Categories: Uncategorized

ದೌರ್ಜನ್ಯ, ಅತ್ಯಾಚಾರ ಪ್ರಕರಣ ದುರ್ದೈವದ ಸಂಗತಿ

ಬಂಟ್ವಾಳ: ಸಮಾನತೆಗಾಗಿ ಮಹಿಳಾ ಸಂಘಟನೆಗಳು ಹೋರಾಟ ಮತ್ತು ಆಂದೋಲನ ಮಾಡುವುದು ಕಾಣಲು ಸಿಗುತ್ತದೆ. ಮತ್ತೊಂದೆಡೆ ಸ್ತ್ರೀಯರ ಮೇಲೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ನಡೆಯುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ದ.ಕ ರಣರಾಗಿಣಿ ಶಾಖೆಯ ಲಕ್ಷ್ಮೀ ಪೈ ಅವರು ಹೇಳಿದರು.

ಬಂಟ್ವಾಳ ತಾಲೂಕು ರಾಯಿ ಸಮೀಪದ ಕುದ್ಕೋಳಿ ಕೇಂದ್ರ ಮೈದಾನದಲ್ಲಿ ಜರಗಿದ ಹಿಂದು ಧರ್ಮ ಜಾಗೃತಿ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾಹೀರಾತು

ಉದ್ಯಮಿ ದಿನೇಶ್ ಎಂ.ಪಿ. ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಸನಾತನ ಸಂಸ್ಥೆಯ ಸಂಗೀತಾ ಪ್ರಭು ಮಾತನಾಡಿ ನಾವು ಜನರಿಗೆ ಶ್ರದ್ಧೆ ಅಂದರೆ ಏನು ಎಂದು ಕೇವಲ ಹೇಳುವುದು ಮಾತ್ರವಲ್ಲ, ಅದನ್ನು ಅಚರಣೆಗೆ ತಂದು ತೋರಿಸಿದ್ದೇವೆ ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಸಮನ್ವಯಕ ವಿಜಯ ಕುಮಾರ ಮಾತನಾಡಿ ದೇಶದಲ್ಲಿ ಜಾತ್ಯಾತೀತ ಸರಕಾರವಿದೆ. ಹಾಗಾಗಿ ಸಮಾನ ನಾಗರಿಕ ಕಾನೂನು ಸಹ ಇರಬೇಕು ಎಂದು ಹೇಳಿದರು.

ಜಾಹೀರಾತು

ಮಾವಿನಕಟ್ಟೆ ಹಿಂದೂ ಜಾಗರಣಾ ವೇದಿಕೆ ಶಿವಾನಂದ, ರಾಯಿ ಬದನಡಿ ಷಣ್ಮುಖ ಭಜನಾ ಮಂಡಳಿ ಅಧ್ಯಕ್ಷ ದಯಾನಂದ ಸಪಲ್ಯ, ಮಾವಿನಕಟ್ಟೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.  ಹಿಂದೂ ಜನಜಾಗೃತಿ ಸಮಿತಿ ದ.ಕ ಜಿಲ್ಲಾ ಸಮನ್ವಯಕರಾದ ಪ್ರಭಾಕರ ಪಡಿಯಾರ್ ಅವರು ಹಿಂದೂ ಜನಜಾಗೃತಿ ಸಮಿತಿಯ ಪರಿಚಯಿಸಿ ಸ್ವಾಗತಿಸಿದರು.ಕು.ಚೇತನಾ ಪ್ರಭು ಅವರು ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ