ಬಂಟ್ವಾಳ: ಸಮಾಜಸೇವೆ, ಶೈಕ್ಷಣಿಕ ಚಟುವಟಿಕೆ ಸಹಿತ ಹಲವು ರಂಗಗಳಲ್ಲಿ ಗುರುತಿಸಿಕೊಂಡಿದ್ದ ಇರಾ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ತಿರುವಾಲೆ ಮೋನಪ್ಪ ಪೂಜಾರಿ (85) ಶುಕ್ರವಾರ ನಿಧನ ಹೊಂದಿದರು.
ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅವರು ಹೊಂದಿದ್ದರು. ನಡುಕೆಂಜಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಪಂಚಾಯಿತಿಯ ಸದಸ್ಯರಾಗಿ ಹಲವು ಸಮಾಜಸೇವಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.