ವಾಮದಪದವು

ಶಾರದಾ ವಿಗ್ರಹ ಪ್ರತಿಷ್ಠೆ, ಧ್ವಜಾರೋಹಣ


ಬಂಟ್ವಾಳ ತಾಲೂಕಿನ ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಮತ್ತು ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಶನಿವಾರ ಆರಂಭಗೊಂಡ ೧೫ ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಕಾರ್ಯಕ್ರಮಕ್ಕೆ ಇಲ್ಲಿನ ದೈವನರ್ತಕ ಲೋಕೇಶ ನಲಿಕೆ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಆರಂಭದಲ್ಲಿ ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನ ಬಳಿ ಭಕ್ತರು ಒಟ್ಟು ಸೇರಿ ಶಾರದಾ ಮಾತೆ ವಿಗ್ರಹವನ್ನು ಮೆರವಣಿಗೆ ಮೂಲಕ ಕರೆತಂದರು.

ಜಾಹೀರಾತು

ಇಲ್ಲಿನ ಶಾರದಾ ನಗರದಲ್ಲಿ ನಿರ್ಮಿಸಿದ ಆಕರ್ಷಕ ಮಂಟಪದಲ್ಲಿ ಸ್ಥಳೀಯ ತಂತ್ರಿ ರಾಜಾರಾಮ ಭಟ್ ಮತ್ತು ಅರ್ಚಕ ಹರೀಶ ಭಟ್ ರಾಯಿ ಇವರ ಪೌರೋಹಿತ್ಯದಲ್ಲಿ ವಿಗ್ರಹ ಪ್ರತಿಷ್ಠೆ ನೆರವೇರಿಸಿದರು. ಇದೇ ವೇಳೆ ಕೊಯಿಲ ಸಿದ್ಧಿಶ್ರೀ ಮಹಿಳಾ ಭಜನಾ ಮಂಡಳಿ ಸದಸ್ಯರಿಂದ ಭಜನೆ ಸೇವೆ ನಡೆಯಿತು.
ಟ್ರಸ್ಟಿನ ಅಧ್ಯಕ್ಷ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು, ಸಮಿತಿ ಅಧ್ಯಕ್ಷ ಸವಿನ್ ಕುಮಾರ್ ಜೈನ್, ಪ್ರಮುಖರಾದ ವಸಂತ ಕುಮಾರ್ ಅಣ್ಣಳಿಕೆ, ರಮಾನಾಥ ರಾಯಿ, ಡೊಂಬಯ ಬಿ.ಅರಳ, ವಾಸುದೇವ ಸಪಲ್ಯ, ಸಂತೋಷ್ ಕುಮಾರ್ ಬೆಟ್ಟು, ಜಯಂತ ಪೂಜಾರಿ, ಲಕ್ಷ್ಮೀಧರ ಶೆಟ್ಟಿ ಅರಳ, ಜಗಧೀಶ ಆಳ್ವ ಅಗ್ಗೊಂಡೆ, ಸುಂದರ ಭಂಡಾರಿ, ಮಧುಕರ ಬಂಗೇರ, ಸತೀಶ ಪೂಜಾರಿ, ಬಾಡಬೆಟ್ಟು, ವಿಶ್ವನಾಥ ಗೌಡ, ಶರತ್ ಕುಮಾರ್ ಕೊಯಿಲ, ದಿನೇಶ ಸುವರ್ಣ, ಪ್ರಸನ್ನ ಕುಮಾರ್ ಶೆಟ್ಟಿ, ಉಮೇಶ ಹೋರಂಗಳ, ಸಂತೋಷ ಅಂಚನ್, ಬಾಬು ಪ್ರಶಾಂತ ಶೆಟ್ಟಿ, ರಾಜೇಶ ಜೈನ್, ಆನಂದ ಬುರಾಲ್, ಸಂತೋಷ್ ಬಂಗೇರ, ಅಶ್ವತ್ಥ್ ಉದ್ದೊಟ್ಟು, ಮಿಥುನ್ ಶೆಟ್ಟಿ, ಸದಾನಂದ ಗೌಡ, ಸಂತೋಷ್ ಕುಮಾರ್ ಚೌಟ, ಹರ್ಷೇಂದ್ರ ಹೆಗ್ಡೆ, ಹರೀಶ ಆಚಾರ್ಯ ರಾಯಿ, ರಾಮಚಂದ್ರ ಶೆಟ್ಟಿಗಾರ್, ಉಮೇಶ ಡಿ.ಎಂ.ಅರಳ, ರಾಘವ ಅಮೀನ್, ರವೀಂದ್ರ ಪೂಜಾರಿ, ಪರಮೇಶ್ವರ ಪೂಜಾರಿ, ಚಂದ್ರಶೇಖರ ಗೌಡ, ಕುಸುಮಾ, ಹೇಮಾ ಎಚ್.ರಾವ್, ದಾಮೋದರ ಬಂಗೇರ ಮತ್ತಿತರರು ಇದ್ದರು.

ಅಪರಾಹ್ನ ಬಳಿಕ ಕೊಯಿಲ ಶಾರದಾ ಯಕ್ಷ ಕಲಾ ತಂಡದಿಂದ ’ಯಕ್ಷ ಸಂಕೀರ್ತನೆ’, ರಾಯಿ ಶ್ರೀ ಮಹಾಲಿಂಗೇಶ್ವರ ಬಾಲ ಯಕ್ಷಗಾನ ಕೇಂದ್ರ ತಂಡದಿಂದ ’ಶ್ರೀಕೃಷ್ಣ ಲೀಲೆ, ಕಾಳಿಂಗ ಮರ್ದನ, ಕಂಸ ವಧೆ’ ಯಕ್ಷಗಾನ ಬಯಲಾಟ ನಡೆಯಿತು.

ಶೋಭಾಯಾತ್ರೆ:
ಭಾನುವಾರ ಬೆಳಿಗ್ಗೆ ಗಂಟೆ ೮.೩೦ರಿಂದ ಭಜನೆ ಮತ್ತು ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, 11ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಸಂಸ್ಕಾರ ಭಾರತಿ ಜಿಲ್ಲಾ ಸಂಚಾಲಕ ಸೂರ್ಯನಾರಾಯಣ ಭಟ್ ಕಶೆಕೋಡಿ, ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಮಾಜಿ ಸಚಿವ, ವಿಧಾನಪರಿಷತ್ ಸದಸ್ಯರಾಧ ಬಿ.ಜೆ.ಪುಟ್ಟಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಬಿಲ್ಲವ ಮಹಾಮಂಡಲ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್ ಮತ್ತಿತರ ಗಣ್ಯರು ಭಾಗವಹಿಸುವರು.

ಜಾಹೀರಾತು

ಮಧ್ಯಾಹ್ನ ದೇವರಿಗೆ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು, ಅಪರಾಹ್ನ ಬಳಿಕ ಭಜನೆ ಮತ್ತು ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ’ಯಕ್ಷ-ನಾಟ್ಯ-ಹಾಸ್ಯ-ವೈಭವ’ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ’ಕೃಷ್ಣಾರ್ಪಣಂ’, ನಾಟ್ಯ ವೈಭವ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೭ಗಂಟೆಗೆ ಶಾರದಾ ಮಾತೆಯ ವೈಭವದ ಶೋಭಾಯಾತ್ರೆ ಹೊರಟು, ಕೊಯಿಲ, ಅಣ್ಣಳಿಕೆ, ರಾಯಿ ಪೇಟೆಯಾಗಿ ಬಳಿಕ ಕೊಯಿಲ ಕುದ್ಮಾಣಿ ಹೊಳೆಯಲ್ಲಿ ವಿಗ್ರಹ ಜಲಸ್ತಂಭನ ನಡೆಯಲಿದೆ.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ