ಲಯನ್ಸ್ ಕ್ಲಬ್ ಬಂಟ್ವಾಳದಲ್ಲಿ ದೀಪಾವಳಿ ಸಂಭ್ರಮಾ ನಡೆಯಿತು. ಕಾರ್ಯಕ್ರಮದಲ್ಲಿ ಗೊಪೂಜೆ, ತುಳಸಿಪೂಜೆ, ಲಕ್ಷ್ಮೀಪೂಜೆ ಹಾಗೂ ಬಲೀಂದ್ರ ಪೂಜೆ ನಡೆಸಲಾಯಿತು. ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಜಗದೀಶ ಎಡಪಾಡಿತ್ತಾಯ ವಹಿಸಿದರು.
ಪ್ರಧಾನ ಅತಿಥಿಯಾಗಿ ಸಂಸ್ಕಾರರ ಭಾರತಿಯ ಕರ್ನಾಟಕ ದಕ್ಷಿಣದ ಕಾರ್ಯದರ್ಶಿ ಆದರ್ಶ ಗೋಖಲೆ ಹಾಗೂ ಲಯನ್ಸ್ ಜಿಲ್ಲಾ ದೀಪಾವಳಿ ಕೋರ್ಡಿನೇಟರ್ ಸ್ವರೂಪ ಶೆಟ್ಟಿ ಭಾಗವಹಿಸಿದರು.
ಲಯನೆಸ್ ಅಧ್ಯಕ್ಷಿ ಚಿತ್ರಾ ಎಡಪಾಡಿತ್ತಾಯ, ಕಾರ್ಯದರ್ಶಿಗಳಾದ ರಾಮಕೃಷ್ಣ ರಾವ್, ಸುಜಾತ ರವಿಶಂಕರ್ ಕೋಶಾಧಿಕಾರಿಗಳಾದ ರೋಶಿತಾಶ್ವ ಹಾಗೂ ವಸಂತಿ ಎಲ್. ಶೆಟ್ಟಿ, ವಲಯಾಧ್ಯಕ್ಷ ಶಿವಾನಂದ ಬಾಳಿಗಾ, ಐ.ಪಿ.ಪಿ. ಲಕ್ಷ್ಮಣ್ ಕುಲಾಲ್ ಉಪಸ್ಥಿತರಿದ್ದರು.
ಕ್ಲಬ್‌ನ ಸರ್ವಿಸ್ ಕೋರ್ಡಿನೇಟರ್ ದಾಮೋದರ ಬಿ.ಎಮ್., ಶ್ರೀನಿವಾಸ ಪೂಜಾರಿ, ಉಪಾದ್ಯಕ್ಶರಾದ ಸುದಾಕರ್ ಆಚಾರ್, ಉಮೇಶ ಆಚಾರ್, ಪುಷ್ಪರಾಜ್ ಶೆಟ್ಟಿ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಪಾಣೆಮಂಗಳೂರಿನ ನೇತ್ರಾವತಿ ನದಿಯಲ್ಲಿ ಇಬ್ಬರ ಜೀವ ಉಳಿಸಿದ ಅರ್ಚಕರಾದ ಪ್ರಕಾಶ ಮರಾಠೆಯವರನ್ನು ಸನ್ಮಾನಿಸಲಾಯಿತು. ಒಬ್ಬರಿಗೆ ಕೃತಕ ಕಾಲಿನ ಜೋಡಣೆಗೆ ಧನಸಹಾಯ ಹಾಗೂ ಇನ್ನೊಬ್ಬರಿಗೆ ಕಿಡ್ನಿ ಚಿಕಿತ್ಸೆಗಾಗಿ ಧನಸಹಾಯ ನೀಡಲಾಯಿತು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…