ಮಂಚಿಯಲ್ಲಿ ಗ್ರಾಮ ಪಂಚಾಯತ್ ಸ್ಥಾನವೊಂದಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಡಿ.20ರಂದು ಮಿನಿ ವಿಧಾನಸೌಧದಲ್ಲಿ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಮೊಯಿದು ಕುಂಞ 463 ಮತ ಪಡೆದು ಜಯಶಾಲಿಯಾಗಿದ್ದಾರೆ.
ಸಮೀಪದ ಪ್ರತಿಸ್ಪರ್ಧಿ ಪ್ರಭಾಕರ ಶೆಟ್ಟಿ 356 ಮತಗಳನ್ನು ಗಳಿಸಿದರು. 21 ಮತಗಳು ತಿರಸ್ಕೃತಗೊಂಡಿವೆ. ಚುನಾವಣಾಧಿಕಾರಿ ಆಹಾರ ಶಾಖೆ ಉಪತಹಶೀಲ್ದಾರ್ ವಾಸು ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೆ.ಮೋಹನ ಕುಮಾರ್ ನೇತೃತ್ವದಲ್ಲಿ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ನಡೆಯಿತು.
ವಿಜೇತ ಅಭ್ಯರ್ಥಿ ಮೊಯಿದು ಕುಂಞ ಅವರನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಭಿನಂದಿಸಿ ಶುಭ ಹಾರೈಸಿದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಆಲಿ ನೇತೃತ್ವದಲ್ಲಿ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು. ಬಳಿಕ ಮಂಚಿಯಲ್ಲಿ ವಿಜಯೋತ್ಸವ ನಡೆಯಿತು.
ಸಿಸಿ ಕ್ಯಾಮರಾ ಅಳವಡಿಸಿ, ಅಪರಿಚಿತರಿಗೆ ಬಾಗಿಲು ತೆಗೆಯಬೇಡಿ – ಪೊಲೀಸರ ಸಲಹೆ (more…)