ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಶ್ರೀ ಮಠ್ ಸಂಸ್ಥಾನ್ ದಾಭೋಲಿಯ ಸಂಜೀವಿನಿ ಸಮಾಧಿಸ್ಥ ಮಠಾಧೀಶ ಪರಮ ಪೂಜ್ಯ ಶ್ರೀಮದ್ ಪೂರ್ಣಾನಂದ ಸ್ವಾಮಿ ಮಹಾರಾಜ್ ಅವರ ಪವಿತ್ರ ಪಾದುಕೆಗಳೊಂದಿಗೆ ಕಿರಿಯ ಶ್ರೀಗಳಾದ ಪರಮ ಪೂಜ್ಯ ಶ್ರೀಮದ್ ದತ್ತಾನಂದ ಸರಸ್ವತಿ ಸ್ವಾಮೀಜಿಯವರು ಮೇ 20 ಶನಿವಾರದಿಂದ ಜೂನ್ 1 ಗುರುವಾರದವರೆಗೆ ದ.ಕ.ಜಿಲ್ಲೆಯ ನಾನಾ ಕಡೆಗೆ ಭೇಟಿ ನೀಡಲಿದ್ದು ಸಮಾಜ ಭಾಂದವರಿಗೆ ಆಶೀರ್ವಚನ ನೀಡಲಿದ್ದಾರೆ. ಇದರೊಂದಿಗೆ ಪರಮಪೂಜ್ಯ ಪೂರ್ಣಾನಂದ ಸ್ವಾಮಿಯವರ ಪಾದುಕಾ ಪೂಜೆ, ಧಾರ್ಮಿಕ ವಿದಿ ವಿಧಾನ ಜರಗಲಿದೆ.
ಈಗಾಗಲೇ ಮೇ 20 ಶನಿವಾರದಿಂದ ಮಂಗಳೂರಿನ ನಾನಾ ಕಡೆಗಳಿಗೆ ಸ್ವಾಮೀಜಿಯವರು ಭೇಟಿ ನೀಡಿ ಆಶೀರ್ವಚನ ನೀಡಿದ್ದಾರೆ. ಮೇ 24 ಬುಧವಾರದಂದು ಪುಂಜಾಲಕಟ್ಟೆಯ ನಂದಗೋಕುಲ ಸಭಾ ಭವನಕ್ಕೆ ಸ್ವಾಮೀಜಿಯವರು ಬೆಳಗ್ಗೆ ಗಂಟೆ 8ಕ್ಕೆ ಆಗಮಿಸಲಿದ್ದಾರೆ. ಸಾಮೂಹಿಕ ಪಾದುಕಾ ಪೂeನಾ, ಆಶೀರ್ವಚನ,ಗುರು ಸಮಾರಾಧನೆ,ಮಹಾ ಪ್ರಸಾದ, ಅಪರಾಹ್ನ ಗಂಟೆ 2.30 ಕ್ಕೆ ವಿಶೇಷ ಪಾದುಕಾ ಪೂeನಾ ನಡೆಯಲಿದೆ.
ಮೇ 25 ಗುರುವಾರವಾರದಂದು ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸ್ವಾಮೀಜಿಯವರು ಭೇಟಿ ನೀಡಲಿದ್ದಾರೆ.
ಮೇ 26 ಶುಕ್ರವಾರದಂದು ವಾಮದಪದವು ಪಾಂಗಾಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸ್ವಾಮೀಜಿಯವರು ಭೇಟಿ ನೀಡಲಿದ್ದಾರೆ. ಸಾಮೂಹಿಕ ಪಾದುಕಾ ಪೂeನಾ, ಆಶೀರ್ವಚನ,ಗುರು ಸಮಾರಾಧನೆ,ಮಹಾ ಪ್ರಸಾದ, ಅಪರಾಹ್ನ ಗಂಟೆ 2.30 ಕ್ಕೆ ವಿಶೇಷ ಪಾದುಕಾ ಪೂeನಾ ನಡೆಯಲಿದೆ. ಗಂಟೆ ೩ಕ್ಕೆ ಕಲ್ಲಡ್ಕ ಮೀನಾಕ್ಷಿ ಕಲಾ ಮಂದಿರದಲ್ಲಿ ಶ್ರೀ ವೈಭವ ಲಕ್ಷ್ಮೀ ಪೂಜನ, ಲಲಿತಾ ಸಹಸ್ರನಾಮ ಪಠನ, ಶ್ರೀಗಳಿಂದ ಆಶೀರ್ವಚನ.
ಮೇ 27ಶನಿವಾರದಂದು ಮುಲಾರು ಶ್ರೀ ಮಹಮ್ಮಾಯಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಶಕೋಡಿ ಶ್ರೀಲಕ್ಷ್ಮೀ ವೆಂಕಟ್ರಮಣ ದೇವಸ್ಥಾನಕ್ಕೆ ಸ್ವಾಮೀಜಿಯವರು ಭೇಟಿ ನೀಡಲಿದ್ದಾರೆ.ಸಾಮೂಹಿಕ ಪಾದುಕಾ ಪೂಜನಾ, ಆಶೀರ್ವಚನ,ಗುರು ಸಮಾರಾಧನೆ,ಮಹಾಪ್ರಸಾದ, ಅಪರಾಹ್ನ ಗಂಟೆ 2.30 ಕ್ಕೆ ವಿಶೇಷ ಪಾದುಕಾ ಪೂಜನಾ ನಡೆಯಲಿದೆ.
ಮೇ 28ರವಿವಾರದಂದು ಪುತ್ತೂರು ಶ್ರೀ ಪೂರ್ಣಾನಂದ ಮಂದಿರಕ್ಕೆ ಸ್ವಾಮೀಜಿಯವರು ಆಗಮಿಸಲಿದ್ದಾರೆ.ಸಾಮೂಹಿಕ ಪಾದುಕಾ ಪೂಜನಾ, ಆಶೀರ್ವಚನ,ಗುರು ಸಮಾರಾಧನೆ,ಮಹಾಪ್ರಸಾದ, ಅಪರಾಹ್ನ ಗಂಟೆ 2.30 ಕ್ಕೆ ವಿಶೇಷ ಪಾದುಕಾ ಪೂಜನಾ ನಡೆಯಲಿದೆ.
ಮೇ 29 ಸೋಮವಾರದಂದು ಕೂಡಿಬೈಲು ಮಹಾದೇವಿ ಮಹಮ್ಮಾಯಿ ದೇವಸ್ಥಾನಕ್ಕೆ ಸ್ವಾಮೀಜಿಯವರು ಆಗಮಿಸಲಿದ್ದಾರೆ. ಸಾಮೂಹಿಕ ಪಾದುಕಾ ಪೂಜನಾ, ಆಶೀರ್ವಚನ,ಗುರು ಸಮಾರಾಧನೆ,ಮಹಾಪ್ರಸಾದ, ಅಪರಾಹ್ನ ಗಂಟೆ 2.30 ಕ್ಕೆ ವಿಶೇಷ ಪಾದುಕಾ ಪೂಜನಾ ನಡೆಯಲಿದೆ.
ಮೇ 30 ಮಂಗಳವಾರದಂದು ಕಲ್ಲಡ್ಕ ಶ್ರೀ ಮೀನಾಕ್ಷಿ ಕಲಾ ಮಂದಿರಕ್ಕೆ ಸ್ವಾಮೀಜಿಯವರು ಬೆಳಗ್ಗೆ ಆಗಮಿಸಲಿದ್ದಾರೆ. ಸಾಮೂಹಿಕ ಪಾದುಕಾ ಪೂಜನಾ, ಆಶೀರ್ವಚನ,ಗುರು ಸಮಾರಾಧನೆ,ಮಹಾಪ್ರಸಾದ.
ಮೇ 31 ಬುಧವಾರದಂದು ಕಲ್ಲಡ್ಕ ಶ್ರೀ ಮೀನಾಕ್ಷಿ ಕಲಾ ಮಂದಿರಕ್ಕೆ ಸ್ವಾಮೀಜಿಯವರು ಬೆಳಗ್ಗೆ ಗಂಟೆ 8.30 ಕ್ಕೆ ಆಗಮಿಸಲಿದ್ದಾರೆ. ವಿಶೇಷ ಪಾದುಕಾ ಪೂಜನಾ,ಸಮಾರೋಪ ಸಮಾರಂಭ,ಗುರು ಸಮಾರಾಧನೆ, ಮಹಾ ಪ್ರಸಾದ.
ಜೂನ್ 1 ಗುರುವಾರದಂದು ಶ್ರೀಗಳಿಗೆ ಸ್ವಾಗತ ಸಮಿತಿ ವತಿಯಿಂದ ಪ್ರಣಾಮಪೂರ್ವಕ ಬೀಳ್ಕೊಳ್ಳುವಿಕೆ.