ಭವ್ಯ ದೇಗುಲವಾದ ನರಹರಿ ಸದಾಶಿವ ದೇವಸ್ಥಾನದ ಹಳೇ ಪೌಳಿಯನ್ನು ತೆರವುಗೊಳಿಸುವ ಶ್ರಮಸೇವೆ ಸೆ.೩ರಂದು ಭಾನುವಾರ ಬೆಳಗ್ಗೆ 9ರಿಂದ ಸಂಜೆ 6ವರೆಗೆ ನಡೆಯಲಿದೆ.
ಹಲವು ವಿಸ್ಮಯ ಮತ್ತು ತನ್ನ ಅನುಪಮ ಪ್ರಕೃತಿ ಸೌಂದರ್ಯದಿಂದ ಆಸ್ತಿಕರನ್ನು , ನಾಸ್ತಿಕರನ್ನು ಆಕರ್ಷಿಸುವ ಶ್ರೀ ನರಹರಿ ಪರ್ವತ ಸದಾಶಿವ ದೇವಾಲಯದ ಪುನರ್ ನಿರ್ಮಾಣದ ಕಾರ್ಯದಲ್ಲಿ ಕೈಜೋಡಿಸಬೇಕಾಗಿದ್ದು, ಪಾಣೆಮಂಗಳೂರು, ಅಮ್ಟೂರು, ಗೋಳ್ತಮಜಲು ವ್ಯಾಪ್ತಿಯಲ್ಲಿರುವ ಸಂಘಟನೆಗಳ ಯುವಕ ಯುವತಿಯರು ಶ್ರಮ ಸೇವೆಯ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ಶ್ರೀ ಸದಾಶಿವನ ಸೇವೆ ಮಾಡಬೇಕೆಂದು, ಈ ಸಂದರ್ಭ ಸರಳ ಊಟೋಪಚಾರ ವ್ಯವಸ್ಥೆಯೂ ಇದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಪ್ರಶಾಂತ್ ಮಾರ್ಲ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಆತ್ಮರಂಜನ ರೈ ಉತ್ಸವ ಸಮಿತ ಅಧ್ಯಕ್ಷ ಎ.ರುಕ್ಮಯ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…