ಸ್ಕ್ರೀನ್ ಶಾಟ್ ತೆಗೆದು 9480800941 ಅಥವಾ 9480805300 ನಂಬ್ರಕ್ಕೆ ಕಳಿಸಿ
ಮೊಬೈಲ್ ವಾಟ್ಸಾಪ್ ತೆರೆದೊಡನೆ ಯಾರದ್ದಾದರೂ ಅವಹೇಳನಕಾರಿ ಸಂದೇಶ, ಪ್ರಚೋದನಕಾರಿ ವಿಚಾರಗಳು ಇವೆಯೇ, ಅಂಥದ್ದನ್ನು ಫಾರ್ವಾರ್ಡ್ ಕೂಡ ಮಾಡಬೇಡಿ.
ಅಂಥದ್ದೇನಾದರೂ ಕಂಡುಬಂದರೆ ಸ್ಕ್ರೀನ್ ಶಾಟ್ ತೆಗೆದು 9480800941 ಅಥವಾ 9480805300 ನಂಬ್ರಕ್ಕೆ ಕಳುಹಿಸಿ. ಪ್ರಚೋದನಕಾರಿ ಮೆಸೇಜ್ ಫಾರ್ವಾರ್ಡ್ ಮಾಡಿದರೂ ಕಾದಿದೆ ಶಿಕ್ಷೆ.
ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ನಡೆದ ಅಹಿತಕರ ಘಟನೆ ಬಳಿಕ ಗಲಭೆ ಪ್ರಚೋದನೆ ಸಹಿತ ಘಟನೆಗೆ ತುಪ್ಪ ಸುರಿಯುವ ವಿಘ್ನಸಂತೋಷಿಗಳ ದುಷ್ಕೃತ್ಯಕ್ಕೆ ಕಡಿವಾಣ ಹಾಕಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಸಜ್ಜಾಗಿದೆ. ಅಂಥದ್ದೇನಾದರೂ ಕಂಡುಬಂದರೆ ನನಗೆ ತಿಳಿಸಿ ಎಂದು ಖುದ್ದು ಎಸ್ಪಿ ಭೂಷಣ್ ಜಿ. ಬೊರಸೆ ಕಲ್ಲಡ್ಕದಲ್ಲಿ ಶುಕ್ರವಾರ ನಡೆದ ಶಾಂತಿಸಭೆಯಲ್ಲೂ ತಿಳಿಸಿದ್ದಾರೆ.
ಏನು ಹೇಳಿದ್ದಾರೆ ಎಸ್ಪಿ:
ಕಲ್ಲಡ್ಕದಲ್ಲಿ ನಡೆದ ಘಟನೆಗಳ ವಿಚಾರದಲ್ಲಿ ಇಲ್ಲಿಯವರೆಗೆ ಒಟ್ಟು 10 ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ತನಿಖೆಗೆ ಎರಡೂ ಕೋಮಿನ ಜನರು ಸಹಕರಿಸುತ್ತಿದ್ದಾರೆ. ಆದರೆ ಕೆಲವು ಸಮಾಜಘಾತುಕ ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಿಯಬಿಡುತ್ತಿದ್ದಾರೆ. ಇಂಥ ಸಂದೇಶಗಳನ್ನು ದಯವಿಟ್ಟು ಫಾರ್ವಾರ್ಡ್ ಮಾಡಬೇಡಿ. ಫಾರ್ವಾರ್ಡ್ ಮಾಡಿದಲ್ಲಿ, ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ರೀತಿಯ ಸಂದೇಶಗಳನ್ನು ಸ್ಕ್ರೀನ್ ಶಾಟ್ ಫೊಟೋ ತೆಗೆದು 9480800941 ಅಥವಾ 9480805300 ನಂಬ್ರಕ್ಕೆ ಕಳುಹಿಸಿ. ನಿಮ್ಮ ಮಾಹಿತಿಯನ್ನು ಗುಪ್ತವಾಗಿಡಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ನಮ್ಮ ಜೊತೆ ಸಹಕರಿಸಿ ಎಂದು ಎಸ್ಪಿ ಮನವಿ ಮಾಡಿದ್ದಾರೆ.
ಇಬ್ಬರ ಮೇಲೂ ಹಲವು ಪ್ರಕರಣ:
ಕಲ್ಲಡ್ಕದಲ್ಲಿ ಜೂನ್ 13ರಂದು ಇಬ್ರಾಹಿಂ ಖಲೀಲ್ ಮತ್ತು ರತ್ನಾಕರ ಶೆಟ್ಟಿ ಮಧ್ಯೆ ಘರ್ಷಣೆ ನಡೆದಿದ್ದು, ನಂತರ ಅಲ್ಲಿ ಕಲ್ಲು ತೂರಾಟ ಆಗಿದೆ. ಇಬ್ರಾಹಿಂ ಖಲೀಲ್ ಮೇಲೆ 2014ರಿಂದ ಇಲ್ಲಿಯವರೆಗೆ ಒಟ್ಟು 8 ಪ್ರಕರಣಗಳು ಮತ್ತು ರತ್ನಾಕರ ಶೆಟ್ಟಿ ಮೇಲೆ 2003ರಿಂದ ಇಲ್ಲಿಯವರೆಗೆ 9 ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಶಾಂತಿಸಭೆಯ ಮುಖ್ಯಾಂಶಗಳು ಇವು
ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್:
ಬೆರಳೆಣಿಕೆಷ್ಟು ಜನರಿಂದಾಗಿ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದೆ. ಯಾವುದೇ ಅಹಿತಕರ ಘಟನೆಗಳಾದ ತಕ್ಷಣ ಎರಡೂ ಸಮುದಾಯದ ಮುಖಂಡರು ಅಥವಾ ಹಿರಿಯರು ಸೇರಿಕೊಂಡು ಪರಿಸ್ಥಿತಿ ಉಲ್ಬಣವಾಗದಂತೆ ಪ್ರಯತ್ನಿಸಬೇಕು . ಘಟನೆ ನಡೆದ ಕೂಡಲೇ ಆರೋಪಿಗಳ ಬಂಧನಕ್ಕೆ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹಾಕುವುದು, ಗಡುವು ನೀಡುವುದರಿಂದ ಅಮಾಯಕ ಬಂಧನವಾಗುವ ಸಾಧ್ಯತೆಗಳಿರುತ್ತದೆ. ಹಾಗಾಗಿ ತನಿಖೆ ನಡೆಸಿ ನೈಜ್ಯ ಆರೋಪಿಗಳನ್ನು ಬಂಧಿಸುವವರೆ ತಾಳ್ಮೆ ವಹಿಸಬೇಕಾಗುತ್ತದೆ ಘಟನೆಯ ಸಂದರ್ಭಗಳಲ್ಲಿ ಇಲಾಖಾ ವತಿಯಿಂದ ಲೋಪಗಳು ಆಗಿದ್ದಲ್ಲಿ ಮುಂದಿನ ದಿನಗಳಲ್ಲಿ ಅವುಗಳನ್ನು ಸರಿಪಡಿಸಲಾಗುವುದು.
ಎಸ್ಪಿ ಭೂಷಣ್ ಜಿ.ಬೊರಸೆ: