ಭಾನುವಾರ ಬೆಳಗ್ಗೆ ಮಂಗಳೂರಿನ ಕದ್ರಿ ಪಾರ್ಕ್ ಬಳಿಯ ಅಂಗಡಿಯೊಂದರ ಬಳಿ ಹೆಲ್ಮೆಟ್ ಒಳಗೆ ಹುದುಗಿಸಿಟ್ಟ ಮಹಿಳೆಯ ರುಂಡ ಮತ್ತು ಗೋಣಿಚೀಲದೊಳಗೆ ದೇಹದ ಇತರ ಭಾಗಗಳಿರುವುದು ಪತ್ತೆಯಾಗಿದ್ದು, ಕದ್ರಿ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಮಹಿಳೆಯನ್ನು ಹತ್ಯೆಗೈದು, ಆಕೆಯ ದೇಹವನ್ನು ಛಿದ್ರಗೊಳಿಸಿ ಈ ಕೃತ್ಯ ಎಸಗಿರುವುದಾಗಿ ಶಂಕಿಸಲಾಗಿದ್ದು, ಬಳಿಕ ಗೋಣಿಚೀಲದಲ್ಲಿ ದೇಹದ ಭಾಗ ತುಂಬಿಸಿ ಅಂಗಡಿಯೊಳಗೆ ಇಟ್ಟಿರಬಹುದು ಎಂದು ಸಂಶಯಿಸಲಾಗಿದೆ. ಕದ್ರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.