ಬಂಟ್ವಾಳ

ಭಾರತ್ ಬಂದ್ ಆರಂಭ, ಕೆಲವೆಡೆ ಬಸ್ ಗಳಿಗೆ ಕಲ್ಲು

ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಬೆಳಗ್ಗೆಯೇ ಬಸ್ ಗಳಿಗೆ ಕಲ್ಲು ಹೊಡೆಯುವ ಮೂಲಕ ಬಂದ್ ಆಚರಣೆಯ ಬಿಸಿ ಮುಟ್ಟಿಸಲಾಯಿತು.

PHOTO: KISHORE PERAJE

ಮಂಗಳೂರಿನ ಜ್ಯೋತಿ ವೃತ್ತದಲ್ಲಿ ಟೈಯರುಗಳನ್ನು ಸುಟ್ಟರೆ, ಮಾಣಿ ಬಳಿಯೂ ಟೈಯರುಗಳಿಗೆ ಬೆಂಕಿ ಕೊಟ್ಟು ಬಂದ್ ಸಂಕೇತವನ್ನು ನೀಡಲಾಯಿತು. ಕುಲಶೇಖರದಲ್ಲೂ ಬೆಳ್ಳಂಬೆಳಗ್ಗೆ ಟೈಯರುಗಳನ್ನು ಸುಡಲಾಗಿದೆ.

ಜಾಹೀರಾತು

ಕದ್ರಿ ಶಿವಭಾಗ್ ಎಂಬಲ್ಲಿ ಹೋಟೆಲ್ ಒಂದಕ್ಕೆ ಕಲ್ಲೆಸೆದರೆ, ದೂರದೂರುಗಳಿಂದ ಬರುವ ಬಸ್ಸುಗಳಿಗೆ ಕಲ್ಲೆಸೆಯುವ ಪ್ರವೃತ್ತಿ ಈ ಬಂದ್ ನಲ್ಲೂ ಕಂಡುಬಂತು.

ಬಲ್ಮಠ ಬಳಿ ಖಾಸಗಿ ಬಸ್ಸಿಗೆ ಕಲ್ಲು ತೂರಾಟ ನಡೆಸಿದರೆ, ಮಂಗಳೂರಿಗೆ ಬೆಂಗಳೂರಿನಿಂದ ಆಗಮಿಸುವ ಕೆ.ಎಸ್.ಆರ್.ಟಿ.ಸಿ. ಐರಾವತ ಬಸ್ ಗೆ ಬಿ.ಸಿ.ರೋಡ್ ಬಳಿಯ ತುಂಬ್ಯ ಜಂಕ್ಷನ್ ಬಳಿ ಅಪರಿಚಿತರು ಕಲ್ಲೆಸೆದಿದ್ದಾರೆ.

PHOTO: KISHORE PERAJE

ಇರಾ ಕಾಂಗ್ರೆಸ್ ಪ್ರತಿಭಟನೆ

ಭಾರತ ದೇಶದಾದ್ಯಂತ  ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಬಾರತ್ ಬಂದ್ ಗೆ ಬೆಂಬಲಿಸುವ ನಿಟ್ಟಿನಿಂದ ರಝಾಕ್ ಕುಕ್ಕಾಜೆ ನೇತೃತ್ವದಲ್ಲಿ ಇರಾ ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಅನಿಲ್ ಕುಮಾರ್ ಸೂತ್ರಬೈಲ್ (ಅಧ್ಯಕ್ಷರು ಇರಾ ವಲಯ ಕಾಂಗ್ರೆಸ್ ) ಝಾಹಿರ್ ಸಂಪಿಲ (ಯುವ ಕಾಂಗ್ರೆಸ್ ಕಾರ್ಯದರ್ಶಿ ಮಂಗಳೂರು ವಿ.ಕ್ಷೇತ್ರ) ಎ.ಜೆ ಪರಪ್ಪು (ಯೂತ್ ಕಾಂಗ್ರೆಸ್) ಪ್ರತಾಪ್ ಕರ್ಕೆರಾ( ಯುವ ಕಾಂಗ್ರೆಸ್ ಕಾರ್ಯದರ್ಶಿ) ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡ ಪ್ರತಿಭಟಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.