ಬಂಟ್ವಾಳ

ಬೆಳಗಾವಿಯಲ್ಲಿ ಗ್ರಾಮಸಹಾಯಕರ ಅನಿರ್ದಿಷ್ಟಾವಧಿ ಮುಷ್ಕರ

ಬಂಟ್ವಾಳ:  ಡಿ ‘ಗ್ರೂಪ್ ನೌಕರರ ನಾಲ್ಕು ದಶಕಗಳ ಬೇಡಿಕೆ ಕುರಿತು ಸರಕಾರದ ಗಮನವನ್ನು ಸೆಳೆಯಲು ಬೆಳಗಾವಿ ಸುವರ್ಣ ಸೌಧದ ಎದುರು ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಅನಿರ್ದಿಷ್ಟವಾದಿ ಮುಷ್ಕರ ಆರಂಭಗೊಂಡಿದೆ.

ತಾಲೂಕು ಜಿಲ್ಲೆ ಹಾಗೂ ರಾಜ್ಯದ ರಾಜಧಾನಿಯಲ್ಲಿ ಹಲವಾರು ಬಾರಿ ಮುಷ್ಕರ ಹಾಗೂ ಪಾದಯಾತ್ರೆ ನಡೆಸಲಾಗಿತ್ತು. ಆದರೂ ಸರಕಾರ ಗ್ರಾಮ ಸಹಾಯಕರನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿರುವ ಮುಷ್ಕರನಿರತರು, 2013 ರ ಬೆಳಗಾವಿಯ ಸುವರ್ಣ ಸೌಧದಲ್ಲಿ ಜರಗಿದ ಚಳಿಗಾಲದ ಅಧಿವೇಶನದಲ್ಲಿ ಗ್ರಾಮ ಸಹಾಯಕರ ಬೇಡಿಕೆಯನ್ನು ಘೋಷಣೆ ಮಾಡಲು ಸರಕಾರಕ್ಕೆ ಒತ್ತಾಯಿಸಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಜಾಹೀರಾತು

38 ವರ್ಷಗಳಿಂದ ಬೇಡಿಕೆಯನ್ನು ಸಲ್ಲಿಸುತ್ತ ಬಂದ್ದಿದ್ದರೂ ಯಾವುದೇ ಸರಕಾರವೂ ಗ್ರಾಮ ಸಹಾಯಕರ ಬೇಡಿಕೆಯನ್ನು ಈಡೇರಿಸುವತ್ತ ಗಮನವನ್ನು ಹರಿಸಿಲ್ಲ. ಸಮಾನ ವೇತನ ನಿಗದಿ ಪಡಿಸಿಲ್ಲ ದಿನದ 24 ಗಂಟೆ ಸರಕಾರದ ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಪ್ರಾಮಾಣಿಕತೆಯಿಂದ ಮಾಡುತ್ತ ಬಂದಿರುವ ಗ್ರಾಮ ಸಹಾಯಕರನ್ನು ಸರಕಾರವು  ಗುಲಾಮರಂತೆ ನಡೆಸಿಕೊಂಡು ಹೋಗುತ್ತಿದೆ. ಗ್ರಾಮ ಸಹಾಯಕರನ್ನು ಡಿ’ ಗ್ರೂಪ್ ನೌಕರರೆಂದು ಪರಿಗಣಿಸಬೇಕು, ಸರಕಾರದ ಇತರ ನೌಕರರಿಗೆ ಸಿಗುವಂತಹ ಸೌಲಭ್ಯ. ಪಿಂಚಣಿ. ರಜೆ ಇನ್ನಿತರ ಸೌಲಭ್ಯ ಒದಗಿಸಬೇಕು ಎಂದು ಮುಷ್ಕರನಿರತರು ಒತ್ತಾಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ