ಬಂಟ್ವಾಳ

ದಿಢೀರನೆ ಬದಲಾದ ಬಿ.ಸಿ. ROAD

ನಿರ್ಮಾಣ ಹಂತದಲ್ಲಿರುವ ಕೆಎಸ್ಆರ್ಟಿಸಿ ನೂತನ ಬಸ್ ನಿಲ್ದಾಣದ ಮುಂಭಾಗ ರಾಷ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆ ಶುಕ್ರವಾರ ರಾತ್ರಿ ರಸ್ತೆ ವಿಭಜನೆ ಮಾಡಿದೆ. ಇದೀಗ ಫ್ಲೈಓವರ್ ನಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು ಗೊಂದಲಕ್ಕೆ ಕಾರಣವಾಗಿದೆ.

ಚಿತ್ರ: ಎಸ್.ಆರ್.ಬಿ.ಸಿ.ರೋಡ್

ಅಜ್ಜಿಬೆಟ್ಟು ರಸ್ತೆಯ ನಾಗರಿಕರಿಗೆ ಮತ್ತು ವಾಹನಗಳು ತಿರುವ ಪಡೆಯಲೆಂದು ಡಿವೈಡರ ಮಧ್ಯೆ ಸ್ಥಳಾವಕಾಶ ಕಲ್ಲಿಸಲಾಗಿದ್ದು, ಅದೇ ಜಾಗದ ಸುತ್ತ ಶುಕ್ರವಾರ ಸಂಜೆ ಹಠಾತ್ತನೆ ರಸ್ಥೆ ವಿಭಾಜಕ ಕೋನ್ ಗಳನ್ನು ಅಳವಡಿಸಲಾಯಿತು.  ಇದರಿಂದ ಎರಡೂ ಕಡೆಯಿಂದ ಸಂಚರಿಸುವ ವಾಹನ ಸವಾರರು ಗೊಂದಲಕ್ಕೆ ಸಿಲುಕಿ ಪರಾದಾಡಿದರು.

ಜಾಹೀರಾತು

ಮಂಗಳೂರು ಕಡೆಯಿಂದ ಬರುವಂತ ಬಸ್ , ಲಾರಿ ಸಹಿತ ಎಲ್ಕಾಲಾ ಘನವಾಹನಗಳು ಇಲ್ಲಿ ಬಲಕ್ಕೆ ತಿರುಗಿ ಮೇಲ್ಸತುವೆಯ ಮೂಲಕ ಸಂಚರಿಸುವಂತೆ ಸೂಚನಾಫಲಕ ಹಾಕಲಾಗಿದೆ. ಹಾಗೆಯೇ ಎದುರು ಕಡೆಯಿಂದ ಬರುವ ವಾಹನಗಳು ಎಡಭಾಗದಿಂದಲೇ ನೇರವಾಗಿ ತೆರಳಬೇಕು ಎಂದು ಸೂಚನಾ ಫಲಕದಲ್ಲಿ ತಿಳಿಸಲಾಗಿದೆ.

ಚಿತ್ರ: ಎಸ್.ಆರ್.ಬಿ.ಸಿ.ರೋಡ್

ಇದೀಗ ಇಲ್ಲಿ ವಾಹನ ಸವಾರರು ತಿರುವ ಪಡೆಯಲು ಮುಂದೆ ಪರದಾಟ ನಡೆಸಬೇಕು. ವಿಭಾಜಕ ಕೋನ್ ಮಧ್ಯೆ ತೂರಿಕೊಂಡು ಹೋಗಬೇಕಾಗಿದೆ. ಈ ಸಂದರ್ಭ ಮಂಗಳೂರು ಕಡೆಯಿಂದ ಬರುವ ಘನ ವಾಹನಗಳು ಬಲಕ್ಕೆ ತೆಗೆದುಕೊಳ್ಳುವ ವೇಳೆ ಅಪಾಯ ಗ್ಯಾರಂಟಿ.

ರಾತ್ರಿ ವೇಳೆಯಲ್ಲಂತು ಈ ವ್ಯವಸ್ಥೆ ಇನ್ನಷ್ಠು ಅಪಾಯಕಾರಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ರಾತ್ರಿ ವೇಳೆ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗೆ ಸಂಚರಿಸುವ ಬಸ್ ಮತ್ತಿತರ ಘನ  ವಾಹನಗಳ  ಸಂಚಾರದ ಭರಾಟೆಗೆ ವಿಭಾಜಕ ಕೋನ್ ಗಳು ನೆಲಸಮವಾದರೂ ಅಚ್ಚರಿಪಡಬೇಕಾಗಿಲ್ಲ.

ಜಾಹೀರಾತು

ಬಿ.ಸಿ.ರೋಡಿಗೆ ಅಗತ್ಯವಿಲ್ಲದ ಮೇಲ್ಸತುವೆ ನಿರ್ಮಾಣವಾದಂದಿನಿಂದ ಒಂದಲ್ಲೊಂದು ಸಮಸ್ಯೆ, ಎಡವಟ್ಟುಗಳನ್ನು ರಾಹೆ.ಪ್ರಾ.ಇಲಾಖೆ ಮೈಮೇಲೆ ಎಳೆದುಕೊಂಡಿದೆ. ಅಗತ್ಯವಾಗಿ ಅಗಬೇಕಾದ ಸರ್ವಿಸ್ ರಸ್ತೆ ದುರಸ್ಥಿಯನ್ನು ಮಾಡದ ರಾ.ಹೆ.ಪ್ರಾ.ಇದೀಗ ಮತ್ತೊಂದು ಅಪಾಯಕಾರಿ ಸನ್ನಿವೇಶವನ್ನು ಸ್ರಷ್ಟಿಸಿದೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ