ಅವತಾರ ಪುರುಷನಾದರೂ ಸಾಮಾನ್ಯನಂತೆ ಬದುಕಿದ ದೇವ ಮಾನವ ಶ್ರೀ ಕೃಷ್ಣ ಎಂದು ಬಂಟ್ವಾಳ ತಾಲೂಕು ಕಚೇರಿಯಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಅಳಿಕೆ ಸತ್ಯಸಾಯಿ ಪ್ರೌಢಶಾಲೆಯ ಅಧ್ಯಾಪಕ ಅಶೋಕ್ ಕುಮಾರ್ ಹೇಳಿದರು.
ಕೃಷ್ಣನ ಲೀಲೆ ವಿನೋದಗಳು ನಾನಾ ರೀತಿಯಲ್ಲಿತ್ತು ಎಂದು ಅವರು ವಿವರಿಸಿದರು.
ಸಿಬ್ಬಂದಿ ನವ್ಯಾ ಪ್ರಾರ್ಥಿಸಿದರು. ಉಪತಹಶೀಲ್ದಾರ್ ಸೀತಾರಾಮ, ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ ಆಹಾರ ಶಾಖೆಯ ಶ್ರೀ ನಿವಾಸ್, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ವಿಷಯ ನಿರ್ವಾಹಕ ವಿಷುಕುಮಾರ್, ತಾಲೂಕು ಕಚೇರಿ ಸಿಬ್ಬಂದಿಗಳು ಗ್ರಾಮ ಕರಣಿಕರು ಗ್ರಾಮ ಸಹಾಯಕರು, ಯಾದವ ಸಂಘದ ಅಧ್ಯಕ್ಷರಾದ ಎಸ್ ಗೋಪಾಲ್, ತಾಲೂಕು ಸಂಘದ ಸದಸ್ಯರಾದ ಚಂದ್ರಶೇಖರ್, ದಾಮೋದರ್ ಉಪಸ್ಥಿತರಿದ್ದರು. ಉಪ ತಹಶೀಲ್ದಾರ್ ಪರಮೇಶ್ವರ ನಾಯ್ಕ್ ಸ್ವಾಗತಿಸಿ ವಂದಿಸಿದರು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…