ಜೇಸೀ ವಲಯ 15ರ ಮಧ್ಯಂತರ ಸಮ್ಮೇಳನದ ಅಂಗವಾಗಿ ಜೇಸೀ ಐ ಬೆಳ್ತಂಗಡಿ ಮಂಜುಶ್ರೀ ಆತಿಥ್ಯದಲ್ಲಿ ಬಂಟರ ಭವನ ಬೆಳ್ತಂಗಡಿಯಲ್ಲಿ ಜೂನ್ 19ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಈ ಸಂದರ್ಭ ಜೋಡುಮಾರ್ಗ ಜೇಸಿಗೆ ಹಲವು ಪ್ರಶಸ್ತಿಗಳು ಲಭಿಸಿದವು.
ಜೇಸಿ ಐ ಜೋಡುಮಾರ್ಗ ನೇತ್ರಾವತಿ ಯ ಅಧ್ಯಕ್ಷರಾದ ಸವಿತಾ ನಿರ್ಮಲ್ ಅತ್ಯುತ್ತಮ ಘಟಕಾಧ್ಯಕ್ಷೆ ವಿನ್ನರ್ ಅವಾರ್ಡ್ ಹಾಗೂ ಅತ್ಯುತ್ತಮ ಹೊಸ ಘಟಕ ವಿನ್ನರ್ ಅವಾರ್ಡ್ ಪ್ರಶಸ್ತಿ, ತರಬೇತಿ ವಿಭಾಗ, ಕಾರ್ಯಕ್ರಮ ವಿಭಾಗ , ಸಮುದಾಯ ಅಭಿವೃದ್ಧಿ ಯೋಜನೆಗಳಿಗೆ ವಿಶೇಷ ಪುರಸ್ಕಾರ ಹಾಗೂ ಮೀಡಿಯಾ ಕವರೇಜ್ ತೃತೀಯ. ಹರಿಪ್ರಸಾದ್ ಕುಲಾಲ್ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದರು.
ಮುಖ್ಯ ಅತಿಥಿಗಳಾಗಿ ಜೇಸೀ ರಾಷ್ಟ್ರೀಯ ಬೆಳವಣಿಗೆ ಹಾಗೂ ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಚಂದ್ರಶೇಖರ್ ನಾಯರ್, ನಿಕಟ ಪೂರ್ವ ವಲಯಾಧ್ಯಕ್ಷರಾದ ಸಂತೋಷ್, ವಲಯ ನಿರ್ದೇಶಕ ಕಾರ್ತಿಕೇಯ ಮಧ್ಯಸ್ಥ ಉಪಸ್ತಿತರಿದ್ದರು. ಜೇಸಿ ಐ ಜೋಡುಮಾರ್ಗ ನೇತ್ರಾವತಿ ಯ ಉಪಾಧ್ಯಕ್ಷರಾದ ರವೀಂದ್ರ ಕುಕ್ಕಾಜೆ, ಜಯರಾಜ್ ಎಸ್ ಬಂಗೇರ, ಹರಿಪ್ರಸಾದ್ ಕುಲಾಲ್ , ಜೇಸಿರೆಟ್ ವಿಭಾಗದ ಅಧ್ಯಕ್ಷೆ ಗಾಯತ್ರಿ ಲೋಕೇಶ್, ಮಲ್ಲಿಕಾ, ಯುವ ಜೇಸಿ ದರ್ಶಿತ್ ಹಾಗೂ ಜೇಸೀ ಪೂರ್ವಾಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ ಮುಂಡಾಜೆ, ಉಮೇಶ್ ನಿರ್ಮಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಜರಿದ್ದರು. ವಲಯ 15ರ ವಲಯಾಧ್ಯಕ್ಷರಾದ ರಾಕೇಶ್ ಕುಂಜೂರ್ ಪ್ರಶಸ್ತಿ ಪ್ರದಾನ ನೆರವೇರಿಸಿದರು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…