ಬಂಟ್ವಾಳ

ಬಂಟ್ವಾಳನ್ಯೂಸ್ ಫಾಲೋಅಪ್: ಕುಡಿಯುವ ನೀರು ಪೋಲು ವೀಕ್ಷಿಸಿದ ಅಧಿಕಾರಿಗಳು

ಕಳೆದ ಒಂದೆರಡು ತಿಂಗಳುಗಳಿಂದ ಬಿ.ಸಿ.ರೋಡಿನ ಫ್ಲೈ ಓವರ್ ಎದುರಿನ ಬದಿ ಅಂದರೆ ಈಗಿರುವ ಬ್ಯಾಂಕ್ ಆಫ್ ಬರೋಡಾ ಬಳಿಯಿಂದ ಗಣೇಶ್ ಮೆಡಿಕಲ್ಸ್ ವರೆಗೆ ನಡೆಯುತ್ತಿರುವ ಕಾಮಗಾರಿಯಿಂದಾಗಿ ಪೈಪ್ ಲೈನ್ ಒಡೆಯುವುದು ಮಾಮೂಲಾಗಿ ಹೋಗಿದೆ.

ಜಾಹೀರಾತು

ಪುರಸಭೆಯ ಪೈಪ್ ಲೈನ್ ಒಡೆದು ನೀರು ರಸ್ತೆಯಲ್ಲಿ ಹರಿಯುವುದು ಅದನ್ನು ಸರಿಪಡಿಸಿದರೂ ಮತ್ತೆ ಕೆಲಸ ನಿರ್ವಹಿಸುವಾಗ ಪೈಪ್ ಲೈನ್ ಒಡೆದು ಹೋಗುವುದು ನಡೆಯುತ್ತಾ ಬಂದಿದ್ದು, ಬುಧವಾರ ರಾತ್ರಿ ಪರಿಸ್ಥಿತಿ ಹದಗೆಟ್ಟಿತ್ತು. ಪೈಪ್ ಲೈನ್ ಒಡೆದು, ರಾ.ಹೆ. ಯವರು ರಸ್ತೆ ಪಕ್ಕ ಸ್ಲ್ಯಾಬ್ ಹಾಕುವ ಕಾಮಗಾರಿಗಾಗಿ ಅಗೆದ ಗುಂಡಿ ಭರ್ತಿಯಾಗಿ ಕೃತಕ ಕೆರೆ ನಿರ್ಮಾಣವಾಯಿತು. ಸುಮಾರು 15ಕ್ಕೂ ಅಧಿಕ ಅಧಿಕೃತ ಕನೆಕ್ಷನ್ ಗಳಿಗೆ ಕುಡಿಯುವ ನೀರು ಪೂರೈಕೆಯೂ ನಿಂತು ಹೋಯಿತು. ರಸ್ತೆಯಲ್ಲಿಡೀ ನೀರಿನ ಸಾಮ್ರಾಜ್ಯವಾದರೆ, ರಸ್ತೆ ಪಕ್ಕದ ಗುಂಡಿಗಳು ತೆರೆದ ಕೋರೆ ಹೊಂಡಗಳಂತೆ ಕಂಡುಬಂದವು. ಸ್ಥಳೀಯರ ಸತತ ದೂರಿನ ಬಳಿಕ ಆಗಮಿಸಿದ ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೋ ಸಹಿತ ಅಧಿಕಾರಿಗಳಿಗೆ ಸ್ಥಳೀಯ ಪುರಸಭಾ ಸದಸ್ಯರಾದ ಎ.ಗೋವಿಂದ ಪ್ರಭು ಮತ್ತು ಭಾಸ್ಕರ ಟೈಲರ್ ಸಹಿತ ಸಾರ್ವಜನಿಕರು ಪರಿಸ್ಥಿತಿಯ ಗಂಭೀರತೆಯ ಕುರಿತು ಮನದಟ್ಟು ಮಾಡಿದರು. ಚರಂಡಿ ಸೇರುತ್ತಿರುವ ಕುಡಿಯುವ ನೀರಿನ ಪೈಪ್ ಒಡೆದು ಹೋಗಿರುವ ಕಾರಣ  ಹೀಗಾಗಿದ್ದು ಸರಿಪಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಬಂಟ್ವಾಳ ನ್ಯೂಸ್ ಬುಧವಾರ ರಾತ್ರಿ ಈ ಸಮಸ್ಯೆ ಗಂಭೀರತೆ ಕುರಿತು ವರದಿ ಮಾಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ