ಬಂಟ್ವಾಳ

ಡ್ರೀಮ್ ಮೇಕರ್ಸ್ ಅಲೆತ್ತೂರಿನಿಂದ ಬಡ ಕುಟುಂಬಕ್ಕೆ ಶೌಚಾಲಯ ವ್ಯವಸ್ಥೆ

ಬಂಟ್ವಾಳ: ಬಂಟ್ವಾಳ ತಾಲೂಕು ಬಿ. ಮೂಡ ಗ್ರಾಮದ‌ ಬಿ.ಸಿರೋಡು ಬಳಿಯ ಅಲೆತ್ತೂರು ಎಂಬಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಡ್ರೀಮ್ ಮೇಕರ್ಸ್ ಅಲೆತ್ತೂರು’ ಎಂಬ ಸಮಾಜಮುಖಿ ಯುವಕರ ತಂಡದಿಂದ ಬಡ ಕುಟುಂಬವೊಂದಕ್ಕೆ ಶೌಚಾಲಯ ವ್ಯವಸ್ಥೆಯನ್ನು ಒದಗಿಸಲಾಯಿತು.

ಜಾಹೀರಾತು

ಗ್ರಾಮದ ಬಡಕುಟುಂಬಗಳ ನೆರವಿಗಾಗಿ ಹುಟ್ಟಿಕೊಂಡ ಸಂಘಟನೆಯಾಗಿರುವ ಡ್ರೀಮ್ ಮೇಕರ್ಸ್, ಈಗಾಗಲೇ ಹಲವಾರು ಬಡಕುಟುಂಬಗಳಿಗೆ ಆರ್ಥಿಕ ಮತ್ತು ಶ್ರಮದಾನದಂತಹ ಸಹಕಾರವನ್ನು ನೀಡಿದೆ. ಈಗ ನಂದರಬೆಟ್ಟುವಿನ ಗೀತ ಎಂಬುವರ ಮನೆಗೆ‌ ಶೌಚಾಲಯವನ್ನು ಕಟ್ಟಿಕೊಟ್ಟಿದೆ. ಗೀತ ಮತ್ತು ಅವರ ಮಗಳು ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದು ಇದಕ್ಕೆ ಸರಿಯಾದ ಶೌಚಾಲಯದ ವ್ಯವಸ್ಥೆ ಇರಲಿಲ್ಲ. ಇದೀಗ ಈ ಕುಟುಂಬಕ್ಕೆ ತಂಡದ ಸಹಕಾರದಿಂದ ಶೌಚಾಲಯ ನಿರ್ಮಾಣವಾಗಿದೆ. ಡ್ರೀಮ್ ಮೇಕರ್ಸ್ ತಂಡದ ಅಧ್ಯಕ್ಷ ಪವನ್ ಕೋಟ್ಯಾನ್ ಸಹಿತ ಪ್ರಮುಖರು ಹಾಗೂ ಪದಾಧಿಕಾರಿಗಳು ಹಸ್ತಾಂತರ ಸಂದರ್ಭ ಉಪಸ್ಥಿತರಿದ್ದರು.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ