ಅಂಕಣ: ನಮ್ಮ ಭಾಷೆ
ತುಳು ಭಾಷೆಯ ಪ್ರಾಚೀನತೆಗೆ ಇನ್ನೂ ಒಂದು ಉದಾಹರಣೆ ಕೊಡಬಹುದು. ಹಿಂದುಗಳು ಮನೆಯ ಬಾಗಿಲಿನಲ್ಲಿ ಮತ್ತು ಬೇರೆ ಬೇರೆ ದೇವರ ರಂಗೋಲಿಗಳನ್ನು ಬರೆಯುವ ಓಂ ಸಂಕೇತವು ತುಳುವಿನಿಂದ ಬಂದುದೆಂದರೆ ಅಚ್ಚರಿ ಆಗದೇ ಇರದು.
ದೇವಭಾಷೆ ಸಂಸ್ಕೃತದ ಈ ಸಂಕೇತ ತುಳುವಿನ ಅಕ್ಷರದಿಂದ ಬಂದುದೆಂದು ಅನೇಕ ವಿದ್ವಾಂಸರು ದೃಢಪಡಿಸಿದ್ದಾರೆ. ಒ ಮತ್ತು ಮ್ ತುಳು ಅಕ್ಷರದಿಂದ ಈ ಸಂಕೇತ ಬಂದಿದೆ. ಇತ್ತೀಚೆಗೆ ಜರ್ಮನಿಯವರು ಜಗತ್ತಿನ ಹತ್ತು ಹಿರಿಯ ಭಾಷೆಯ ಬಗ್ಗೆ ಸಂಶೋಧನೆ ನಡೆಸಿದಾಗ, ತುಳು ಮೂಲದ ತಮಿಳಿನ ನಂತರದ ಸ್ಥಾನ ಗಳಿಸಿದ ಸಂಸ್ಕೃತದ ಓಂ ಚಿಹ್ನೆ ತುಳುವಿನಿಂದ ಬಂದಿದೆ ಎಂದರೆ ಆ ಸಂಶೋಧನೆಗೆ ಬಲ ಬಂದಿದೆ ಎನ್ನಲೇಬೇಕು. ಹೀಗೆ ತುಳು ಭಾಷೆಯೂ ತನ್ನ ಹಿರಿಮೆಯನ್ನು ತೋರ್ಪಡಿಸಿದೆ.
ಅನೇಕ ಕಾರಣಗಳಿಂದ ಅದು ಹಿಂದೆ ಸರಿದಿರುವುದು ಸತ್ಯ. ಮತ್ತೆ ಅದರ ಘನತೆ ಗೌರವವನ್ನು ತುಳುವರು ಎತ್ತಿ ಹಿಡಿಯಬೇಕಾದರೆ, ತುಳುವನ್ನು ಭಾಷೆಯಾಗಿ ಬರವಣಿಗೆಯಲ್ಲಿ ಉಪಯೋಗಿಸುವ ಅಗತ್ಯ ಇದೆ.
ವಿಶ್ವಕೋಶವಾಗಿ ಬೆಳೆದ ವಿಕಿಪೀಡಿಯಾದಲ್ಲಿನ 1200 ಲೇಖನ 2016ರ ಆಗಸ್ಟ್ 5ರಂದು ಸ್ವತಂತ್ರ ವಿಶ್ವಕೋಶವಾಗಿ ತುಳು ರೂಪುಗೊಂಡಿದೆ. ಈಗ ವಿಕಿಪೀಡಿಯಾಕ್ಕೆ ಲೇಖನ ಅಪ್ ಲೋಡ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದುದರಿಂದ 1200ಕ್ಕೂ ಮಿಕ್ಕಿ ವಿಕಿಪೀಡಿಯಾದಲ್ಲೇ ಅಪ್ಲೋಡ್ ಆಗಿದೆ. ಸುಮಾರು 2007ರಲ್ಲಿ ಯು.ಬಿ.ಪವನಜ ನೇತೃತ್ವದಲ್ಲಿ ಒಂದು ತಂಡ ರಚನೆಯಾಗಿದ್ದು ಅದು ಈಗ ವೇಗ ಪಡೆದುಕೊಳ್ಳುತ್ತಿದೆ. 2014ರ ಡಿಸೆಂಬರಿನಲ್ಲಿ ಅಡ್ಯಾರಿನಲ್ಲಿ ನಡೆದ ವಿಶ್ವ ತುಳುವೆರೆ ಪರ್ಬದಲ್ಲಿ ವಿಕಿಪಿಡಿಯಾದ ಸ್ಟಾಲ್ ಒಂದಿದ್ದು, ಅನೇಕ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ಸಂದರ್ಶಕರಿಗೆ ವಿಕಿಪೀಡಿಯಾದಲ್ಲಿ ಲೇಖನ ಅಪ್ ಲೋಡ್ ಮಾಡುವ ಬಗ್ಗೆ ಮಾಹಿತಿ ನೀಡುತ್ತಿದ್ದರು. ಅಲ್ಲದೆ ಉಡುಪಿ ಮತ್ತು ಮಂಗಳೂರಿನಲ್ಲಿ ಈ ಬಗ್ಗೆ ಕಾರ್ಯಾಗಾರವನ್ನು ನಡೆಸಿ, ವಿಕಿಪೀಡಿಯಾ ಬಗ್ಗೆ ಜನರಿಗೆ ತಿಳುವಳಿಕೆ ನೀಡಿದ್ದಾರೆ. ವಿಕಿಪೀಡಿಯಾದಲ್ಲಿ ತುಳು ಸಂಸ್ಕೃತಿ ಭಾಷೆ, ಆಹಾರ , ಅಡುಗೆಗೆ ಸಂಬಂಧಿಸಿ ಲೇಖನಗಳು, ಭೂತಾರಾಧನೆ, ಯಕ್ಷಗಾನವೇ ಇತ್ಯಾದಿ ಲೇಖನಗಳನ್ನು ಅಪ್ ಲೋಡ್ ಮಾಡಬೇಕು. ಪ್ರಸ್ತುತ ವಿಕಿಪೀಡಿಯಾದಲ್ಲಿ ಮಾಹಿತಿ, ಫೊಟೋ ಲಿಂಕ್, ಇತ್ಯಾದಿಗಳುಳ್ಳ 2000 ಬೈಟ್ಸ್ ಇರುವ ಲೇಖನ ಸಂಗ್ರಹವಿದೆ. ಸುಮಾರು 700 ರಷ್ಟು ಲೇಖನಗಳಿವೆ. ಸಂವಿಧಾನದ 8ನೇ ಪರಿಚ್ಛೇಧಕ್ಕೆ ಸೇರಲು ಇವೆಲ್ಲದರ ಅವಶ್ಯಕತೆ ಇದೆ.
ನಿಮ್ಮ ಅಭಿಪ್ರಾಯಗಳನ್ನು ಲೇಖಕರೊಂದಿಗೆ ಹಂಚಿಕೊಳ್ಳಿ: ಬಿ.ತಮ್ಮಯ್ಯ, 9886819771 ಇದು ಅವರ ವಾಟ್ಸಾಪ್ ನಂಬ್ರವೂ ಹೌದು.