ಕಲ್ಲಡ್ಕ

ಕಲ್ಲಡ್ಕದಲ್ಲಿ ತ್ರಿವರ್ಣ ಸಾಧನಾ ಸಂಭ್ರಮ

ಬಂಟ್ವಾಳ : ತಾಲೂಕಿನ ಕೋಮುಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟ ಕಲ್ಲಡ್ಕದಲ್ಲಿ ವಿಜೃಂಭಣೆಯಿಂದ ನಡೆದ ತ್ರಿವರ್ಣ ಸಾಧನಾ ಸಂಭ್ರಮ ಇಲ್ಲಿನ ಶಾಂತಿ-ಸೌಹಾರ್ದತೆ ಸಹಬಾಳ್ವೆಯ ಮುನ್ನುಡಿಗೆ ಸಾಕ್ಷಿಯಾಯಿತು.

ಕಲ್ಲಡ್ಕದ ತ್ರಿವರ್ಣ ಸಂಗಮದ ಆಶ್ರಯದಲ್ಲಿ ಕಲ್ಲಡ್ಕ-ಪೂರ್ಲಿಪ್ಪಾಡಿಯ ರಘುರಾಮ ಶೆಟ್ಟಿ ಕ್ರೀಡಾಂಗಣದಲ್ಲಿ ಜಾತಿ-ಮತ-ಪಕ್ಷ ಬೇಧವಿಲ್ಲದೆ ಅತಿಥಿಗಳು, ಸಾಧಕರು, ಕಲಾವಿದರು ಹಾಗೂ ಜನಸಾಗರದ ಕೂಡುವಿಕೆಯಲ್ಲಿ ನಡೆದ ಈ ಅದ್ದೂರಿ ಕಾರ್ಯಕ್ರಮ ಕಲ್ಲಡ್ಕ ಜನತೆಯಲ್ಲಿ ಹೊಸ ಹುರುಪು-ಉಲ್ಲಾಸ, ಸಂಭ್ರಮದ ವಾತಾವರಣ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಜಾಹೀರಾತು

ರಾಜ್ಯ ಅರಣ್ಯ, ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವರುಗಳಾದ ಕೃಷ್ಣ ಜೆ. ಪಾಲೆಮಾರ್, ಬಿ. ನಾಗರಾಜ ಶೆಟ್ಟಿ, ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್. ಮುಹಮ್ಮದ್, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಗೋಳ್ತಮಜಲು ಗ್ರಾ.ಪಂ. ಉಪಾಧ್ಯಕ್ಷ ಹಾಜಿ ಕೆ.ಎಸ್. ಮುಸ್ತಫಾ ಕಲ್ಲಡ್ಕ, ಪ್ರಮುಖರಾದ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಜಿತೇಂದ್ರ ಎಸ್. ಕೊಟ್ಟಾರಿ, ಜಯಾನಂದ ಆಚಾರ್ಯ ಕಲ್ಲಡ್ಕ, ವಿದ್ಯಾ ಸಾಗರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಘನತೆ-ಗೌರವಕ್ಕೆ ಸಾಕ್ಷಿಯಾದರು.

ಜಾಹೀರಾತು

ಚಲನ ಚಿತ್ರ ನಿರ್ಮಾಪಕ, ನಿರ್ದೇಶಕ ವಿ.ಕೆ. ಮೋಹನ್, ನಟ, ನಿರ್ಮಾಪಕ ವಿನೋದ್ ಆಳ್ವ, ನಟ-ನಟಿಯರುಗಳಾದ ಅರ್ಜುನ್ ಕಾಪಿಕಾಡ್, ಹರ್ಷ ಬೆಂಗಳೂರು, ಸಿದ್ದಾರ್ಥ್, ನವಿತಾ ಜೈನ್, ಆರಾಧ್ಯ ಶೆಟ್ಟಿ, ಐಂದ್ರಿತಾ ರೆ, ಮಯೂರಿ ಮೊದಲಾದ ಚಲನಚಿತ್ರ ತಾರೆಯರು ಸಾಧನಾ ಸಂಭ್ರಮಕ್ಕೆ ಸಾಥ್ ನೀಡಿದರು. ರಾಜ್‌ಗೋಪಾಲ್ ಮತ್ತು ತಂಡದವರಿಂದ ಸಂಗಮ್ ನೈಟ್ಸ್-೨೦೧೬ ಸಂಗೀತ ಕಾರ್ಯಕ್ರಮ, ಉಜಿರೆಯ ತ್ರಿಲೋಕ್ ಡ್ಯಾನ್ಸ್ ಇನ್ಸಿಟ್ಯೂಟ್‌ನಿಂದ ನೃತ್ಯ ಸಂಗಮ, ಓಶಿಯನ್ ಕಿಡ್ಸ್ ಮಂಗಳೂರು ತಂಡದಿಂದ ರಿಯಾಲಿಟಿ ಶೋ, ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದ ದೇಹದಾರ್ಡ್ಯ ಪಟುಗಳಾದ ಬೆಂಗಳೂರಿನ ಆಲ್ವಿನ್ ಪೌಲ್, ಬಾಲಕೃಷ್ಣ ಹಾಗೂ ಚೇತನ್ ಅವರಿಂದ ದೇಹದಾರ್ಡ್ಯ ಪ್ರದರ್ಶನ, ಟೈಗರ್ ಡ್ಯಾನ್ಸ್, ಪ್ರಶಂಸಾ ಕಾಪು ತಂಡದಿಂದ ಬಲೇ ತೆಲಿಪಾಲೆ, ಸಿಂಗಾರಿ ಮೇಳ (ಚೆಂಡೆ ನೃತ್ಯ), ಚಿತ್ರಕಲೆ, ವರದರಾಜ್ ಬೆಂಗಳೂರು ಮತ್ತು ಮಾಸ್ಟರ್ ತೌಸೀರ್ ಅವರಿಂದ ಡ್ಯಾನ್ಸ್ ಕಾರ್ಯಕ್ರಮಗಳು ನೆರೆದಿದ್ದ ಜನತೆಯನ್ನು ಮನೋರಂಜನೆಯ ಉತ್ತುಂಗ ಶಿಖರದಲ್ಲಿ ವಿಹರಿಸುವಂತೆ ಮಾಡಿತು.

ಜಾಹೀರಾತು

ತ್ರಿವರ್ಣ ಸಾಧನಾ ಸಂಭ್ರಮದ ಕೇಂದ್ರ ಬಿಂದುಗಳಾದ 14 ಮಂದಿ ಸಾಧಕರು ತ್ರಿವರ್ಣ ಸಾಧನಾ ಪ್ರಶಸ್ತಿ ಸ್ವೀಕರಿಸುವ ಮೂಲಕ ಇಡೀ ಕಾರ್ಯಕ್ರಮಕ್ಕೆ ವಿಶೇಷ ಅರ್ಥವನ್ನು ತಂದುಕೊಟ್ಟರು.

ತ್ರಿವರ್ಣ ಸಾಧನಾ ಸಂಭ್ರಮದಲ್ಲಿ ಜನಮೆಚ್ಚಿದ ನಾಯಕ ಪುರಸ್ಕೃತರಾಗಿ ಬೆಳ್ಳಿಪ್ಪಾಡಿ ರಮಾನಾಥ ರೈ, ರಾಜಕೀಯ ಕ್ಷೇತ್ರದಲ್ಲಿ ಸಾಧಕರಾಗಿ ರುಕ್ಮಯ್ಯ ಪೂಜಾರಿ, ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಕಂಬಳ ಕ್ಷೇತ್ರದ ಸಾಧಕ ಭಾಸ್ಕರ ಕೋಟ್ಯಾನ್ ಇರ್ವತ್ತೂರು, ಅಭೂತಪೂರ್ವ ವಸ್ತುಗಳು, ಕರೆನ್ಸಿ ಹಾಗೂ ನಾಣ್ಯಗಳ ಸಂಗ್ರಾಹಕ ಹವ್ಯಾಸಿ ಕ್ಷೇತ್ರದಲ್ಲಿ ಹೆಸರು ಪಡೆದ ಕೆ.ಎಸ್. ಮುಹಮ್ಮದ್ ಯಾಸಿರ್, ಕಲೆ ಕ್ಷೇತ್ರದ ಸಾಧಕ ಶಿಲ್ಪಾ ಗೊಂಬೆ ಬಳಗದ ರಮೇಶ್ ಕಲ್ಲಡ್ಕ, ಶಿಕ್ಷಣದ ಸಾಧಕ ಗೋಳ್ತಮಜಲು ಜೆಮ್ ಶಾಲಾ ಶಿಕ್ಷಕ ರಫೀಕ್ ಮಾಸ್ಟರ್, ಸಿನಿಮಾ ಕ್ಷೇತ್ರದ ಸಾಧಕ ಮನೋಜ್ ನೇರಳಕಟ್ಟೆ, ಭೂತರಾಧನಾ ಕ್ಷೇತ್ರದ ಸಾಧಕ ಕೊರಗಪ್ಪ ಪಂಡಿತ್ ಕುದ್ರೆಬೆಟ್ಟು, ನಾಟಕ ಕ್ಷೇತ್ರದ ಸಾಧಕ ಭೋಜರಾಜ ವಾಮಂಜೂರು, ಸಾಮಾಜಿಕ ಕ್ಷೇತ್ರದ ಸಾಧಕ ರವಿ ಕಕ್ಕೆಪದವು ಹಾಗೂ ಉದ್ಯಮ ಕ್ಷೇತ್ರದಲ್ಲಿ ಸಾಧನೆಗೈದು ಕಲ್ಲಡ್ಕದಲ್ಲಿ ಕೆ.ಟಿ. ಚಹಾದ ಮೂಲಕ ಪ್ರಸಿದ್ದಿ ಪಡೆದ ಹೋಟೆಲ್ ಲಕ್ಷ್ಮಿ ನಿವಾಸ ಮತ್ತು ಲಕ್ಷ್ಮೀ ಗಣೇಶ ಮಾಲಕರ ಮಾತೃಶ್ರೀ ಇಂದುಮತಿ ಹೊಳ್ಳ, ಮಂಗಳೂರು ಸಿಜೆ ಕನ್‌ಸ್ಟ್ರಕ್ಷನ್ ಮಾಲಕ ಪ್ರಜೋಶ್ ಮತ್ತು ಮಂಗಳೂರು ಶ್ರೀ ದುರ್ಗಾ ಕನ್‌ಸ್ಟ್ರಕ್ಷನ್ ಮಾಲಕ ಸಂತೋಷ್ ಕುಮಾರ್ ಅವರು 2016 ತ್ರಿವರ್ಣ ಸಾಧನಾ ಸಂಭ್ರಮದ ಸಾಧಕ ಪುರಸ್ಕಾರ ಸ್ವೀಕರಿಸಿದರು.

ಜಾಹೀರಾತು

ರಾಜೇಶ್ ಕಲ್ಲಡ್ಕ, ಪುರುಷೋತ್ತಮ ತೋಟ, ಯೋಗೀಶ್ ತೋಟ, ಪ್ರಶಾಂತ್ ಕುಲಾಲ್ ನೆಟ್ಲ, ಚಂದ್ರಶೇಖರ ಮಲಾರು, ನವೀನ್ ಕೋಟ್ಯಾನ್, ಕೆ.ಎಸ್. ಮುಹಮ್ಮದ್ ಯಾಸೀರ್ ಕಲ್ಲಡ್ಕ, ವಿಜೇತ್ ತೋಟ, ವಿಕೇಶ್ ತೋಟ, ಕೆ.ಎನ್.ಬಿ. ನವಾಝ್, ಅನ್ವಿತ್ ತೋಟ, ವಿಶಾಲ್ ತೋಟ, ಕೃಷ್ಣಪ್ಪ ಪೂಜಾರಿ ತೋಟ, ಕೆ.ಎನ್.ಬಿ. ರಿಯಾಝ್, ವಿಕಾಸ್ ತೋಟ, ದೀಕ್ಷಿತ್ ಅಮೀನ್ ಪುತ್ತೂರು, ನಿತಿನ್ ಶಿಲ್ಪಾ ಕಲ್ಲಡ್ಕ, ಗೋಪಾಲ ಕಲ್ಲಡ್ಕ, ಶೇಖರ್ ಸಾಲ್ಯಾನ್, ಜಯಗಣೇಶ್ ನೆಲ್ಲಿ, ನಿತಿನ್ ದಾಯ್ಜಿವರ್ಲ್ಡ್, ಯಾದವ ಸುವರ್ಣ ಬರಿಮಾರು, ಭಾಸ್ಕರ ಅಮೀನ್ ಪೂರ್ಲಿಪ್ಪಾಡಿ, ಧೀರಜ್ ಕುಂದರ್, ರಮೇಶ್ ಪೂರ್ಲಿಪ್ಪಾಡಿ, ಮಾಧವ ಪೂರ್ಲಿಪ್ಪಾಡಿ, ಸಚಿನ್ ಕಾಣಿಯೂರು, ನಿತಿನ್ ಬಿ.ಆರ್. ನಗರ, ಗಂಗಾಧರ ಗೌಡ ಕುದ್ರೆಬೆಟ್ಟು, ಜಗದೀಶ್ ನರಹರಿ ನಗರ, ಕಾರ್ತಿಕ್ ಬಾಯಿಲ, ಗಿರೀಶ್ ಕುಲಾಲ್ ಕುರ್ಮಾನು, ಕಿಣ್ಣ ವಿಟ್ಲ, ಪ್ರಶಾಂತ್ ಬಿ.ಆರ್. ನಗರ, ಸೀತಾರಾಮ ಬಳ್ಳಿದಡ್ಡ ಮೊದಲಾದವರು ತ್ರಿವರ್ಣ ಸಾಧನಾ ಸಂಭ್ರಮದ ಯಶಸ್ಸಿನ ಪಾಲುದಾರರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ