ಕಳೆದ ವಾರ ಇವರ ತಲೆಯ ಸರ್ಜರಿ, ನಿನ್ನೆ ಹೆಂಡತಿಯನ್ನು ಕಳೆದುಕೊಂಡ ದುಃಖ. ಆದರೂ ದಾಮೋದರ್ ನಾಯಕ್ ಕಲ್ಯಾಣ್ ಪುರ್ ಓಟು ಮಾಡುವುದನ್ನು ಮರೆಯಲಿಲ್ಲ.
ಅವರಿಗೀಗ ೯೦ ವರ್ಷ. ಕಳೆದ ವಾರ ತಲೆಯಲ್ಲಿ ಆಪರೇಷನ್ ಮಾಡಿಸಿದ್ದಾರೆ. ಯಶಸ್ವಿ ಆಪರೇಷನ್ ನ ನಂತರ ಮನೆಗೆ ಬಂದ ಎರಡು ದಿನದಲ್ಲೇ ಅವರ ಜೊತೆಗೆ ಕುಟುಂಬದವರಿಗೆಲ್ಲ ಆಘಾತಕಾರಿ ಸುದ್ದಿ. ಅದೇನೆಂದರೆ ದಾಮೋದರ ನಾಯಕ್ ಪತ್ನಿ ಶಾಂತಿ ನಾಯಕ್ (79) ಸಾವನ್ನಪ್ಪಿದ್ದಾರೆ. ಆದರೆ ಆ ನೋವನ್ನೆಲ್ಲ ನುಂಗಿಕೊಂಡು, ಮತದಾನ ನಮ್ಮ ಹಕ್ಕು ಎಂದು ಚಲಾಯಿಸಲು ಮಂಗಳೂರಿನ ಮತಗಟ್ಟೆಗೆ ಬಂದು ಮತ ಚಲಾಯಿಸಿದವರು ನಾಯಕ್. ಗಾಂಧಿನಗರ ಬೂತ್ (ಮಣ್ಣಗುಡ್ಡೆ)ಯಲ್ಲಿ ಅವರು ಓಟು ಹಾಕಿ ಮನೆಯಲ್ಲೇ ಕುಳಿತುಕೊಂಡು ಟೀಕೆ ಮಾಡುತ್ತಾ ಓಟು ಹಾಕದವರು ತಲೆತಗ್ಗಿಸುವಂತೆ ಮಾಡಿದ್ದಾರೆ.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…