• ಡಾ. ಎ.ಜಿ.ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

ನಮ್ಮಲ್ಲಿ ಹೆಚ್ಚಿನ ಎಲ್ಲಾ ಪದಾರ್ಥಗಳಿಗೂ ಒಗ್ಗರಣೆ ಜೊತೆ ಕರಿಬೇವು ಸೇರಿಸದಿದ್ದರೆ ಪದಾರ್ಥ ಸಂಪೂರ್ಣವಾಗುವುದಿಲ್ಲ. ಇದು ಪದಾರ್ಥಗಳಿಗೆ ರುಚಿ ಹಾಗು ಸುವಾಸನೆಯನ್ನು ನೀಡುತ್ತದೆ. ಹಾಗೆಯೇ ಹಲವಾರು ಸಂದರ್ಭಗಳಲ್ಲಿ ಕರಿಬೇವು ಔಷಧವಾಗಿ ಸಹ ಕೆಲಸ ಮಾಡುತ್ತದೆ.

ಜಾಹೀರಾತು
  1. ಕರಿಬೇವು ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ಅಲ್ಪಪ್ರಮಾಣದ ಮಲಬದ್ಧತೆಯನ್ನು ನಿವಾರಿಸುತ್ತದೆ.
  2. ಕರಿಬೇವಿನ ಸೊಪ್ಪಿನಲ್ಲಿ ಕಬ್ಬಿಣ ಮತ್ತು  ಫೋಲಿಕ್ ಆಮ್ಲದ ಅಂಶ ಅಧಿಕವಾಗಿ ಇರುವುದರಿಂದ ಇದರ ಬಳಕೆಯು ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ.
  3. ಕರಿಬೇವು ಮಸಾಲೆಪದಾರ್ಥ,ಖಾರ,ಮಧ್ಯ ಇತ್ಯಾದಿಗಳಿಂದ ಪಿತ್ತಜನಕಾಂಗವನ್ನು  ರಕ್ಷಿಸುತ್ತದೆ. ಆದುದರಿಂದ ಮಧ್ಯಪಾನಿಗಳಲ್ಲಿ ಮತ್ತು ಮಾಂಸಾಹಾರಿಗಳಿಗೆ ಇದು ಉತ್ತಮ ಪಥ್ಯಾಹಾರವಾಗಿದೆ.
  4. ಮಧುಮೆಹಿಗಳಿಗೂ ಸಹ ಕರಿಬೇವಿನ ಸೊಪ್ಪು ಉತ್ತಮ ಪಥ್ಯ ಆಹಾರವಾಗಿದ್ದು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಹತೋಟಿಯಲ್ಲಿ ಇಡಲು ಸಹಕರಿಸುತ್ತದೆ.
  5. ಇದು ಹೃದಯಕ್ಕೆ ಬಲದಾಯಕವಾಗಿದ್ದು ಹೃದಯದ ಕಾರ್ಯಚಟುವಟಿಕೆಗಳನ್ನು ಉತ್ತೇಜಿಸುತ್ತದೆ.
  6. ಪ್ರತಿದಿನ 5 ರಿಂದ 6 ಕರಿಬೇವಿನ ಸೊಪ್ಪನ್ನು ಜಗಿಯುವುದರಿಂದ ಮೂಲವ್ಯಾಧಿ ಸಮಸ್ಯೆಯು ಕಡಿಮೆಯಾಗುತ್ತದೆ.
  7. ಕರಿಬೇವಿನಲ್ಲಿ ವಿಟಮಿನ್.ಎ ಇರುವುದರಿಂದ ಇದರ ನಿತ್ಯ ಬಳಕೆಯು ಕಣ್ಣಿನ ದೃಷ್ಟಿ ಸಾಮರ್ಥ್ಯವನ್ನು ಹಚ್ಚಿಸುತ್ತದೆ.
  8. ದಿನಕ್ಕೆ 20 ರಿಂದ 30 ಮಿ.ಲೀ ನಷ್ಟು ಕರಿಬೇವಿನ ರಸವನ್ನು ಕುಡಿಯುವುದರಿಂದ ಶರೀರದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ.
  9. ಬಾಣಂತಿಯರು ಕರಿಬೇವಿನ ಸೊಪ್ಪಿನ ರಸವನ್ನು ಕುಡಿಯುವುದರಿಂದ ಎದೆಹಾಲಿನ ಪ್ರಮಾಣ ಹೆಚ್ಚಾಗುತ್ತದೆ.
  10. ಕರಿಬೇವಿನ ಸೊಪ್ಪಿನ ಕಷಾಯ ಮಾಡಿ ಕುಡಿಯುವುದರಿಂದ ಭೇದಿಯ ಸಮಸ್ಯೆಯು ಹತೋಟಿಗೆ ಬರುತ್ತದೆ.
  11. ಕರಿಬೇವಿನ ಸೊಪ್ಪಿನ ಹುಡಿಯನ್ನು ಜೇನುತುಪ್ಪದಲ್ಲಿ ಕಲಸಿ ತಿನ್ನುವುದರಿಂದ ಶೀತ, ನೆಗಡಿ, ಮೂಗು ಕಟ್ಟುವುದು ಹಾಗು ಕೆಮ್ಮು ಇತ್ಯಾದಿ ಸಮಸ್ಯೆಗಳು ಕಡಿಮೆಯಾಗುತ್ತದೆ.
  12. ಕರಿಬೇವನ್ನು ನುಣ್ಣಗೆ ಅರೆದು ತಲೆಗೆ ಹಚ್ಚುವುದರಿಂದ ಅಕಾಲಿಕವಾಗಿ ತಲೆ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಮತ್ತು ಇದು ಕೂದಲು ಬೆಳೆಯುವುದನ್ನು ಉತ್ತೇಜಿಸುತ್ತದೆ.
  13. ಕರಿಬೇವಿನ ಸೊಪ್ಪನ್ನು ನುಣ್ಣಗೆ ಅರೆದು ಉಗುರಿನ ಬುಡಕ್ಕೆ ಲೇಪ ಹಾಕುವುದರಿಂದ ಉಗುರಿನ ನಂಜು (fungal infection) ಕಡಿಮೆಯಾಗುತ್ತದೆ
  14. ಕರಿಬೇವಿನ ಎಲೆಯನ್ನು ನಿಂಬೆ ರಸದಲ್ಲಿ ಕಲಸಿ ಕೀಟ ಕಚ್ಚಿದ ಜಾಗಕ್ಕೆ ಹಚ್ಚಬೇಕು
  15. ಸುಟ್ಟ ಗಾಯದ ಮೇಲೆ ಕರಿಬೇವಿನ ಎಲೆಯನ್ನು ಜಜ್ಜಿ ಲೇಪ ಹಾಕಿದರೆ ಉರಿ ಹಾಗು ನೋವು ಕಡಿಮೆಯಾಗುತ್ತದೆ.
  16. ಕರಿಬೇವಿನ ಬಳಕೆಯಿಂದ ಕ್ಯಾನ್ಸರ್ ಚಿಕಿತ್ಸೆಯ ಅಡ್ಡಪರಿಣಾಮಗಳು ಕಡಿಮೆಯಾಗುತ್ತದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.