ಬಂಟ್ವಾಳ

ಬಂಟ್ವಾಳನ್ಯೂಸ್ ಓದುಗರು 2.2 ಲಕ್ಷ, ಧನ್ಯವಾದ ನಿಮಗೆ

ಆರಂಭಗೊಂಡದ್ದು ಕಳೆದ ವರ್ಷ ನವೆಂಬರ್ 10. ಇಂದು ಮೇ 6. ಅಂದರೆ 178 ದಿನಗಳು ಆದವು. ಇದುವರೆಗೆ ಬಂಟ್ವಾಳನ್ಯೂಸ್ www.bantwalnews.com  ಓದಿದವರು 2,20,000 ಮಂದಿ. ನೀವು ಇದನ್ನು ಓದುವ ಹೊತ್ತಿಗೆ ಜಾಸ್ತಿ ಆಗಿರಲೂ ಬಹುದು. ಸರಾಸರಿ ದಿನವೊಂದಕ್ಕೆ 1200ರಷ್ಟು ಮಂದಿ ಬಂಟ್ವಾಳನ್ಯೂಸ್ ನಲ್ಲಿ ಏನಿದೆ ಎಂದು ಇಣುಕಿ ಹೋಗುತ್ತಾರೆ ಎಂಬುದಂತೂ ಸತ್ಯ. ನೂರಾರು ವೆಬ್ ಸೈಟ್ ಗಳು ಸುದ್ದಿಗಳನ್ನು ನಿರಂತರವಾಗಿ ಕೊಡುತ್ತಿರುವ ಮಧ್ಯೆಯೇ ಬಂಟ್ವಾಳನ್ಯೂಸ್ ಜನ್ಮತಳೆಯಿತು. ಇದಕ್ಕೆ ನಿರಂತರ ಸಾಥ್ ನೀಡುತ್ತಿರುವವರು ದೂರದ ಕೊಲ್ಲಿ ರಾಷ್ಟ್ರ, ನಮ್ಮ ಮುಂಬೈ, ದೆಹಲಿ, ಬೆಂಗಳೂರುಗಳಲ್ಲಿ ಹಾಗೂ ಅಮೇರಿಕಾ ಸಂಯುಕ್ತ ಸಂಸ್ಥಾನಗಳಲ್ಲಿರುವ ಬಂಟ್ವಾಳ ಮೂಲದ ಓದುಗರು ಹಾಗೂ ಬಂಟ್ವಾಳ ತಾಲೂಕು ಸಹಿತ ಜಿಲ್ಲೆಯ ಸಹೃದಯರು. ಪತ್ರಕರ್ತ ಸ್ನೇಹಿತರು ಹಾಗೂ ಜಾಹೀರಾತು ನೀಡಿ ಪ್ರೋತ್ಸಾಹಿಸುತ್ತಿರುವವರು. ಅಂಕಣ ನೀಡುವುದರೊಂದಿಗೆ ಸಲಹೆ ಸೂಚನೆಗಳನ್ನು ನೀಡುತ್ತಿರುವ ಅನಿತಾ ನರೇಶ್ ಮಂಚಿ, ಡಾ.ಅಜಕ್ಕಳ ಗಿರೀಶ ಭಟ್, ಬಿ.ತಮ್ಮಯ್ಯ, ಮೌನೇಶ ವಿಶ್ವಕರ್ಮ, ಡಾ.ರವಿಶಂಕರ್  ಮಾಹಿತಿಪೂರ್ಣವಾಗಿಸಲು ಸಹಕಾರ ನೀಡುತ್ತಿರುವ ತಾಲೂಕಿನ ಎಲ್ಲ ಸರಕಾರಿ ಅಧಿಕಾರಿಗಳು, ಅಧ್ಯಾಪಕರು, ಸಾಹಿತಿಗಳ ಸಹಿತ ಹಲವರು ಬಂಟ್ವಾಳನ್ಯೂಸ್ ಜೊತೆಗಿದ್ದಾರೆ. ವೆಬ್ ಸೈಟ್ ಅನ್ನು ಅಂದವಾಗಿ ವಿನ್ಯಾಸಗೊಳಿಸಿದ ಆದಿತ್ಯ ಕಲ್ಲೂರಾಯ ಅವರಿಗೆ ಕೃತಜ್ಞತೆ. ಸಮಸ್ತ ಓದುಗರಿಗೆ ಈ ಸಂದರ್ಭ ಬಂಟ್ವಾಳನ್ಯೂಸ್ ಪರವಾಗಿ ಧನ್ಯವಾದ.

ಜಾಹೀರಾತು

ಕ್ಲಿಕ್ ಮಾಡ್ತಾ ಇರಿ, ಹೊಸ ಸುದ್ದಿ, ವಿಚಾರಗಳಿಗೆ ಬಂಟ್ವಾಳನ್ಯೂಸ್. www.bantwalnews.com

–  ಹರೀಶ ಮಾಂಬಾಡಿ, ಸಂಪಾದಕ, www.bantwalnews.com

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ