿರುವ ಎಲ್ಲವನ್ನು ಗುರುವಾಗಿಸಿಕೊಂಡವರು ಶ್ರೀ ಗುರುದತ್ತಾತ್ರೇಯರು. ಇದರಿಂದ ನಮಗೂ ಪಾಠ ಇದೆ. ಯಾವುದನ್ನು ಜೀವನದಲ್ಲಿ ಅಂಟಿಸಿಕೊಳ್ಳದೇ ತನ್ನಷ್ಟಕ್ಕೆ ತಾನೇ ಜೀವಿಸುವುದು ಉತ್ತಮ. ಇನ್ನೊಬ್ಬರೊಂದಿಗೆ ಬೆರೆಯುವ ಗುಣ ನಮ್ಮಲ್ಲಿರಬೇಕು. ಬದುಕುವುದಕ್ಕಾಗಿ ಉಣ್ಣಬೇಕೆ ಹೊರತು ಉಣ್ಣುವುದಕ್ಕಾಗಿ ಬದುಕುವುದಲ್ಲ. ಸಮುದ್ರದಂತೆ ಬದುಕಿನಲ್ಲಿ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವವರು ನಾವಾಗಬೇಕು ಎಂದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ