ಬಂಟ್ವಾಳ

27ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ

ಬಂಟ್ವಾಳ: ಬಂಟ್ವಾಳ ಬಂಟರ ಭವನದಲ್ಲಿ 27ರಂದು ಆಳ್ವಾಸ್ ನುಡಿಸಿರಿ ವಿರಾಸತ್ ಬಂಟ್ವಾಳ ಘಟಕವತಿಯಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.

pic: internet

ಸಂಜೆ 5.45ಕ್ಕೆ ಸಭಾ ಕಾರ್ಯಕ್ರಮ ನಡೆಯುವುದು. 45 ನಿಮಿಷಗಳ ಸಭಾ ಕಾರ್ಯಕ್ರಮವಿದ್ದು, ಬಳಿಕ ಆಳ್ವಾಸ್ ನ 350 ವಿದ್ಯಾರ್ಥಿಗಳಿಂದ 3 ಗಂಟೆ 30 ನಿಮಿಷಗಳ ಕಾಲ ಆಳ್ವಾಸ್ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ.

ಅಂದು ಸಂಜೆ ಆಳ್ವಾಸ್ ಕಾಲೇಜಿನ ಪ್ರತಿಭಾನ್ವಿತ ಕಲಾವಿದರಿಂದ ಕೇರಳದ ’ಮೋಹಿನಿಯಾಟಂ’, ಮಧುಮಾಸದ ರೂಪಕ ’ಬಡಗುತಿಟ್ಟು ಯಕ್ಷಗಾನ’, ಆಂಧ್ರದ ’ಬಂಜಾರ ನೃತ್ಯ’, ಮಣಿಪುರಿ ’ಸ್ಟಿಕ್ ಡ್ಯಾನ್ಸ್’ (ಸ್ಟಂಟ್), ಶ್ರೀಲಂಕಾದ ’ನೃತ್ಯ ವೈಭವ’, ಸಾಹಸಮಯ ರೋಪ್,  ’ಮಲ್ಲಕಂಬ’, ಆನಂದ ತಾಂಡವ ’ಭರತ ನಾಟ್ಯ’, ಆನಂದ ಮಂಗಳಂ ದೇರ್ ’ಕಥಕ್’, ಗುಜರಾತಿನ ’ಹೂಡೋ ರಾಸ್’, ಮಹಾರಾಷ್ಟ್ರದ ’ಲಾವಣಿ ನೃತ್ಯ’, ಪಶ್ಮಿಮ ಬಂಗಾಳದ ’ಪುರುಲಿಯಾ ನೃತ್ಯ’, ತೆಂಕು ತಿಟ್ಟಿನ ಯಕ್ಷಗಾನ ’ವೇದೋದ್ಧರಣ, ಮಣಿಪುರ ದೋಲ್ ಚಲಮ್, ಒರಿಸ್ಸಾದ ’ಗೋಟಿಪೂವ ಮತ್ತು ಯೋಗ ನೃತ್ಯ’, ಸಮಕಾಲೀನ ನೃತ್ಯ, ವಂದೇ ಮಾತರಂ ಮತ್ತಿತರ ದೇಶ-ವಿದೇಶಗಳ ವಿವಿಧ ಪ್ರಕಾರದಿಂದ ಕೂಡಿದ ಶಾಸ್ತ್ರೀಯ ಮತ್ತು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.

ಜಾಹೀರಾತು

ಕಾರ್ಯಕ್ರಮವು ಸಮಯಕ್ಕೆ ಸರಿಯಾಗಿ ಆರಂಭಗೊಳ್ಳಲಿದ್ದು, 15 ನಿಮಿಷ ಮುಂಚಿತವಾಗಿ ಆಸೀನರಾಗಿರಬೇಕು ಎಂದು ಪ್ರಕಟಣೆ ತಿಳಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ವಿಶ್ವ ನುಡಿಸಿರಿ ಹಿನ್ನೆಲೆಯಲ್ಲಿ ಬಂಟ್ವಾಳ ತಾಲ್ಲೂಕು ಘಟಕ ರಚಿಸಲಾಗಿದ್ದು, ಇದೀಗ ಮತ್ತೆ ವಿಶ್ವ ನುಡಿಸಿರಿ ನಡೆಸಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ನಿರ್ಧರಿಸಿದ್ದಾರೆ. ಇದರಿಂದಾಗಿ ಪ್ರತೀ ತಾಲ್ಲೂಕು ಘಟಕ ಆಶ್ರಯದಲ್ಲಿ ’ಆಳ್ವಾಸ್ ಸಾಂಸ್ಕೃತಿಕ ವೈಭವ’ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಸಮಿತಿ ಸಂಚಾಲಕ ಡಾ.ಯೋಗೀಶ ಕೈರೋಡಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ