ಅಂಬಾಸೆಡರ್ ಕಾರಿನಲ್ಲಿ ಮೂರು ದನದ ಕರುಗಳನ್ನು ಹಿಂಸ್ಮಾತ್ಮಕ ರೀತಿಯಲ್ಲಿ ಕೊಂಡೊಯ್ಯುತ್ತಿದ್ದ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಉಕ್ಕುಡ ದರ್ಬೆ ಎಂಬಲ್ಲಿ ಬಂಧಿಸಿದ್ದಾರೆ.
ವಿಟ್ಲ ಪಡ್ನೂರು ಗ್ರಾಮದ ಕೋಡಪದವು ನಿವಾಸಿ ಮಾಂಕು ಮೂಲ್ಯ(60) ಹಾಗೂ ಪಂಜಿಗದ್ದೆ ನಿವಾಸಿ ಮಹಮ್ಮದ್(53) ಬಂಧಿತ ಆರೋಪಿಗಳು. ಇವರಿಂದ ಮೂರು ಕರುಗಳು, ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಇವರು ಅಡ್ಯನಡ್ಕ ಕಡೆಯಿಂದ ವಿಟ್ಲ ಕಡೆಗೆ ಅಂಬಾಸೆಡರ್ ಕಾರಿನಲ್ಲಿ ಅಕ್ರಮವಾಗಿ ಎರಡು ಹೆಣ್ಣು ಹಾಗೂ ಒಂದು ಗಂಡು ಕರುಗಳನ್ನು ಕಾರಿನಲ್ಲಿ ಅಮಾನುಷ ರೀತಿಯಲ್ಲಿ ಕೊಂಡೊಯ್ಯುತ್ತಿದ್ದುದಾಗಿ ಆಪಾದಿಸಲಾಗಿದ್ದು, ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸರ ತಂಡ ತಡೆದು ಬಂಧಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…