ಫರಂಗಿಪೇಟೆ

ಫರಂಗಿಪೇಟೆಯಲ್ಲಿ ಯುನೈಟೆಡ್ ಲೀಗ್ ಕ್ರಿಕೆಟ್ ಗೆ ಚಾಲನೆ

ತಂಡ ಗೆಲ್ಲಬೇಕು ಎನ್ನುವುದಕ್ಕಿಂತಲೂ ಕ್ರೀಡೆ ಗೆಲ್ಲಬೇಕು ಎನ್ನುವ ಮನೋಭಾವದಿಂದ ಕ್ರೀಡೆಯಲ್ಲಿ ಪಾಲ್ಗೊಂಡರೆ ಯಶಸ್ಸು ಕಾಣಲು ಸಾಧ್ಯ ಎಂದು ಪ್ರೊಬೇಷನರಿ ಐಪಿಎಸ್ ಅಧಿಕಾರಿ ನಾಗೇಶ್ ಹೇಳಿದರು.

ಜಾಹೀರಾತು

ಫರಂಗಿಪೇಟೆಯ ಯುನೈಟೆಡ್ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಫರಂಗಿಪೇಟೆ ನೇತ್ರಾವತಿ ಕಿನಾರೆಯ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಯುನೈಟೆಡ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಪ್ರತಿಭೆ ಇರುತ್ತದೆ. ತಂಡದಲ್ಲಿ ಹೊಂದಾಣಿಕೆ ಮತ್ತು ಸಹಕಾರ ಭಾವನೆಯಿಂದ ಆಟವಾಡಿದಾಗ ಗೆಲುವು ತಮ್ಮದಾಗಿಸಿಕೊಳ್ಳಲು ಸಾಧ್ಯವಿದೆ ಎಂದರು.

ಯುನೈಟೆಡ್ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ, ಜಿ.ಪಂ.ಮಾಜಿ ಸದಸ್ಯ  ಉಮ್ಮರ್ ಫಾರೂಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡೆಯಿಂದ ಶಾಂತಿ ಸಾಮರಸ್ಯವನ್ನು ಬೆಳೆಸಲು ಸಾಧ್ಯವಿದೆ. ಈ ಭಾಗದ ಯುವಕರಲ್ಲಿನ ಕ್ರೀಡಾ ಪ್ರತಿಭೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ನಡೆಸಲಾಗುತ್ತಿದೆ ಎಂದರು.

ಅರ್ಜುನ್ ವೆಡ್ಸ್ ಅಮೃತಾ ಚಿತ್ರದ ನಾಯಕ ನಟ ಅನುಪ್ ಸಾಗರ್ ಹಾಗೂ ನಟಿ ಆರಾಧ್ಯ ಶೆಟ್ಟಿ ಉದ್ಘಾಟನಾ ಸಮಾರಂಭದ ಆಕರ್ಷಣೆಯಾಗಿ ಗಮನ ಸೆಳೆದರು. ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,  ಪುರುಷೋತ್ತಮ ಕೆ. ಭಂಡಾರಿ, ಪುದು ಗ್ರಾ.ಪಂ. ಉಪಾಧ್ಯಕ್ಷ ಹಾಸೀರ್ ಪೇರಿಮಾರ್, ಸದಸ್ಯ ರಮ್ಲಾನ್, ಕ್ಲಬ್‌ನ ಉಪಾಧ್ಯಕ್ಷ ಆಸೀಫ್ ಮೇಲ್ಮನೆ, ಪ್ರಮುಖರಾದ ನಝೀರ್, ಮುಸ್ತಾಫ, ಇಮ್ತಿಯಾಝ್, ಸಲೀಂ ತೆಲ್ಲಿ, ಲತೀಫ್ ಕುಂಜತ್‌ಕಲ್, ಶಾರುಖ್, ತಾಸೀಲ್‌ವಿ.ಎಚ್., ಮನ್ಸೂರ್ ಮೇಲ್ಮನೆ ಹಾಜರಿದ್ದರು. ಅಶ್ರಫ್ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ