ನಮ್ಮ ಭಾಷೆ

ತುಳುವರು ಕಳಕೊಂಡದ್ದು

  • ಬಿ.ತಮ್ಮಯ್ಯ

www.bantwalnews.com

ಜಾಹೀರಾತು

ಹಿಂದೆ ನನ್ನ ಲೇಖನದಲ್ಲಿ ತುಳುವರು ವೀರರು, ಧೀರರು, ಯುದ್ಧದಲ್ಲಿ ಅವರಿಗೆ ಸರಿಸಾಟಿಯಾದವರು ಯಾರೂ ಇರಲಿಲ್ಲ ಎಂದು ಬರೆದಿದ್ದೆ. ಅದಕ್ಕೆ ಕಾರಣ ಅನೇಕ ಯುದ್ಧ ಕಲೆಯು ನಮ್ಮವರಿಗೆ ಗೊತ್ತಿತ್ತು. ಇವತ್ತು ಕೇರಳದ್ದು ಎಂದುಕೊಂಡಿರುವ ಕಲಾರಿಪಟ್ಟು ಮೂಲತ: ತುಳುನಾಡಿನ ಕಲೆ. ಕೇರಳದಿಂದ ಅನೇಕ ಜನ ಬಂದು ಆ ಕಲೆಯನ್ನು ಇಲ್ಲಿ ಕಲಿತು ತಮ್ಮ ಊರಿಗೆ ಹೋಗುತ್ತಿದ್ದರು. ತುಳುನಾಡಿದ ಕಲಾರಿಪಟ್ಟನ್ನು ಕಲಿತವರಿಗೆ ಕೇರಳದಲ್ಲಿ ವಿಶೇಷ ಗೌರವ ಸಿಗುತ್ತಿತ್ತು.

ಅವರು ಕೇರಳದ ಅರಸರ ಅಂಗರಕ್ಷಕರಾಗಿ ನೇಮಕಗೊಳ್ಳುತ್ತಿದ್ದರು. ಕಲರಿಪಟ್ಟಿನಲ್ಲಿ ಪರಿಣತಿ ಪಡೆದವರು ಒಂದೇ ಸಲ ಅರಸರ ಗೌರವಾದರಗಳಿಗೆ ಪಾತ್ರರಾಗುತ್ತಿದ್ದರು. ಈ ಬಗ್ಗೆ ಮಲೆಯಾಳದಲ್ಲಿ ಒಂದು ಜಾನಪದ ಹಾಡು ಇದೆ. ತುಳುನಾಡ್ ಕ್ ಪೋಯಿ, ಕಲರಿಪರಿಚಿಟ್ಟ್ ಬಂನ್ನ್ ರಾಜವುಡೆ ಅಂಗರಕ್ಷಕನಾಯಿ ಎಂದು ಹೇಳಿದೆ. ಇಂಥ ತುಳುನಾಡಿನ ಪ್ರಸಿದ್ಧ ಕಲರಿಪಟ್ಟು ಕಲಿಸಿಕೊಡುವ ಅದೆಷ್ಟೋ ಗರಡಿಗಳು ಇದ್ದವು. ಅಂಥ ಗರಡಿಗಳಲ್ಲಿ ಈಗಲೂ ಕಲರಿಯ ಗುರಾಣಿ ಮತ್ತು ಖಡ್ಗವನ್ನು ಕಾಪಾಡಿಕೊಂಡು ಬರಲಾಗಿದೆ. ಪೊಳಲಿಯ ತಕ್ಕಖಡ್ಗಗುತ್ತು ಎಂಬಲ್ಲಿ ಪಂಜುರ್ಲಿ ದೈವದ ಸ್ಥಾನದಲ್ಲಿ ಗುರಾಣಿ ಮತ್ತು ಖಡ್ಗವನ್ನು ಕಾಣಬಹುದಾಗಿದೆ.

ಬ್ರಿಟಿಷರು ಕರಾವಳಿಗೆ ಬಂದು ವ್ಯಾಪಾರ ಶುರು ಮಾಡಿ ಇಲ್ಲಿಯ ತುಂಡರಸರನ್ನು ಸೋಲಿಸಿ ಅವರೇ ರಾಜ್ಯವನ್ನು ಕಟ್ಟಿ ಆಳಲು ಪ್ರಾರಂಭಿಸಿದಾಗ ಅವರ ಕೋವಿಗೆ ನಮ್ಮ ಕಲಾರಿಪಟ್ಟು ಸವಾಲಾಗಿತ್ತು. ದೂರದಿಂದ ಅವರು ಕೋವಿಯ ಗುಂಡಿನಿಂದ ನಮ್ಮನ್ನು ಕೊಂದರು. ಸಮೀಪದಲ್ಲಿ ನಮ್ಮ ಕಲರಿಯ ಮುಂದೆ ಅವರ ಆಟ ನಡೆಯುತ್ತಿರಲಿಲ್ಲ. ಅದಕ್ಕಾಗಿ ಅವರು ತುಳುನಾಡ ಗರಡಿಮನೆಗಳನ್ನು ಮುಚ್ಚಿಸಿದರು. ಬಳಿಕ ಅಲ್ಲಿ ತಾಲೀಮು ಮಾಡುವುದನ್ನು ನಮ್ಮವವರು ಕಲಿತರು. ಕೇರಳ ರಾಜ ಬ್ರಿಟಿಷರಿಗೆ ಕಾಲಕಾಲಕ್ಕೆ ಕಪ್ಪ ಕೊಡುತ್ತಿದ್ದುದರಿಂದ ಅಲ್ಲಿ ಕಲಾರಿಪಟ್ಟು ಗರಡಿ ನಡಸಲು ಅರಸರಿಗೆ ಸಹಕಾರ ದೊರಕಿತು. ಇದರಿಂದ ಹೆಸರುವಾಸಿಯಾದ ತುಳುನಾಡಿದ ಕಲರಿಪಟ್ಟನ್ನು ತುಳುವರು ಕಳೆದುಕೊಂಡರು. ತಾಲೀಮನ್ನು ಕಲಿತ ಕಾರಣ, ಮುಂಬಾಯಿ ಕಡೆ ಹೋದರೆ ನಮ್ಮ ತುಳುವರ ತಾಲೀಮು ನೋಡಿ ಮರಾಠಿಗರು ಗೌರವ ನೀಡಿದರು. ಇವತತ್ತು ಮುಂಬಯಿಯಲ್ಲಿ ತುಳುವರು ಗಟ್ಟಿ ನೆಲೆಯೂರಲು ಕಾರಣ ತಾಲೀಮು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
B Thammayya

ತುಳು ಭಾಷೆ ಮಾತಾಡೋದು ಸುಲಭ. ಲಿಪಿ ವಿಚಾರ ಬಂದಾಗ ಹಿಂದೇಟು ಹಾಕುತ್ತೇವೆ. ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಬಿ.ಸಿ.ರೋಡಿನ ಬಿ.ತಮ್ಮಯ್ಯ, ತುಳು ಲಿಪಿಯನ್ನು ಸರಳವಾಗಿಸುತ್ತಾರೆ. ಹಿಂದಿರುಗಿ ನೋಡಿದಾಗ ಸಹಿತ ಹಲವು ಪುಸ್ತಕಗಳನ್ನು ಬರೆದಿರುವ ಅವರು ಕಸಾಪ ತಾಲೂಕು ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.