ಬಂಟ್ವಾಳ

ಸಾಲೆತ್ತೂರು ಜಮಾಅತ್ತ್ ಗಲ್ಫ್ ಕೋಪರೇಷನ್ ಕೌನ್ಸಿಲ್ ಪದಾಧಿಕಾರಿಗಳ ಆಯ್ಕೆ

ಸಾಲೆತ್ತೂರು: ಜಮಾಅತ್ತ್ ಗಲ್ಫ್ ಕೋಪರೇಶನ್ ಕೌನ್ಸಿಲ್ (S.J.G.C.C) ಸಂಘಟನೆಯು ಜಮಾಅತ್ತಿನ ಅಭಿವೃದ್ದಿಗೆ ಬೇಕಾಗಿ ರೂಪುಗೊಂಡ ಸಂಘಟನೆ. ಈ ಸಂಘಟನೆ ಜಮಾಅತ್ತಿಗೆ ಒಳಪಟ್ಟ ವಿದೇಶದಲ್ಲಿ ದುಡಿಯುವ ಜನರನ್ನು ಒಳಗೊಂಡಿದೆ. ‌ಮಸೀದಿಗೆ ಬೇಕಾಗಿದ  ವ್ಯವಸ್ಥೆಯನ್ನು ಮಾಡಲು ತುದಿಗಾಲಲ್ಲಿ ನಿಂತು ಸಹಕರಿಸಲು ಸದಸ್ಯರು ಸನ್ನದ್ದರಾಗಿದ್ದಾರೆ. ಇದೇ ರೀತಿ ಮುಂದಕ್ಕೆ ಈ ಸಂಘಟನೆಯು ಜಮಾಅತ್ತಿನ ಮೂಲಭೂತ ಸೌಕರ್ಯ್ಯವನ್ನು ಒದಗಿಸಲು  ಆರ್ಥಿಕವಾಗಿ ನೆರವನ್ನು ನೀಡಲು ತೀರ್ಮಾನಿಸಲಾಗಿದೆ. ಸಂಘಟನೆಯ ನೂತನ ಪಧಾಧಿಕಾರಿಗಳನ್ನಾಗಿ ಎಲ್ಲಾ ಸದಸ್ಯರ ಸರ್ವ ಸಮ್ಮತದಿಂದ ಆಯ್ಕೆ ಮಾಡಲಾಗಿದೆ.


ಸಾಲೆತ್ತೂರು ಜಮಾಅತ್ತ್ ಗಲ್ಫ್ ಕೋಪರೇಷನ್ ಕೌನ್ಸಿಲ್ ಇದರ ಗೌರವಾಧ್ಯಕ್ಷರಾಗಿ ಎ.ಕೆ ಅದ್ದುರ್ರಹಿಮಾನ್ ಕುವೈಟ್, ಅಧ್ಯಕ್ಷರಾಗಿ ಅಬೂಸ್ವಾಲಿಹ್ ಅಲ್ ಫಾಲಿಳಿ ಪೈಝೀ ಕತ್ತಾರ್, ಉಪಾಧ್ಯಕ್ಷರಾಗಿ ರಪೀಕ್ ಎ.ಕೆ ಸೌಧಿ ಅರೇಬಿಯಾ, ಪ್ರಧಾನ ಕಾರ್ಯದರ್ಶೀಯಾಗಿ ದಾವೂದ್ ಕಾಡುಮಠ, ಕಾರ್ಯದರ್ಶಿಯಾಗಿ ಶಾಫೀ ಕಟ್ಟೆ ಸೌದಿ ಅರೇಬಿಯಾ ಹಾಗೂ ಬಶೀರ್ ಕೊಲ್ನಾಡು, ಟ್ರೆಸರರ್ ಆಗಿ ಸುಲೈಮಾನ್ ಸಾಲೆತ್ತೂರ್ ಕಟ್ಟೆ, ಸಂಘಟನೆಯ ಮೇಲ್ನೊಟವನ್ನು ಬಶೀರ್ ಅಗರಿ ವಹಿಸಿದರು.

ಇದರ ಗ್ರಾಪಿಕ್ಸ್ ಡಿಸೈನರ್ ಆಗಿ ಕರಾರ್ ಎ.ಕೆ ಸೌಧಿ ಅರೇಬಿಯಾ ಮತ್ತು ಎ.ಕೆ ಅಸ್ರಫ್ ಸೌಧಿ ಅರೇಬಿಯಾ ವಿನ್ಯಾಸಗೊಳಿಸಿದರು. ಅದೇ ರೀತಿ ಉಳಿದ ಸದಸ್ಯರನ್ನು ಉನ್ನತ ಸದಸ್ಯರು ಎಂಬ ನಿಟ್ಟಿನಲ್ಲಿ ಸಮಾನ ರೀತಿಯಲ್ಲಿ ಆಯ್ಕೆ ಮಾಡಲಾಯತು.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.