ಬಂಟ್ವಾಳ ವಲಯ ಕ್ಯಾಥೊಲಿಕ್ ಸಭಾದ ವತಿಯಿಂದ ತಾಲೂಕಿನ ಕಳ್ಳಿಗೆ ಗ್ರಾಮದ ಸಚಿವ ಬಿ.ರಮಾನಾಥ ರೈ ಮನೆಯಲ್ಲಿ ಸೋಮವಾರ ಹೊಸ ವರ್ಷದ ಸಂಭ್ರಮಾಚರಣೆ ನಡೆಯಿತು.
ಹೊಸ ವರ್ಷವು ಎಲ್ಲರಿಗೂ ಸುಖ, ಶಾಂತಿ, ಸಹಭಾಳ್ವೆ ಹಾಗೂ ಸಾಮರಸ್ಯವನ್ನು ನೀಡುವಂತಾಗಲಿ ಎಂದು ಸಚಿವ ಬಿ.ರಮಾನಾಥ ರೈ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಚಿವರ ಪತ್ನಿ ಧನಭಾಗ್ಯ ರೈ, ಕ್ಯಾಥೊಲಿಕ್ ಸಭಾದ ಬಂಟ್ವಾಳ ವಲಯ ಅಧ್ಯಕ್ಷ ಸ್ಟ್ಯಾನಿ ಲೊಬೋ, ಕಾರ್ಯದರ್ಶಿ ಫ್ರಾನ್ಸಿಸ್ ಡೆಸಾ, ವಲಯ ಸ್ತ್ರೀ ಹಿತ ಸಂಚಾಲಕಿ ಲೀನಾ ಮೊಂತೇರೊ, ಅಗ್ರಹಾರ ವಲಯದ ಹಿತಸಂಚಾಲಕಿ ಮೀರಾ ರೋಡ್ರಿಗಸ್, ತಾಲೂಕು ಪಂಚಾಯತ್ ಅಕ್ರಮ ಸಕ್ರಮ ಸಮಿತಿ ಸದಸ್ಯೆ ಫ್ಲೋಸಿ ಡಿಸೋಜ, ತಾಪಂ ಸದಸ್ಯ ಎಫ್ರಂ ಸಿಕ್ವೇರಾ, ಕಳ್ಳಿಗೆ ಗ್ರಾಪಂ ಸದಸ್ಯ ವಿಜಯ ಡಿಸೋಜ, ಮೇರಮಜಲು ಗ್ರಾಪಂ ಸದಸ್ಯ ಫ್ರಾನ್ಸಿಸ್ ಮೆಂಡೋನ್ಸಾ, ಪಿ.ಜೆ.ರೋಗ್ರಿಗಸ್, ಡೆನ್ಜಿಲ್ ನೊರೋನ್ಹ ಮೊದಲಾದವರು ಉಪಸ್ಥಿತರಿದ್ದರು.