ಬಂಟ್ವಾಳ

ಸಾಧಕ ಕ್ರೀಡಾಪಟುಗಳಿಗೆ ತಾಲೂಕು ಪಂಚಾಯತ್ ನಿಂದ ಟೀ ಶರ್ಟ್

ಬಂಟ್ವಾಳ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ಕ್ರೀಡೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ,130  ವಿದ್ಯಾರ್ಥಿ ಗಳಿಗೆ ತಾ.ಪಂ. ಉಚಿತವಾಗಿ ನೀಡುವಕ್ರೀಡಾ ಸಮವಸ್ತ್ರ ವಿತರಣಾ ಕಾರ್ಯಕ್ರಮ ತಾ.ಪಂ.ನ‌ ಎಸ್.ಜಿ.ಅರ್.ಎಸ್.ವೈ. ಸಭಾಂಗಣದಲ್ಲಿ ನಡೆಯಿತು. ‌ಅದ್ಯಕ್ಷ ತೆ ವಹಿಸಿದ ಸಮವಸ್ತ್ರ ವಿತರಿಸ ಮಾತನಾಡಿದ ತಾ.ಪಂ.ಅದ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ ಪಾಠದ ಜೊತೆ ಕ್ರೀಡೆಗೂ ಸಮಾನವಾದ ಪ್ರಾಶಸ್ತ್ಯ ನೀಡಿದಾಗ ಕ್ರೀಡೆಯಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಜಾಹೀರಾತು

ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿ ಕ್ರೀಡೆ ಗೆ ಸಹಕಾರ ನೀಡುವ ನಿಟ್ಟಿನಲ್ಲಿ ತಾ.ಪಂ.ವಿಶೇಷ ಮುತುವರ್ಜಿಯಿಂದ ಸಮವಸ್ತ್ರ ನೀಡುವ ಮೂಲಕ ಉತ್ತೇಜನ ನೀಡುತ್ತಿದೆ. ಕ್ರೀಡೆ ಯಲ್ಲಿ ಭಾಗವಹಿಸುವ ಸ್ಪರ್ಧಾ  ಮನೋಭಾವ ಬೆಳೆಸಿಕೊಳ್ಳಿ, ಸೋಲು ಗೆಲುವಿನ ಚಿಂತೆ , ಕೀಳರಿಮೆ ಬೇಡ ಎಂದರು. ಕೌಶಲಗಳನ್ನು ಬಳಸಿಕೊಂಡು ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಮುಂದುವರಿಯಬೇಕು ಎಂದರು. ಸ್ಥಾಯಿ ಸಮಿತಿ ಅದ್ಯಕ್ಷೆ ಧನಲಕ್ಮೀ ಸಿ ಬಂಗೇರ, ತಾ.ಪಂ.ಇ.ಒ.ರಾಜಣ್ಣ ಯುವಜನ ಸೇವಾ ಅಧಿಕಾರಿ ನವೀನ್ ಪಿ.ಎಸ್. ಉಪಸ್ಥಿತರಿದ್ದರು. ತಾಲೂಕು ದೈಹಿಕ ಶಿಕ್ಷಕರ ಸಂಘದ ಅದ್ಯಕ್ಷ ಚಿನ್ನಪ್ಪ ಸ್ವಾಗತಿಸಿ ವಂದಿಸಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ