ಬಂಟ್ವಾಳ

ಬ್ಲಡ್ ಹೆಲ್ಪ್ ಲೈನ್ ವತಿಯಿಂದ ರಕ್ತದಾನ ಶಿಬಿರ

ಬ್ಲಡ್ ಹೆಲ್ಪ್ ಲೈನ್ ವತಿಯಿಂದ ಹರೇಕಳದಲ್ಲಿ ಸಾರ್ವಜನಿಕವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಸಿರಾಜುದ್ದೀನ್ ಸಖಾಫಿ ದುವಾ ನೆರವೇರಿಸಿದರು. ಅಧ್ಯಕ್ಷತೆಯನ್ನು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಅಡ್ಮಿನ್ ಆದ ಮುಸ್ತಫಾ ಅಡ್ಡೂರು ದೆಮ್ಮಲೆ ವಹಿಸಿದ್ದರು. ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸ್ಥಾಪಕಾಧ್ಯಕ್ಷ ನಿಸಾರ್ ಉಳ್ಳಾಲ ದಮ್ಮಾಮ್ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ವೆಬ್ ಸೈಟನ್ನು ಲೋಕಾರ್ಪನೆ ಮಾಡುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ತುರ್ತು ರಕ್ತವನ್ನು ನಿಗದಿತ ಸಮಯದಲ್ಲಿ ಶೇಖರಿಸುವಲ್ಲಿ ಯಶಸ್ವಿಯಾದವರಿಗೆ ಬಳಗದ ವತಿಯಿಂದ ಪ್ರಶಸ್ತಿಯನ್ನು ನೀಡುವ ಮೂಲಕ ಸನ್ಮಾನಿಸಲಾಯಿತು.

ಬ್ಲಡ್ ಹೆಲ್ಪ್ ಲೈನ್ ಉಡುಪಿ ವಲಯದ ಎಡ್ಮಿನ್ ಫಯಾಝ್ ಅಲಿ ಬೈಂದೂರು, ಹಾರೀಸ್ ಮಲಾರ್, ಆಸಿಫ್ ಮಲಾರ್, ಹರೇಕಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಾಬಲ ಹೆಗ್ಡೆ ಡಬ್ಬೇಲಿ, ಹರೇಕಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿಯೇನೆಪೋಯ ಬ್ಲಡ್ ಬ್ಯಾಂಕ್ ಅಧಿಕಾರಿ ಎಂ.ಎಸ್.ಶರೀಫ್, ಏನೆಪೋಯ ಆಸ್ಪತ್ರೆಯ ಡಾ. ಅಮೀರ್, ಹರೇಕಳ ಗ್ರಾಮ ಪಂಚಾಯತ್ ಸದಸ್ಯ ಬಶೀರ್ ಅಬ್ದುಲ್ ಖಾದರ್ ಹಾಗೂ ಗಝಾಲಿ ಅಕ್ಬರ್ ಆಲಿ, ಯೂಸುಫ್ ರಹ್ಮಾನ್, ಖಾಲಿದ್ ಕೊಳ್ನಾಡು, ಮುಸ್ತಫಾ ಹರೇಕಳ, ಸಾದಿಕ್ ಪಾವೂರು, ಫೈಝಲ್ ಮಂಚಿ, ಶಮೀರ್ ಉಳೈಬೆಟ್ಟು, ಅಶ್ರಫ್ ಅಪೋಲೋ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ