ಪಿಲಿಮೊಗರು ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಕೃತಿಗಾಗಿ ಒಂದು ದಿನ, ನೀರಿಗಾಗಿ ಅರಣ್ಯ ಎಂಬ ಯೋಜನೆಯಡಿ ಅರಣ್ಯ ಇಲಾಖೆಯ ಬಂಟ್ವಾಳ ವಲಯ ವತಿಯಿಂದ ಬೀಜದುಂಡೆ ಬಿತ್ತನೆ ಅಭಿಯಾನ ಸೋಮವಾರ ನಡೆಯಿತು. ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯ ಗಣೇಶ್ ರಾವ್, ಶಿಕ್ಷಕ ಶೇಖರ್, ಸ್ಥಳೀಯ ಜನಪ್ರತಿನಿಧಿ ಶಾರದಾ, ಉಪವಲಯ ಅರಣ್ಯಾಧಿಕಾರಿ ಅನಿಲ್, ಅರಣ್ಯರಕ್ಷಕಿ ಸ್ಮಿತಾ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ಸುಮಾರು ಒಂದು ಸಾವಿರ ಬೀಜಗಳನ್ನು ಮಕ್ಕಳಿಗೆ ವಿತರಿಸಿ ಬಿತ್ತನೆ ಅಭಿಯಾನ ನಡೆಸಲಾಯಿತು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…