ಪಿಂಚಣಿದಾರರ ಸಂಘದ ವಾರ್ಷಿಕ ಮಹಾಸಭೆ ಬಿ.ಸಿ.ರೋಡ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಅಧ್ಯಕ್ಷ ಬಿ.ತಮ್ಮಯ್ಯ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಪಿಂಚಣಿದಾರರ ಸಂಘದ ಅಧ್ಯಕ್ಷ ಎನ್.ಸೀತಾರಾಮ ಭಾಗವಹಿಸಿದ್ದರು.
ಹಿರಿಯ ಸದಸ್ಯರಾದ ವಿ.ಮಹಾಲಿಂಗ ಭಟ್ಟ ಅಡ್ಯನಡ್ಕ, ಜಿ.ವೆಂಕಪ್ಪ ಅಸೈಗೋಳಿ, ಎ.ವಿ.ಲಕ್ಷ್ಮೀ ಮೊಂಟೆಪದವು, ಎಸ್.ಪುರುಷೋತ್ತಮ ಪೂಜಾರಿ. ಎ.ಲಿಂಗಪ್ಪ ಕೈಕುಂಜೆ, ಬಿ.ಕೆ. ನಾರಾಯಣ ರಾವ್ ಸಂಚಯಗಿರಿ, ಕೆ.ಶಾಮಾ ಬಾ ವಗ್ಗ, ಎಮ್.ಎಸ್. ದಿನಕರ್ ಕೈಕುಂಜೆ, ಈಶ್ವರ ನಾಯಕ್ ತೆಂಕಕಜೆಕ್ಕಾರು, ಕೆ.ಕಿಟ್ಟಣ್ಣ ರೈ ಕೊಡಂಗೆ, ಎಚ್.ಧರ್ಮಣ ಮೂಲ್ಯ ನರಿಂಗಾನ, ಪಿ.ಎ.ವಿಜಯನ್ ಕಾಞಂಗಾಡು, ಸೀತಾರಾಮ ನಾಯಕ್ ಕಂದೂರು ಸಜಿಪ, ಕೆ.ಚಂದ್ರಶೇಖರ ಶೆಟ್ಟಿ ಅಜ್ಜಿಬೆಟ್ಟು, ಅರ್ಕಕೀರ್ತಿ ಇಂದ್ರ ಸಿದ್ದಕಟ್ಟೆ ಅವರನ್ನು ಮುಖ್ಯ ಅತಿಥಿಗಳು ಮತ್ತು ಅಧ್ಯಕ್ಷರು ಜಂಟಿಯಾಗಿ ಶಾಲು ಫಲಪುಷ್ಪಗಳನ್ನು ನೀಡಿ ಸನ್ಮಾನಿಸಿ ಗೌರವಿಸಿದರು.
ಸನ್ಮಾನಿತರ ಪೈಕಿ ಮಹಾಲಿಂಗ ಭಟ್ಟ ಮತ್ತು ಅರ್ಕಕೀರ್ತಿ ಇಂದ್ರರು ಮಾತನಾಡಿ ಸಂಘಕ್ಕೆ ಶುಭ ಹಾರೈಸಿದರು. ಸನ್ಮಾನಿತರುಗಳ ವ್ಯಕ್ತಿ ಪರಿಚಯಗಳನ್ನು ರಾಘವನ್ ನಾಯಕ್, ಚಂದೂ ನಾಕ್, ಎಂ.ದಿನಕರ್, ಸುಂದರ ಮೂಲ್ಯ ಮತ್ತು ರಾಧಾಕೃಷ್ಣ ಶರ್ಮಾ ರವರು ಸಭೆಯಲ್ಲಿ ತಿಳಿಸಿದರು.
ಸಭಿಕರ ಪೈಕಿ ಅನಂತ ಪದ್ಮನಾಭ, ಆನಂದ ನಾಕ್, ಹಸನ್ ಸಾಹೇಬ್, ಜಯಂತ ಶೆಟ್ಟಿ, ಶಾಂತಾರಾಮ ಪ್ರಭು ಇವರುಗಳು ತಮ್ಮ ಅನಿಸಿಕೆಗಳನ್ನು ನೀಡಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ತಮ್ಮಯ್ಯ ರವರು ಸಂಘದ ಸದಸ್ಯರ ಸಹಕಾರವನ್ನು ಸ್ಮರಿಸಿದರು.
ಉಪಾಧ್ಯಕ್ಷ ಎ.ಲಿಂಗಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ನೀಲೋಜಿರಾವ್ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಜತೆ ಕಾರ್ಯದರ್ಶಿ ಎ.ದಾಮೋದರ್ ವಂದಿಸಿದರು. ಶೇಶಪ್ಪ ಮಾಸ್ತರ್ ನಿರೂಪಿಸಿದರು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…