ಫರಂಗಿಪೇಟೆ

ಫರಂಗಿಪೇಟೆ ಮರ್ಡರ್ ಪ್ರಕರಣ: ನಾಲ್ವರ ಬಂಧನ

www.bantwalnews.com

 

ಜಾಹೀರಾತು

ಅ. 26ರಂದು ರಾತ್ರಿ ಫರಂಗಿಪೇಟೆಯಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಮಂಗಳೂರು ಡಿಸಿಐಬಿ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಮುಹಮ್ಮದ್ ಹುಸೈನ್ ಯಾನೆ ಮುನ್ನಾ (26), ನೌಫಾಲ್ ಯಾನೆ ಟೊಪ್ಪಿ ನೌಫಾಲ್ (25), ಮುಹಮ್ಮದ್ ಆಶಿಫ್ ಯಾನೆ ಮೂಸಾ ಅಚ್ಚಿ(27), ಇಬ್ರಾಹಿಂ ಯಾನೆ ದೊಡ್ಡ ಪುತ್ತಾ(29) ಬಂಧಿತ ಆರೋಪಿಗಳು.

ಜಾಹೀರಾತು

ಜಾಹೀರಾತು

 

 

ಜಾಹೀರಾತು

 

 

 

ಜಾಹೀರಾತು

ಅ. 26ರಂದು ರಾತ್ರಿ ಫರಂಗಿಪೇಟೆಯ ಪೊಲೀಸ್ ಔಟ್‌ಪೋಸ್ಟ್ ಬಳಿ ನಡೆದ ಗ್ಯಾಂಗ್‌ವಾರ್‌ಗೆ ಝಿಯಾದ್ ಮತ್ತು ಫಯಾಝ್ ಎಂಬವರು ಕೊಲೆಗೀಡಾಗಿದ್ದರು. ಕ್ವಾಲಿಸ್ ಹಾಗೂ ಟೆಂಪೊದಲ್ಲಿ ಬಂದಿದ್ದ ಹಂತಕರು ತಲವಾರು ದಾಳಿ ನಡೆಸಿದ್ದರು. ಈ ಘಟನೆಯಿಂದ ಅನೀಸ್, ಫೈಝಲ್ ಮತ್ತು ಮುಷ್ತಾಕ್ ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳ ಹಿಂದೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಉಡುಪಿಯಲ್ಲಿ ಶುಕ್ರವಾರ ಡಿಸಿಐಬಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ತಲೆಮರೆಸಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಹೆಚ್ಚಿನ ವಿಚಾರಣೆಗಾಗಿ ಬಂಟ್ವಾಳ ನಗರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.  ಡಿಸಿಐಬಿ ಇನ್‌ಸ್ಪೆಕ್ಟರ್ ಅಮಾನುಲ್ಲ, ಪುತ್ತೂರು ಟ್ರಾಫಿಕ್ ಎಸ್ಸೈ ಜಗದೀಶ್ ರೆಡ್ಡಿ,  ಬಂಟ್ವಾಳ ಟ್ರಾಫಿಕ್ ಎಸ್ಸೈ ಯಲ್ಲಪ್ಪ, ಸಿಬ್ಬಂದಿಗಳಾದ ಸಂಜೀವ ಪುರುಷ, ಉದಯ ರೈ, ಲಕ್ಷಣ, ಇಕ್ಬಾಲ್, ಪ್ರವೀಣ್, ತಾರನಾಥ, ಪಳನಿ, ವಾಸುನಾಯ್ಕ, ಚಾಲಕ ವಿಜಯ ಗೌಡ,  ವಾಸು ನಾಯ್ಕ ಬಂಟ್ವಾಳ ಅವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ