ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಕ್ವಿಂಟಾಲ್‌ಗಟ್ಟಲೆ ಪಡಿತರ ಅಕ್ಕಿ ಲಾರಿಯನ್ನು ನರಿಕೊಂಬು ಗ್ರಾಮದ ಕೋಡಿಮಜಲು ಎಂಬಲ್ಲಿ ಬುಧವಾರ ಪತ್ತೆಹಚ್ಚಲಾಗಿದೆ. ತಹಸೀಲ್ದಾರ್ ಮತ್ತು ಕಾರ್ಯನಿರ್ವಹಕ ದಂಡಾಧಿಕಾರಿ ಪುರಂದರ ಹೆಗ್ಡೆ ಅವರು, ಸುಮಾರು 7 ಕ್ವಿಂಟಾಲ್ ಅಧಿಕ ಅಕ್ಕಿಯನ್ನು ಮುಟ್ಟುಗೋಲು ಹಾಕಿದ್ದಾರೆ.
ರೇಶನ್ ಸೊಸೈಟಿಯೊಂದರಿಂದ ವಿತರಿಸಲಾದ ಅಕ್ಕಿಯನ್ನು ಖಾಸಗಿ ರೈಸ್‌ಮಿಲ್ಲಿಗೆ ಸಾಗಿಸಿ, ಅಲ್ಲಿ ಪಾಲಿಶ್ ಹಾಕಿ ಕಾಳಸಂತೆಯನ್ನು ಮಾರಾಟ ಮಾಡುತ್ತಿದೆ. ಇದೇ ಅಕ್ಕಿಯನ್ನು ಹುಡಿ ಮಾಡಿ ಅಕ್ಕಿ ತಯಾರಿಸಲಾಗುತ್ತಿದೆ ಎಂದು ತಹಸೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.
ತಲಾ 50 ಕೆಜಿಯ 14 ಗೋಣಿ ಅಕ್ಕಿ ಪತ್ತೆಯಾಗಿದ್ದು, ಯಾವುದೇ ಬಿಲ್ ಇಲ್ಲದೇ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಸಾರ್ವಜನಿಕರ ಮಾಹಿತಿಯಂತೆ ಅಕ್ಕಿಯನ್ನು ವಶಪಡಿಸಲಾಗಿದ್ದು, ಮಹಜರು ನಡೆಸಿ ಪ್ರಕರಣವನ್ನು ಬಂಟ್ವಾಳ ನಗರ ಠಾಣೆಗೆ ಹಸ್ತಾಂತರ ಮಾಡಲಾಗಿದೆ ಎಂದು ಆಹಾರ ಶಾಖಾ ನಿರೀಕ್ಷಕ ಶ್ರೀನಿವಾಸ್ ಅವರು ತಿಳಿಸಿದ್ದಾರೆ.
ತಹಶಿಲ್ದಾರ್ ನೇತೃತ್ವದ ತಂಡ, ಪ್ರಕರಣ ದಾಖಲಿಸಿ, ನಗರ ಠಾಣೆಗೆ ಹಸ್ತಾಂತರ ಮಾಡಲಾಗಿದ್ದು, ವಾಹನವನ್ನು ವಶಪಡಿಸಲಾಗಿದೆ. ಎಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಆಹಾರ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ತಹಶಿಲ್ದಾರ್ ಪುರಂದರ ಹೆಗ್ಡೆ, ಆಹಾರ ನಿರೀಕ್ಷಕ ಶ್ರೀನಿವಾಸ್, ಗ್ರಾಮಲೆಕ್ಕಾಧಿಕಾರಿ ನಾಗರಾಜ್, ತಾಲೂಕು ಕಚೇರಿ ಸಿಬ್ಬಂದಿಗಳಾದ ಸದಾಶಿವ್ ಕೈಕಂಬ, ಸುಂದರ್, ಲಕ್ಷ್ಮಣ್ ಶೀತಲ್, ಶಿವ ಪ್ರಸಾದ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ನಗರ ಠಾಣಾಧಿಕಾರಿ ರಕ್ಷಿತ್ ಗೌಡ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.