ಶಿಕ್ಷಣ ಇಲಾಖೆ , ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಗೂಡಿನ ಬಳಿ ಯ ಬಿಆರ್ ಸಿ ಕಚೇರಿ ಆವರಣದಲ್ಲಿ ಆಟಿದ ಗಮ್ಮತ್ತ್ ಕಾರ್ಯಕ್ರಮವು ಬುಧವಾರ ನಡೆಯಿತು.
ಇದೇ ವೇಳೆ ಸ್ನೇಕ್ ಪಾಪು ಹಾಗೂ ಸ್ನೇಕ್ ಜೋಯ್ ಅವರು ಕಾರ್ಯಕ್ರಮದ ಅಂಗವಾಗಿ ನಡೆಸಿಕೊಟ್ಟ ಉರಗ ಮಾಹಿತಿ ಕಾರ್ಯಕ್ರಮ ಅರ್ಥ ಪೂರ್ಣವಾಗಿ ಮೂಡಿಬಂತು.
ಮಾಹಿತಿ ನೀಡಿದ ಸ್ನೇಕ್ ಜೋಯ್ ರವರು, ಯಾರ ಕೈಯಲ್ಲೂ ಗರುಡರೇಖೆಗಳಿರುವುದಿಲ್ಲ, ಕೈಯ ರೇಖೆ ಗಮನಿಸುವಷ್ಟು ಹಾವುಗಳಿಗೆ ದೃಷ್ಟಿಯೂ ಸೂಕ್ಷ್ಮವಾಗಿರುವುದಿಲ್ಲ.
ನಾಗಮಣಿ ಎಂಬುದೂ ಕೂಡ ಸುಳ್ಳು ಎಂದು ಮನದಟ್ಟು ಮಾಡಿದರು.
ವಿವಿಧ ಹಾವುಗಳ ರೂಪ, ಅವುಗಳ ವರ್ತನೆ, ವಿಷದ ಸ್ವರೂಪ, ಅಹಾರ ಪದ್ಧತಿ ಹೀಗೆ ವಿವಿಧ ಬಗೆಯ ಹಾವುಗಳ ಬಗ್ಗೆ ಮಾಹಿತಿ ನೀಡಿದರು. ಹಾವಿನಿಂದ ಕಡಿತಕ್ಕೆ ಒಳಗಾದರೆ ಮಾಡಬೇಕಾದ ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು. ಸ್ನೇಕ್ ಪಾಪು ರವರು, ನಾಗರಹಾವು, ಕೇರೆ, ಹೆಬ್ಬಾವು ಮರಿ ಹಾವುಗಳನ್ನುಪ್ತದರ್ಶಿಸಿ, ಅವುಗಳಿಗೆ ಉಪಟಳ ಮಾಡದಿದ್ರೆ ಅವೇನೂ ಮಾಡುವುದಿಲ್ಲ. ನಾಯಿ, ಬೆಕ್ಕುಗಳನ್ನು ಪ್ರೀತಿಸಿದಂತೆ ಹಾವುಗಳನ್ನೂ ನಾವು ಪ್ರೀತಿಸಬಹುದು. ವಿಷಪೂರಿತ ಹಾವುಗಳೆಂದು ತಪ್ಪು ನಂಬಿಕೆಯಿಂದ ವಿಷ ರಹಿತ ಹಾವುಗಳನ್ನೂ ಕೊಲ್ಲುತ್ತಿದ್ದೇವೆ. ಅವುಗಳ ಬಗ್ಗೆ ಅರಿವು ಅಗತ್ಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಡಯಟ್ ಪ್ರಿನ್ಸಿಪಾಲ್ ಸಿಫ್ರಿಯನ್ ಮೊಂತೆರೋ, ಸರ್ವಶಿಕ್ಷಣ ಅಭಿಯಾನದ ಉಪಯೋಜನಾಧಿಕಾರಿ ಗೀತಾ, ಡಯಟ್ ಉಪನ್ಯಾಸಕರು, ಶಿಕ್ಷಣ ಸಂಯೋಜಕರು, ಸಿಆರ್ ಪಿ, ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಳಿಗ್ಗೆ ಶಿಕ್ಷಕ ವಿಠಲ್ ನಾಯಕ್ ರವರಿಂದ ಪಾಡ್ದನಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಅಪರಾಹ್ನ ಆಟಿದ ಗಮ್ಮತ್ ಕಾರ್ಯಕ್ರಮದ ಅಂಗವಾಗಿ 51 ಬಗೆಯ ಪೌಷ್ಠಿಕ ಆಹಾರಗಳ ಪ್ರದರ್ಶನ ನಡೆಯಿತು. ಬಳಿಕ ಕಾವ್ಯಶ್ರೀ ಅಜೇರು ಹಾಗೂ ಉಪನ್ಯಾಸಕ ಪ್ರಶಾಂತ್ ರವರು ಯಕ್ಷ ಗಾನ ವೈಭವ ವನ್ನು ನಡೆಸಿಕೊಟ್ಟರು.