ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ, ಶಾಖಾ ಗ್ರಂಥಾಲಯ ಬಂಟ್ವಾಳದ ವತಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ನಡೆಯಲಿದೆ. ಇದರ ಅಂಗವಾಗಿ 18ರಂದು ಭಾನುವಾರ ಪುಸ್ತಕ ಪ್ರದರ್ಶನ ಮತ್ತು ಗ್ರಂಥಾಲಯ ಸದಸ್ಯತ್ವ ಆಂದೋಲನ ನಡೆಯಲಿದೆ. ಬಿ.ಸಿ.ರೋಡಿನ ತಾಪಂ ಎಸ್.ಜಿ.ಎಸ್.ವೈ. ತರಬೇತಿ ಕೇಂದ್ರದಲ್ಲಿ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯುವುದು. ಪುಸ್ತಕ ಪ್ರದರ್ಶನವನ್ನು ಸಂಸದ ನಳಿನ್ ಕುಮಾರ್ ಉದ್ಘಾಟಿಸುವರು. ಕಾರ್ಯಕ್ರಮವನ್ನು ಸಚಿವ ಯು.ಟಿ.ಖಾದರ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ವಹಿಸುವರು ಎಂದು ಬಂಟ್ವಾಳ ಶಾಖಾ ಗ್ರಂಥಾಲಯದ ಸಹಾಯಕ ಗ್ರಂಥಪಾಲಕಿ ನಮಿತಾ ತಿಳಿಸಿದ್ದಾರೆ.
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…