ನಮ್ಮ ಭಾಷೆ

ತುಳುವರ ಹಬ್ಬ ಬಿಸು ಪರ್ಬ

  • ಬಿ.ತಮ್ಮಯ್ಯ
  • ಅಂಕಣ: ನಮ್ಮ ಭಾಷೆ

ಭಾರತದ ಜನರಲ್ಲಿ ಹಿಂದುಗಳಲ್ಲಿ ಆರ್ಯ ಮತ್ತು ದ್ರಾವಿಡ ಎಂಬ ಎರಡು ವರ್ಗಗಳು ಇವೆ. ಉತ್ತರ ಭಾರತದಲ್ಲಿ ಆರ್ಯರು ದಕ್ಷಿಣ ಭಾರತದಲ್ಲಿ ದ್ರಾವಿಡ ಸಂಸ್ಕೃತಿಯವರು ಇರುತ್ತಾರೆ. ಆರ್ಯ ಮತ್ತು ದ್ರಾವಿಡ ಸಂಸ್ಕೃತಿಯಲ್ಲಿ ಕೆಲವು ಬದಲಾವಣೆಗಳು ಇವೆ. ಆರ್ಯರು ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ, ದ್ರಾವಿಡರು ಬಿಸು ಯುಗಾದಿಯನ್ನು ಆಚರಿಸುತ್ತಾರೆ.

ಚಂದ್ರನ ಚಲನೆಯನ್ನು ಅನುಸರಿಸುವ ಆರ್ಯರು ಚಾಂದ್ರಮಾನ ಯುಗಾದಿಯನ್ನು ಸೂರ್ಯನ ಚಲನವನ್ನು ಅನುಸರಿಸುವ ದ್ರಾವಿಡರು ಬಿಸು ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಚಾಂದ್ರಮಾನ ಯುಗಾದಿ ಮೊದಲು ಬರುತ್ತದೆ. ತದನಂತರ ಸೌರಮಾನ ಯುಗಾದಿ ಬರುತ್ತದೆ. ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಕೇರಳಗಳಲ್ಲಿ ಬಿಸುವನ್ನು (ಸೌರಮಾನ)ವನ್ನು ಆಚರಿಸುತ್ತಾರೆ. ತುಳುವರ ಹೊಸ ವರ್ಷವು ಬಿಸುವಿನಿಂದ ಆರಂಭಗೊಳ್ಳುತ್ತದೆ. ತದನಂತರ ಎಲ್ಲ ಹಬ್ಬಗಳು ಒಂದರ ಹಿಂದೆ ಒಂದರಂತೆ ಬರರುತ್ತವೆ. ತುಳುವರ ಸಂಸ್ಕೃತಿಯ ಬೇರು ಇರುವುದೇ ಹಬ್ಬಗಳ ಆಚರಣೆಯಲ್ಲಿ. ಅದು ತುಂಬಾ ವೈವಿಧ್ಯಮಯವಾಗಿರುತ್ತದೆ.

ಜಾಹೀರಾತು

ಬಿಸು ಎಂದ ತಕ್ಷಣ ನೆನಪಾಗುವುದು ಬಿಸುಕಣಿ. ಬಿಸು ಕಣಿ ಎಂದರೆ ರೈತರು ಎಳೆದ ಧಾನ್ಯ ಮತ್ತು ಬತ್ತವನ್ನು ಕೋಣೆಯಲ್ಲಿ ಹಾಕಿ, ಕಾಲುದೀಪವಿಟ್ಟು ಎಲ್ಲ ತರಕಾರಿ ಫಲವಸ್ತುಗಳನ್ನು ಇಟ್ಟು, ಹೂಗಳನ್ನಿಟ್ಟು ಪೂಜೆ ಸಲ್ಲಿಸಿ ಮನೆಯವರೆಲ್ಲ ಬೆಳಗ್ಗೆ ಸ್ನಾನ ಮಾಡಿ ಹೊಸ ಬಟ್ಟೆ ಹಾಕಿ ಬಿಸು ಕಣಿಗೆ ಅಡ್ಡ ಬೀಳುತ್ತಾರೆ .ಮತ್ತು ಹಿರಿಯರ ಆಶೀರ್ವಾದ ಪಡೆಯುತ್ತಾರೆ.

ಬಿಸು ಹಬ್ಬದ ದಿನ ಗದ್ದೆ ಉಳುವುಕ್ಕೆ ದಿನ ಕೇಳಬೇಕಿಲ್ಲ.  ಆ ದಿನ ಗದ್ದೆ ಉತ್ತು, ಬೀಜ ಬಿತ್ತಿದರೆ ಒಳ್ಳೆಯದೆಂಬ ನಂಬಿಕೆ ತುಳುವರಲ್ಲಿದೆ. ಬಿಸುತಾನಿ ಮೂಡೆಯ ತಿಂಡಿ ಅಥವಾ ಉದ್ದಿನ ದೋಸೆ , ಸೌತೆಯ ಪದಾರ್ಥ, ಕಡ್ಲೆ ಗಸಿ, ತೊಂಡೆಕಾಯಿ, ಪದಾರ್ಥ, ಹೆಸರುಬೇಳೆ ಪಾಯಸ, ಅದಕ್ಕೆ ಗೇರು ಬೀಜ ಹಾಕುತ್ತಾರೆ. ತುಳುನಾಡಲ್ಲಿ ಬಿಸು ಎಂದು ಕೇರಳದಲ್ಲಿ ವಿಷು ಎಂದು ತಮಿಳುನಾಡಿನಲ್ಲಿ ವರ್ಷ ಪಿರಪ್ ಎಂದು ಈ ಹಬ್ಬವನ್ನು ಆಚರಿಸುತ್ತಾರೆ.ಇದು ತುಳುವರ ಹಬ್ಬದ ಆರಂಭವಾಗಿದ್ದು ತದನಂತರ ತುಳು ಸಂಸ್ಕೃತಿ ಅನಾವರಣ ಆಗುತ್ತದೆ.

ಜಾಹೀರಾತು

( ಲೇಖಕರ ದೂರವಾಣಿ ಸಂಖ್ಯೆ: 9886819771)

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
B Thammayya

ತುಳು ಭಾಷೆ ಮಾತಾಡೋದು ಸುಲಭ. ಲಿಪಿ ವಿಚಾರ ಬಂದಾಗ ಹಿಂದೇಟು ಹಾಕುತ್ತೇವೆ. ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಬಿ.ಸಿ.ರೋಡಿನ ಬಿ.ತಮ್ಮಯ್ಯ, ತುಳು ಲಿಪಿಯನ್ನು ಸರಳವಾಗಿಸುತ್ತಾರೆ. ಹಿಂದಿರುಗಿ ನೋಡಿದಾಗ ಸಹಿತ ಹಲವು ಪುಸ್ತಕಗಳನ್ನು ಬರೆದಿರುವ ಅವರು ಕಸಾಪ ತಾಲೂಕು ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.