ನಮ್ಮ ಭಾಷೆ

ಮನೇಲಿ ಇಂಗ್ಲೀಷ್ ಮಾತಾಡಿದರೆ ಮಾತೃಭಾಷೆಯ ಗತಿ?

ಕೆಲವರು ಇಂಗ್ಲೀಷ್ ಮಕ್ಕಳಿಗೆ ಬರಲೆಂದು ಇಂಗ್ಲೀಷ್ ನಲ್ಲಿ ಮಾತನಾಡುತ್ತಾರೆ. ಆಗ ಅದು ತುಂಬಾ ನಾಟಕೀಯವಾಗಿ ತೋರುತ್ತದೆ. ಭಾಷೆ ಸಹಜವಾದ ಸಂವಹನವಾಗಬೇಕು

  • ಬಿ.ತಮ್ಮಯ್ಯ

www.bantwalnews.com ಅಂಕಣನಮ್ಮ ಭಾಷೆ

ಜಾಹೀರಾತು

ಬೆಂಗಳೂರಿನಲ್ಲಿ ನಾನು ನನ್ನ ಮಗನ ಮನೆಗೆ ಹೋದಾಗ ಅಲ್ಲಿ ಒಂದು ಔಷಧಿ ಅಂಗಡಿಗೆ ಹೋಗುತ್ತಿದ್ದೆ. ಅಲ್ಲಿ ವಯಸ್ಸಾದವರೊಬ್ಬರು ಅಂಗಡಿ ಮಾಲೀಕರು. ನನ್ನನ್ನು ನೋಡಿದೊಡನೆ ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅವರಿಗೆ ಮಂಗಳೂರಿನವರೆಂದರೆ ತುಂಬಾ ಅಭಿಮಾನವೆಂದು ತಿಳಿಯಿತು.

ಒಮ್ಮೆ ನಾನು ಹೋದಾಗ ಅವರು ಇರಲಿಲ್ಲ. ಕೇಳಿದಾಗ ಅಂಗಡಿಯಲ್ಲಿದ್ದವರು ಅವರು ಅಮೇರಿಕಾಕ್ಕೆ ಅವರ ಮಗನ ಮನೆಗೆ ಹೋಗಿದ್ದಾರೆ ಎಂದು ತಿಳಿಸಿದರು.. ಮತ್ತೊಮ್ಮೆ ಹೋದಾಗ, ಅವರು ಸಿಕ್ಕಿದರು. ವಿಚಾರಿಸಿದೆ ಅಮೇರಿಕಾ ಹೇಗಿತ್ತು ಎಂದು ಕೇಳಿದೆ. ಮಗನ ಮಗು ಮಾತನಾಡುತ್ತದೆ ಎಂದು ಮಗ ಹೇಳಿದ. ಮೊಮ್ಮಗನ ತೊದಲು ನುಡಿಯನ್ನು ಕೇಳಬೇಕು ಎಂದು ನಾನು ಹೋದೆ. ಅಲ್ಲಿ ನೋಡಿದರೆ ಮೊಮಗ ಮಾತನಾಡುತ್ತಾನೆ. ಆದರೆ ಅದು ನನ್ನ ಸವಿಗನ್ನಡವಲ್ಲ, ಇಂಗ್ಲೀಷ್. ನನಗೂ ಇಂಗ್ಲೀಷ್ ಬರುತ್ತದೆ. ಆದರೆ ನಾನು ನನ್ನ ಮೊಮ್ಮಗನ ಬಳಿ ಇಂಗ್ಲೀಷ್ ಮಾತನಾಡಿದರೆ  ಅದು ನನ್ನ ಮೊಮ್ಮಗ ಎನಿಸುವುದಿಲ್ಲ. ತುಂಬಾ ನೋವಾಯಿತು. ಮಗನಿಗೆ ಬೈದು ಬೆಂಗಳೂರಿಗೆ ಬಂದುಬಿಟ್ಟೆ ಎಂದರು. ಆಗ ಅವರ ಕಣ್ಣಲ್ಲಿ ನೀರಿತ್ತು.

ಜಾಹೀರಾತು

ದಿನಾ ತುಳು ಮಾತನಾಡುವ ಸ್ನೇಹತ ಕನ್ನಡ ಮಾತನಾಡಿದರೆ ನಮಗೂ ಆತ ಪರಕೀಯ ಎಂಬ ಭಾವನೆ ಸಹಜವಾಗಿ ಮೂಡಿಬರುತ್ತದೆ. ಆದುದರಿಂದ ಭಾಷೆ ನಮ್ಮ ಹೃದಯದ ಬಾಗಿಲನ್ನು ತಟ್ಟುತ್ತದೆ ಎಂಬುದು ಸತ್ಯ. ಅದೆಷ್ಟೋ ತುಳುವರು ಮಕ್ಕಳಿಗೆ ಕನ್ನಡ ಬರಲೆಂದು ಕನ್ನಡದಲ್ಲಿ ಮಾತನಾಡಿಸುತ್ತಾರೆ. ಅದನ್ನು ಕೇಳಿದಾಗ ನಮಗೆ ನಾಟಕದಂತೆ ತೋರುತ್ತದೆ. ಇನ್ನು ಕೆಲವರು ಇಂಗ್ಲೀಷ್ ಮಕ್ಕಳಿಗೆ ಬರಲೆಂದು ಇಂಗ್ಲೀಷ್ ನಲ್ಲಿ ಮಾತನಾಡುತ್ತಾರೆ. ಆಗ ಅದು ತುಂಬಾ ನಾಟಕೀಯವಾಗಿ ತೋರುತ್ತದೆ. ಭಾಷೆ ಸಹಜವಾದ ಸಂವಹನವಾಗಬೇಕು. ಅದು  ನಾಟಕೀಯವಾಗಿ ಕೇಳುಗನಿಗೆ ಅನಿಸತ್ತದೆ. ಈ ಮೇಲಿನ ಮೂರು ಭಾಷೆಯನ್ನು ಉಳಿಸಿ ಬೆಳೆಸುವ ಬಗ್ಗೆ ಉತ್ತಮ ಉದಾಹರಣೆ. ಮಾತೃಭಾಷೆಯ ಶಬ್ದತರಂಗಗಳು ನಮ್ಮ ಕಿವಿಗೆ ತಾಗಿದಾಗ, ನಮ್ಮ ದೇ ಶರೀರದಲ್ಲಿ ಒಂದು ಸಂಚಲನವಾಗುತ್ತದೆ. ಬೆಂಗಳೂರಿನಲ್ಲಿ ತುಳು ಮಾತನಾಡುತ್ತಾ ಹೋದರೆ ಕೆಲವರು ತಿರುಗಿ ನೋಡುತ್ತಾರೆ. ಮಾತ್ರವಲ್ಲ ನೀವು ಮಂಗಳೂರಿನವರಾ ಎಂದು ಕೇಳುತ್ತಾರೆ. ಈ ರೀತಿಯ ಸಂಬಂಧ ಗಳನ್ನು ಬೆಸೆಯುವ ಶಕ್ತಿ ಭಾಷೆಗಿದೆ. ಭಾಷೆಯ ಬಗ್ಗೆ ಅಭಿಮಾನವಿರಬೇಕು. ದುರಭಿಮಾನ ಸಲ್ಲದು. ಹೆತ್ತಬ್ಬೆ ಸುಂದರಿಯಾದರೂ ಕುರೂಪಿಯಾದರೂ ತಾಯೇ. ಅಂತೆಯೇ ನಮ್ಮ ಭಾಷೆ ಎಂಬ ಅಭಿಮಾನ ಬೇಕು.

ಈ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿಮಗೆ ಬಂಟ್ವಾಳ ನ್ಯೂಸ್ ವೇದಿಕೆ ಕಲ್ಪಿಸುತ್ತದೆ. ನಿಮ್ಮ ಅಭಿಪ್ರಾಯವನ್ನು 50 ಶಬ್ದಗಳ ಮಿತಿಯಲ್ಲಿ ಬರೆದು, ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಈ ವಾಟ್ಸಾಪ್ ನಂಬರ್ ಗೆ ಕಳುಹಿಸಿ: 9448548127 ಅಥವಾ ಈ ಮೈಲ್ ವಿಳಾಸ: bantwalnews@gmail.com

 

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
B Thammayya

ತುಳು ಭಾಷೆ ಮಾತಾಡೋದು ಸುಲಭ. ಲಿಪಿ ವಿಚಾರ ಬಂದಾಗ ಹಿಂದೇಟು ಹಾಕುತ್ತೇವೆ. ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಬಿ.ಸಿ.ರೋಡಿನ ಬಿ.ತಮ್ಮಯ್ಯ, ತುಳು ಲಿಪಿಯನ್ನು ಸರಳವಾಗಿಸುತ್ತಾರೆ. ಹಿಂದಿರುಗಿ ನೋಡಿದಾಗ ಸಹಿತ ಹಲವು ಪುಸ್ತಕಗಳನ್ನು ಬರೆದಿರುವ ಅವರು ಕಸಾಪ ತಾಲೂಕು ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.