ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಎರಡನೇ ಬಾರಿ ಸ್ಪರ್ಧೆಗಿಳಿದಿರುವ ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ನಾನಾ ದೈವಸ್ಥಾನ ಹಾಗೂ ನೇಮಗಳಿಗೆ ಭೇಟಿ ನೀಡಿದ್ದಾರೆ.
ಅಲೆತ್ತೂರು ಪಂಜುರ್ಲಿ ವಾರ್ಷಿಕ ನೇಮೋತ್ಸವ, ಎರ್ಮಾಳ ಪದವು ಕಲ್ಲುರ್ಟಿ ದೈವಸ್ಥಾನದ ಕೋಲೋತ್ಸವ, ಪೆರಾಜೆ ಶ್ರೀ ಗುಡ್ಡೆಚಾಮುಂಡಿ ವಲಸರಿ ಜಾತ್ರೆಯ, ನಿನ್ನಿಪಡ್ಪುವಿನ ಬ್ರಹ್ಮ ಮುಗೇರ್ಕಳ ದೈವಸ್ಥಾನದ ನೇಮೋತ್ಸವಕ್ಕೂ ಅವರು ಭೇಟಿ ನೀಡಿದರು. ಕಡಂಬು ಶ್ರೀ ಕಲ್ಲುರ್ಟಿ ದೈವಸ್ಥಾನದ ವಾರ್ಷಿಕ ಜಾತ್ರೆಯ ಭೇಟಿ ಸಂದರ್ಭ ಮಾಜಿ ಶಾಸಕರಾದ ಕೆ.ಪದ್ಮನಾಭ ಕೊಟ್ಟಾರಿ, ಪುರಸಭಾ ಸದಸ್ಯರಾದಗೋವಿಂದ ಪ್ರಭು, ಪ್ರಮುಜಖರಾದ ದಿನೇಶ್ ಅಮ್ಟೂರು, ಗಣೇಶ್ ರೈ ಮಾಣಿ, ರವೀಶ್ ಶೆಟ್ಟಿ ಮತ್ತು ಸ್ಥಳೀಯ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
(more…)