ಬಂಟ್ವಾಳ ತಾಲೂಕಿನ ಕಾವಳಮುಡೂರು ಗ್ರಾಮದ ಕಳಾಯಿ ಚಂದ್ರಮೌಳಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪ್ರತಿ ಶನಿವಾರ ದನದ ಹಾಲು ಪೂರೈಸಲು ಪತ್ರಕರ್ತ ಶ್ರೀನಿವಾಸ ನಾಯಕ್ ಇಂದಾಜೆ ಮುಂದಾಗಿದ್ದಾರೆ.
ಮಕ್ಕಳ ಾರೋಗ್ಯಕ್ಕೆ ಹಾಲು ಉತ್ತಮವಾಗಿದ್ದು, ಸರಕಾರದ ವತಿಯಿಂದ ಈಗಾಗಲೇ ವಾರದ ಮೂರು ದಿನ ಹಾಲು ಪೂರೈಸಲಾಗುತ್ತದೆ. ಇದರ ಜೊತೆ ಶನಿವಾರವೂ ನೆಲ್ಲಿಗುಡ್ಡೆಯಲ್ಲಿರುವ ತಮ್ಮ ಫಾರ್ಮ್ ಹೌಸ್ ನ ಡೈರಿಯಿಂದ ಪೂರೈಸಲು ಶ್ರೀನಿವಾಸ ನಾಯಕ್ ನಿರ್ಧರಿಸಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನದಂದು ಶಾಲಾ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಂದಿನ ದಿನಗಳಲ್ಲಿ ಆಸುಪಾಸಿನ ಶಾಲಾ ಮಕ್ಕಳಿಗೂ ಹಾಲು ಪೂರೈಸಲಾಗುವುದು ಎಂದು ಅವರು ಹೇಳಿದರು. ಒಟ್ಟು 80 ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಸಂದರ್ಭ ಹಿಂದುಸ್ಥಾನಿ ಗಾಯಕಿ ವಿಭಾ ಶ್ರೀನಿವಾಸ ನಾಯಕ್, ಸಮಾಜ ಸೇವಕ ಬಲವಿಂದರ್ ಸಿಂಗ್, ಗ್ರಾಪಂ ಸದಸ್ಯ ಜಯಂತ ಪ್ರಭು, ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್, ಬಾಲಕೃಷ್ಣ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)