ವಾಸ್ತವ

ಟೆಕ್ನಾಲಜಿ ಕ್ರಿಮಿನಲ್ ಗಳ ಸೃಷ್ಟಿಸುತ್ತಿದೆಯಾ?

  • ಹರೀಶ ಮಾಂಬಾಡಿ

ಬ್ಲೂವೇಲ್ ಗೇಮ್ ಇತ್ತೀಚಿನ ದಿನಗಳಲ್ಲಿ ದೊಡ್ಡ ಸದ್ದೇ ಮಾಡಿತು. ಅದಕ್ಕಿಂತಲೂ ಮೊದಲು ಹದಿಹರೆಯದವರ ಕೈಯಲ್ಲಿ ಮೊಬೈಲ್ ದುಷ್ಕೃತ್ಯಕ್ಕೂ ಪ್ರೇರೇಪಿಸಿತು. ಇನ್ನೂ ತಾರುಣ್ಯಕ್ಕೆ ಕಾಲಿಡುವ ಮಕ್ಕಳು ಮುಗ್ಧತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ನಿಮಗೆ ಅನಿಸುತ್ತಿದೆಯೇ, ತಂತ್ರಜ್ಞಾನ ಕ್ರಿಮಿನಲ್ ಗಳ ಸೃಷ್ಟಿ ಮಾಡುತ್ತಿದೆಯಾ?

ಜಾಹೀರಾತು

ವನೆಂದರೆ ಎಲ್ಲರಿಗೂ ಭಯ!

ಜಾಹೀರಾತು

ಅವನನ್ನು ಕೊಂದೇ ಬಿಡಬೇಕು ಎಂಬಷ್ಟು ಭಯ. ಆದರೆ ಯಾರಿಗೂಅವನನ್ನು ಮುಟ್ಟುವ ಧೈರ್ಯ ಇರುವುದಿಲ್ಲ. ಅವನು ಮಾಡೋಆಟಾಟೋಪಗಳಿಗೆ ಲೆಕ್ಕವೇ ಇಲ್ಲ. ಎಲ್ಲರೂ ಅವನಿಗೆ ಹೆದರುವವರೇ.

ಅಷ್ಟಕ್ಕೂಅವನು ಯಾರು?

ಶಾಲೆಯೊಂದರ ಪಿಯುಸಿ ವಿದ್ಯಾರ್ಥಿ ಆತ.

ಜಾಹೀರಾತು

ಹೆಸರಿಗಷ್ಟೇ ವಿದ್ಯಾರ್ಥಿ.  ಯಾರನ್ನೂಕೇರ್ ಮಾಡದಷ್ಟು ಅಹಂಕಾರಿ. ಅವನಂಥವನೇ ಆ ಶಾಲೆಯ ಮಾಲೀಕ. ಆ ಮಾಲೀಕ ಹೇಳಿದಂತೆ ತಲೆಯಾಡಿಸೋ ಪ್ರಿನ್ಸಿಪಾಲ್. ಜೊತೆಗೊಂದಿಷ್ಟು ಪ್ರಾಮಾಣಿಕ, ಅಪ್ರಾಮಾಣಿಕ ಲೆಕ್ಚರರುಗಳು.  ಹೀಗಾಗಿ ಅವನು ಮಾಡಿದ್ದೇ ಆಟ. ಅವನ ಕಂಡರೆ ಎದುರಿಗಷ್ಟೇ ಸಲಾಂ.  ಸರಿದು ಹೋದರೆ ಕ್ಯಾಕರಿಸಿ ಥೂ ಎಂದು ಉಗಿಯುವಷ್ಟು ರೋಷ.

ಬರೋದೆಲ್ಲ ಅತ್ಯಾಧುನಿಕ ಕಾರಿನಲ್ಲಿ. ಎರಡೂ ಕೈಗಳ ಪಕ್ಕ ಚೆಲ್ಲು ಚೆಲ್ಲಾಗಿ ವರ್ತಿಸುವ ಹುಡುಗಿಯರು. ಮಾದಕ ದ್ರವ್ಯಗಳೆಲ್ಲ ಅವನಕೈಸೇರೋಕೆ ಹೆಚ್ಚು ಹೊತ್ತು ಬೇಡ. ಹೀಗಾಗಿ ಅವನದ್ದು ಬಿಂದಾಸ್ ವ್ಯಕ್ತಿತ್ವ. ಹೀಗಿರುವಾಗಲೇ ಅವನನ್ನು ಪೆನ್ಸಿಲ್ ನಿಂದ ತಿವಿದು, ತಿವಿದು ಕೊಲ್ಲಲಾಗುತ್ತದೆ. ಹಾಗಾದರೆ ಕೊಂದವರಾದರೂ ಯಾರು?

**************

ಜಾಹೀರಾತು

ಇದು ತಮಿಳು ಚಿತ್ರ ‘ಪೆನ್ಸಿಲ್’ನ ಕಥಾಹಂದರ. ಇಲ್ಲಿ ಕೊಲೆಯಾಗುವ ಹುಡುಗನ ಪಾತ್ರ, ಹಾಗೂ ಕೊಲೆಯಾಗುವ ಸನ್ನಿವೇಶ, ಇದಕ್ಕೆಯಾರು ಕಾರಣರಿರಬಹುದು ಎಂದು ನೋಡುವವರ ಉಸಿರು ಬಿಗಿಹಿಡಿಯುವಂತೆ ಪಾತ್ರಗಳು ಸೃಷ್ಟಿಯಾಗುತ್ತಾ ಹೋಗುತ್ತದೆ. ಕೊಲೆಯಾಗುವ ಹುಡುಗ ಸಣ್ಣಪುಟ್ಟ ಆಸಾಮಿಯೇನಲ್ಲ. ದೊಡ್ಡ ಸ್ಟಾರ್ ಓರ್ವನ ಮುದ್ದಿನ ಮಗ. ಶಾಲೆಯವರಿಗೆಲ್ಲಾ ಸ್ಟಾರ್ ಒಬ್ಬನ ಮಗತಮ್ಮ ಶಾಲೆಗೆ ಬರುತ್ತಾನೆ ಎಂಬುದೇ ಹೆಮ್ಮೆಯ ವಿಷಯ. ಹೀಗಾಗಿ ಆತ ಮಾಡಿದ್ದೆಲ್ಲವನ್ನೂ ಸಹಿಸಿಕೊಳ್ಳುತ್ತಾರೆ.

ಆದರೂ ಅವನನ್ನು ಎದುರಿಸಲು ಹುಡುಗನೊಬ್ಬ ಇರುತ್ತಾನೆ. ಇಬ್ಬರಿಗೂ ಜಗಳ ಆಗುತ್ತಲೇ ಇರುತ್ತದೆ. ಕೊನೆಗೆ ಕೊಲೆಯಾಗುವಹುಡುಗನ ಪರವಾಗಿಯೇ ಎಲ್ಲರೂ ನಿಲ್ಲುತ್ತಾರೆ. ಅವನ ಬಗ್ಗೆ ಇನ್ನೋರ್ವ ಹುಡುಗನಷ್ಟೇ ಅಲ್ಲ, ಟೀಚರ್ ಓರ್ವಳಿಗೂ ಕೊಂದು ಬಿಡುವಂಥದ್ವೇಷವಿರುತ್ತದೆ. ಅದು ಯಾಕೆ?

ಕಥೆ ಇಂಟ್ರಸ್ಟಿಂಗ್ ಆಗಿರೋದೇ ಅಲ್ಲಿ.

ಜಾಹೀರಾತು

ಈ ಸ್ಟಾರ್ ಪುತ್ರ ಸಾಮಾನ್ಯನೇನಲ್ಲ. ಬೇಕು ಬೇಕಾದದ್ದನ್ನೆಲ್ಲ ಪಡೆಯುವ ಸಾಮರ್ಥ್ಯ ಇದ್ದರೂ ಕೈಗೆ ಸಿಗದೇ ಇದ್ದುದನ್ನೂ ಪಡೆಯುವಹಠ. ಹೀಗಿರುವಾಗಲೇ ಕ್ರಿಮಿನಲ್ ಐಡಿಯಾವೊಂದು ತಲೆಗೆ ಹೋಗುತ್ತದೆ. ಲೇಡಿಸ್ ಟಾಯ್ಲೆಟ್ ಒಳಗೆ ಕ್ಯಾಮರಾ ಫಿಕ್ಸ್ ಮಾಡುತ್ತಾನೆಈ ಮಾನಗೇಡಿ. ಅಲ್ಲಿಂದ ಶುರು ಬ್ಲಾಕ್ ಮೇಲ್. ಟೀಚರ್ ಹಾಗೂ ಆಕೆಯ ಸ್ನೇಹಿತನಿಗಿರುವ ಸಂಪರ್ಕ ಈತನಿಗೆ ಗೊತ್ತಾಗುತ್ತದೆ. ಹಾಗೆಯೇ ಈತನಿಗೆ ಬೇಕು ಬೇಕಾದ ಹುಡುಗಿಯರನ್ನು ಮೊಬೈಲ್ ನಲ್ಲಿ ಸಂಗ್ರಹವಾದ ಅವರ ಚಿತ್ರಗಳನ್ನು ತೋರಿಸಿದುರುಪಯೋಗಪಡಿಸುತ್ತಾನೆ. ಇದಕ್ಕೆಲ್ಲ ಕಾರಣ ಲೇಡಿಸ್ ಟಾಯ್ಲೆಟ್’ನಲ್ಲಿ ಈತನಿಟ್ಟ ಕ್ಯಾಮೆರಾದಲ್ಲಿ ಸಂಗ್ರಹವಾದ ದೃಶ್ಯಗಳು. ಹೀಗೆಆತ ಹಲವರನ್ನು ಬ್ಲಾಕ್ಮೇಲ್ ಮಾಡಿರುತ್ತಾನೆ. ಕೊಲ್ಲುವವರು ಯಾರು ಎಂಬುದು ಚಿತ್ರದ ತಿರುಳು. ಸಿನಿಮಾದ ಕೊನೆಗೆ ಆತನನ್ನುಕೊಂದವರ ಪತ್ತೆ ಹಚ್ಚಲಾಗಿ, ಶಿಕ್ಷೆ ಕೊಡಲಾಗುತ್ತದೆ ಎಂಬಲ್ಲಿಗೆ ಕಥೆ ಮುಗಿಯುತ್ತದೆ.

ಈ ಕಥೆಯಂತೆ ಇರೋ ಇನ್ನೊಂದು ಕಥೆ     ದೃಶ್ಯಂ ಚಿತ್ರದ್ದು. ಅಲ್ಲೂ ಕೊಲೆಯಾದ ಹುಡುಗ ಮಾಡಿದ ಕೆಟ್ಟ ಕೆಲಸವೇನೆಂದರೆ, ಹುಡುಗಿಯೊಬ್ಬಳು ಬಾತ್ ರೂಂನಲ್ಲಿದ್ದಾಗ ಮೊಬೈಲ್ ಕ್ಯಾಮರಾ ಮೂಲಕ ದೃಶ್ಯ ಸೆರೆಹಿಡಿದು ಆಕೆಯನ್ನು ಬ್ಲಾಕ್ಮೇಲ್ ಮಾಡುವಪರಿಣಾಮ ಸಾವಿಗೀಡಾಗುವುದು. ತುಂಬಾ ಸೂಕ್ಷ್ಮ ವಿಚಾರವನ್ನು ಅಷ್ಟೇ ಗಂಭೀರವಾಗಿ ಈ ಚಿತ್ರ ಹಿಡಿದಿದಿರುವುದು ಈಗ ಲೋಕಪ್ರಸಿದ್ಧ.

**************

ಜಾಹೀರಾತು

ನಾನೀಗ ಮಾಡಿದ್ದು ಚಿತ್ರವಿಮರ್ಶೆ. ಈಗ ಹೇಳಿ ಇಂಥದ್ದು ನಿಮ್ಮ ಜೀವನದಲ್ಲಿ ಬಂದಿರುತ್ತದೆಯೇ? ಮೇಲೆ ಹೇಳಿದ ಸಿನಿಮಾಗಳಷ್ಟೇಅಲ್ಲ, ಹಲವು ಚಲನಚಿತ್ರಗಳೂ ಇಂಥ ಸನ್ನಿವೇಶದ ಸಂದಿಗ್ಧ ಪರಿಸ್ಥಿತಿಯನ್ನು ಬಯಲು ಮಾಡಿವೆ. ಆದರೆ ಮತ್ತೆ ಮತ್ತೆ ಇಂಥ ಅಪರಾಧಘಟಿಸುತ್ತಲೇ ಇವೆ. ಹಾಗಾದರೆ ಪೆನ್ಸಿಲ್ ಅಥವಾ ದೃಶ್ಯಂ ಚಿತ್ರಗಳ ಖಳಪಾತ್ರಗಳು ಇರುವುದು ನಿಜ ಎಂದೇ ಆಯಿತು.

ಹೌದು. ಇಂಥ ಪಾತ್ರಗಳು ನಮ್ಮ ಕಣ್ಣ ಮುಂದೆಯೇ ಓಡಾಡಿಕೊಂಡಿರುತ್ತವೆ. ನಮಗೆ ಗೊತ್ತೇ ಆಗೋದಿಲ್ಲ. ಗೊತ್ತಾದರೂ ಏನೂ ಮಾಡುವಂತಿರುವುದಿಲ್ಲ ಎಂಬುದು ಸತ್ಯ.  ಕೆಲವೊಮ್ಮೆ ಕೆಲ ದುಷ್ಟ ಶಕ್ತಿಗಳ ವಿರುದ್ಧ ಇಡೀ ಸಮಾಜವೇ ಅಸಹಾಯಕವಾಗಿ ನಿಲ್ಲುವಂಥ ಪರಿಸ್ಥಿತಿ  ನಿರ್ಮಾಣವಾಗುವುದು ವಿಡಂಬನೆಯೇನಲ್ಲ.

ಅಂಥ ಸನ್ನಿವೇಶಕ್ಕೆ ನಾವೂ ಕಾರಣಕರ್ತರಾಗುತ್ತೇವೆ.

ಜಾಹೀರಾತು

ಕಳೆದ ವರ್ಷ ವಿವಿಯೊಂದರ ಲೇಡಿಸ್ ಹಾಸ್ಟೆಲ್ ನೊಳಗೆಯೇ ಕ್ಯಾಮೆರಾ ಇಟ್ಟ ವಿಚಾರ ಬಯಲಾಗಿ, ಆ ಕೃತ್ಯ ಮಾಡಿದ ಆರೋಪಿ ಸೆರೆಯಾದ ವಿಚಾರಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡದ್ದು ಗೊತ್ತೇ ಇದೆ.  ಈಗ ಹೇಳಿಪೆನ್ಸಿಲ್ ಚಲನಚಿತ್ರದ ಹುಡುಗನಿಗೂ  ವಿವಿಯ  ಲೇಡಿಸ್ ಹಾಸ್ಟೆಲ್’ನಲ್ಲಿ ಕ್ಯಾಮರಾ ಇಟ್ಟ ಬಗ್ಗೆ ಪ್ರಕಟವಾದ ವರದಿಯ ವಿಚಾರಕ್ಕೂ ಸ್ವಲ್ಪವಾದರೂ ಸಾಮ್ಯತೆ ಇದೆಯೇ ಇಲ್ಲವೇ? ದೃಶ್ಯಂ ಚಿತ್ರದ ಸನ್ನಿವೇಶಕ್ಕೂ ವಿವಿ ಘಟನೆಗೂ ಸಾಮ್ಯತೆ ಇದೆಯೇಇಲ್ಲವೇ?

ಇದ್ದೇ ಇದೆ.

ಇದಕ್ಕೆಲ್ಲ ಕಾರಣ ಏನು ಎಂಬ ಹುಡುಕಾಟ ನಮ್ಮೊಳಗೆ ನಡೆಯಲೇಬೇಕು. ಇಂದು ಅಂತರ್ಜಾಲ ಎಷ್ಟರ ಮಟ್ಟಿಗೆ ವ್ಯಾಪಿಸಿದೆ ಎಂದರೆಇದೊಂದು ಮಾಹಿತಿಯ ಸುನಾಮಿಯಂತೆ ಕಂಡರೂ ಅಚ್ಚರಿಯಿಲ್ಲ. ಆದರೆ ಎಲ್ಲವೂ ನಮಗೆ ಬೇಕು. ಅದರಲ್ಲಿ ಯಾವುದು ಬೇಡಎಂಬುದನ್ನು ಕಂಡುಕೊಳ್ಳುವ, ವಿಮರ್ಶಿಸುವ ಬುದ್ಧಿಯೂ ನಮಗೆ ಬೇಕು. ಹೀಗಾಗಿಯೇ ಜ್ಞಾನಪ್ರಸಾರ ಮಾಡಬೇಕಾದ ಕ್ಯಾಂಪಸ್’ಗಳಲ್ಲಿಇಂದು ಅಶ್ಲೀಲ ಚಿತ್ರ ಪ್ರಸಾರ ಮಾಡುವ ಕ್ರಿಮಿನಲ್’ಗಳೂ ಕಾಣ ಸಿಗುತ್ತಾರೆ.

ಜಾಹೀರಾತು

ಕ್ಯಾಮರಾ ಇಟ್ಟದ್ದಂತೂ ನಿಜ ಎಂದಾದರೆ ಶಿಕ್ಷೆ ಯಾರಿಗೆ ಆಗಬೇಕು? ಪರಿವರ್ತನೆ ಯಾವ ವಿಭಾಗದಲ್ಲಿ ಆಗಬೇಕು ಎಂಬುದು ಯೋಚಿಸಬೇಕಾದ ವಿಚಾರ.

ಶಾಲಾ ಕಾಲೇಜುಗಳೆಲ್ಲ ಡಿಜಿಟಲೈಸೇಶನ್ ಆಗುವ ಈ ಸಂದರ್ಭ ಮಕ್ಕಳಿಗೆ ನೀತಿ ಪಾಠ ಹೇಳುವ ಕಾರ್ಯ ಆಗಬೇಕು ಎಂಬುದು ಹಳೇ ಮಾತು. ಮುಖ್ಯವಾಗಿ ಆಗಬೇಕಿರುವುದು ಹೆತ್ತವರಿಗೆ ನೈತಿಕತೆಯ ಪಾಠ.

ನೀವು ಗಮನಿಸಿ. ಎಷ್ಟು ಮಂದಿ ಪೋಷಕರು/ಹೆತ್ತವರು ಶಾಲೆಗಳಲ್ಲಿ ನಡೆಯುವ ಶಿಕ್ಷಕ–ರಕ್ಷಕ  ಸಂಘದ ಸಭೆಗಳಲ್ಲಿ ಭಾಗವಹಿಸಿದ್ದೀರಿ?

ಜಾಹೀರಾತು

ಲಕ್ಷಗಟ್ಟಲೆ ಡೊನೇಶನ್ ಪಡೆಯೋ ಕೆಲ ಶಾಲೆಗಳು ಈಗ ಮೀಟಿಂಗ್ ಬರೋದು ಕಡ್ಡಾಯ ಎಂದು ಮಾಡಿವೆ. ಹೀಗಾಗಿಕಾಟಾಚಾರಕ್ಕಾಗಿಯಾದರೂ ಹೆತ್ತವರು ಮೀಟಿಂಗ್’ಗೆ ಬಂದು ಹೋಗುತ್ತಾರೆ. ಆದರೆ ನಮ್ಮ ಮಕ್ಕಳು ಶಾಲೆಯಲ್ಲಿ ಏನು ಮಾಡುತ್ತಾರೆಎಂದು ನೋಡಲು ಹೋಗೋ ಹೆತ್ತವರು ಎಷ್ಟು ಮಂದಿ ಎಂಬುದರ ಮೇಲೆ ಸಮಾಜದ ಭವಿಷ್ಯದ ಪ್ರಜೆಗಳ ನಿರ್ಮಾಣ ಯಾವ ದಿಕ್ಕಿನಲ್ಲಿಸಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಇವತ್ತು ಲೇಡಿಸ್ ಹಾಸ್ಟೆಲ್’ಗಳಲ್ಲಿ ಕ್ಯಾಮೆರಾ ಇಟ್ಟವರು ನಾಳೆ ಹೋಟೆಲ್ ರೂಮುಗಳಲ್ಲೂ ಕ್ಯಾಮೆರಾ ಇಡಬಹುದು. ಈಗಾಗಲೇ ಡ್ರಗ್ಸ್ಮಹಾನಗರವಷ್ಟೇ ಅಲ್ಲ, ಹಳ್ಳಿಗಳಿಗೂ ತನ್ನ ಕಬಂಧ ಬಾಹುಗಳನ್ನು ಚಾಚಿದೆ ಎಂಬುದಕ್ಕೆ ಪ್ರತಿ ದಿನ ಪತ್ರಿಕೆಗಳ ಕ್ರೈಂ ಪುಟಗಳಲ್ಲಿ ಬರುವಸುದ್ದಿಗಳೇ ಸಾಕ್ಷಿ.

ಆರಂಭದಲ್ಲಿ ಉದಾಹರಿಸಿದ ಹುಡುಗನ ಪಾತ್ರದಲ್ಲಿ ಕರುಣೆ ಎಂಬ ಲವಲೇಶವೂ ಇಲ್ಲ. ಅಷ್ಟೊಂದು ಕಠಿಣ ಹೃದಯಿ ಮತ್ತು ಕ್ರೂರಮನೋಸ್ಥಿತಿಯ ಪಾತ್ರವದು. ಸಾಮಾನ್ಯವಾಗಿ ಅಪರಾಧ ಮಾಡುವ ವ್ಯಕ್ತಿಗೆ ತಾನು ಮಾಡುವುದು ತಪ್ಪು ಎಂಬ ಪಾಪಪ್ರಜ್ಞೆಯಾದರೂಮೂಡುತ್ತದೆ ಎಂಬ ಮಾತಿದೆ. ಆದರೆ ಇಂದು ಯುವಜನರೇ ಕ್ರಿಮಿನಲ್’ಗಳಾಗುತ್ತಿದ್ದಾರೆ ಹಾಗೂ ಸಿಕ್ಕಿ ಹಾಕಿಕೊಂಡಾಗಲೂ ತಾನುಮಾಡಿದ್ದೇ ಸರಿ ಎಂಬ ಧೋರಣೆಯಲ್ಲಿ ವರ್ತಿಸುತ್ತಾರೆ ಎಂದಾದರೆ ಎಲ್ಲೋ ತಪ್ಪಾಗಿದೆ ಎಂಬುದು ಯೋಚಿಸಬೇಕಾದ ವಿಚಾರ.

ಜಾಹೀರಾತು

ಬೇಸರದ ಸಂಗತಿ ಎಂದರೆ ಇವತ್ತು ಕ್ರೈಂ ಸಿನಿಮಾಗಳ ಕಥೆಗಾರರಿಗೆ, ಸಂಭಾಷಣೆಗಾರರಿಗೆ ನಾವಿಂದು ವಸ್ತುವಾಗುತ್ತಿದ್ದೇವೆ. ಇದುಕಥೆಯಲ್ಲ, ವಾಸ್ತವ.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.