ನಮ್ಮ ಭಾಷೆ

ಪಂಚದ್ರಾವಿಡ ಭಾಷೆಗಳಲ್ಲಿ ತುಳುವಪ್ಪೆಯೇ ಸೀನಿಯರ್

ಪಂಚದ್ರಾವಿಡ ಭಾಷೆಗಳ ಬಗ್ಗೆ ಗೊತ್ತು, ಆದರೆ ಅವುಗಳಲ್ಲಿ ಹಿರಿಯ ಭಾಷೆ ಯಾವುದು ಅರಿತಿದ್ದೀರಾ?

  • ಬಿ.ತಮ್ಮಯ್ಯ

www.bantwalnews.com ಅಂಕಣನಮ್ಮ ಭಾಷೆ

ಇತ್ತೀಚೆಗೆ ನನಗೆ ಸಿಕ್ಕಿದ ಒಬ್ಬ ಭಾರತೀಯ ಭಾಷಾ ಲಿಪಿ ಸಂಶೋಧಕರೊಬ್ಬರು ಪಂಚ ದ್ರಾವಿಡ ಭಾಷೆಗಳಲ್ಲಿ ಹಿರಿಯ ಭಾಷೆ ಯಾವುದು ಎಂದು ಹೇಳಿದರು. ನಾನು ತಮಿಳು ಎಂದು ಜನ ಹೇಳುತ್ತಾರೆ. ಎಂದು ಉತ್ತರಿಸಿದೆ. ಆಗ ಅವರು ಅಲ್ಲ, ಹಿರಿಯ ಭಾಷೆ ಅಮ್ಮ ತುಳು ಎಂದರು. ಅದನ್ನು ಕೇಳಿ ನನಗೆ ರೋಮಾಂಚನವಾಯಿತು.

ಕುಪ್ಪಂ ವಿಶ್ವವಿದ್ಯಾನಿಲಯದಲ್ಲಿ ಪಂಚದ್ರಾವಿಡ ಭಾಷೆಗಳ ಬಗ್ಗೆ ಒಂದು ಫಲಕವಿದೆ. ಅದರಲ್ಲಿ ತುಳು, ತಮಿಳು, ತೆಲುಗು, ಕನ್ನಡ ಮತ್ತು ಮಲೆಯಾಳವೆಂಬ ಹಿರಿತನದ ಪಟ್ಟಿ ಇದೆ ಎಂದರು. ಇದರಿಂದಾಗಿ ನನಗೆ ನನ್ನ ಮಾತೃಭಾಷೆ ತುಳುವಿನ ಬಗ್ಗೆ ಅಭಿಮಾನ ಹುಟ್ಟಿ ಏನಾದರೂ ಮಾಡಬೇಕು ಎಂದುಕೊಂಡು ತುಳು ಲಿಪಿ ಕಲಿತೆ. ಅದನ್ನು ಮಕ್ಕಳಿಗೆ ಹೇಳಿಕೊಡುವ ಪ್ರಯತ್ನ ಮಾಡಿದೆ. ತುಳು ಸಾಹಿತ್ಯ ಅಕಾಡೆಮಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಶೇಷಶಯನ ಕಾರಿಂಜ ನನಗೆ ತುಂಬಾ ಬೆಂಬಲವನ್ನು ನೀಡಿದರು.

1956ರಂದು ಭಾಷಾವಾರು ಪ್ರಾಂತ್ಯ ರಚನೆಯಾಗುವ ಸಮಯದಲ್ಲಿ ಭಾರತದ ಪಾರ್ಲಿಮೆಂಟಿನಲ್ಲಿ ದಕ್ಷಿಣ ಭಾರತದ ಹಿರಿಯ ರಾಜಕಾರಣಿಗಳು ಮಾಡಿದ ಭಾಷಣದ ತುಣುಕು ನೋಡಿ.

Former tamilnadu CM Annadurai spoke about Tulu language in the Parliament for the first time. He told that Tamil was derived from Tulu, So Tulu like the father of Tamil and Kannada was derived from tamil, that means tulu is the grandfather of kannada.

ಖುದ್ದು ಅಂದಿನ ಸಿಎಂ ಅಣ್ಣಾದೊರೈ ತುಳು ತಮಿಳು ಭಾಷೆ ಉಗಮಕ್ಕೆ ಕಾರಣವಾದರೆ, ತಮಿಳು ಕನ್ನಡ ಭಾಷೆಯ ಹುಟ್ಟಿಗೆ ಕಾರಣವಾಯಿತು ಎಂದಿದ್ದಾರೆ. ಅಣ್ಣಾದೊರೈ ಹೇಳುವಂತೆ ಕನ್ನಡ ಭಾಷೆಯ ತಾತ ತುಳು ಭಾಷೆ!.

ಕೇರಳ ಮುಖ್ಯಮಂತ್ರಿಯಾಗಿದ್ದ ಎಂ.ಕರುಣಾಕರನ್ ಅವರೂ ಮಲಯಾಳ ಭಾಷಾ ಲಿಪಿ ತುಳುವಿನಿಂದ ಪಡೆದುಕೊಂಡದ್ದು, ಹೀಗಾಗಿ ತುಳುವಿಗೆ ಯಾವಾಗಲೂ ಕೃತಜ್ಞ ಎಂದು ಹೇಳಿದ್ದಾರೆ.

ಈ ಮಾತುಗಳೇ ಸಾಕು, ತುಳು ಭಾಷೆಯ ಹಿರಿತನ ಮತ್ತು ಶಕ್ತಿ ಎಷ್ಟಿದೆ ಎಂಬುದು ಗೊತ್ತಾಗುತ್ತದೆ.

ಆಳುಪರ ಕಾಲದಲ್ಲಿ ಆಡಳಿತ ಭಾಷೆಯಾಗಿತ್ತು ತುಳು ಭಾಷೆ.

ಮುಂದೆ ವಿಜಯಗರ, ಹೊಯ್ಸಳ ಕೆಳದಿ ನಾಯಕರ, ಹೈದರಾಲಿ, ಟಿಪ್ಪು ಸುಲತ್ತಾನ್ ಕಾಲದಲ್ಲಿ ತುಳುನಾಡು ಕನ್ನಡ ರಾಜರ ಆಡಳಿತದ ಕೈಗೆ ಬಂತು. ಕನ್ನಡವೇ ಆಡಳಿತ ಭಾಷೆಯಾಯಿತು. ತುಳು ಆಡಳಿತ ಭಾಷೆ ಎಂಬ ಪಟ್ಟದಿಂದ ಹೊರಹೋದ ಮೇಲೆ, ಲಿಪಿ ಕಣ್ಮರೆಯಾಗಿ ತುಳು ಭಾಷೆ ಮಾತ್ರ ಉಳಿಯಿತು. ನಂತರ ಆಳಿದವರು ಇಂಗ್ಲೀಷರು. ಅವರ ಆಡಳಿತ ಇಂಗ್ಲೀಷ್ ನಲ್ಲಿತ್ತು. ಅಲ್ಲಿಗೆ ತುಳು ಲಿಪಿ ಸಂಪೂರ್ಣ ಮರೆಯಾಯಿತು.

(ಮುಂದಿನ ಭಾಗದಲ್ಲಿ: ತುಳು ಭಾಷೆ ಉಳಿಸಲು ಯಾರು ಮನಸ್ಸು ಮಾಡಬೇಕು)

ಈ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿಮಗೆ ಬಂಟ್ವಾಳ ನ್ಯೂಸ್ ವೇದಿಕೆ ಕಲ್ಪಿಸುತ್ತದೆ. ನಿಮ್ಮ ಅಭಿಪ್ರಾಯವನ್ನು 50 ಶಬ್ದಗಳ ಮಿತಿಯಲ್ಲಿ ಬರೆದು, ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಈ ವಾಟ್ಸಾಪ್ ನಂಬರ್ ಗೆ ಕಳುಹಿಸಿ: 9448548127 ಅಥವಾ ಈ ಮೈಲ್ ವಿಳಾಸ: bantwalnews@gmail.com

B Thammayya

ತುಳು ಭಾಷೆ ಮಾತಾಡೋದು ಸುಲಭ. ಲಿಪಿ ವಿಚಾರ ಬಂದಾಗ ಹಿಂದೇಟು ಹಾಕುತ್ತೇವೆ. ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಬಿ.ಸಿ.ರೋಡಿನ ಬಿ.ತಮ್ಮಯ್ಯ, ತುಳು ಲಿಪಿಯನ್ನು ಸರಳವಾಗಿಸುತ್ತಾರೆ. ಹಿಂದಿರುಗಿ ನೋಡಿದಾಗ ಸಹಿತ ಹಲವು ಪುಸ್ತಕಗಳನ್ನು ಬರೆದಿರುವ ಅವರು ಕಸಾಪ ತಾಲೂಕು ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Recent Posts