ಬೆಂಗಳೂರಿನ ಸಪ್ತಕ ಸಂಸ್ಥೆಯು ವಿಟ್ಲದಲ್ಲಿ ಇತ್ತೀಚೆಗೆ ತನ್ನ ಶಾಖೆಯನ್ನು ತೆರೆದ ಸುರತ್ಕಲ್ ನ ಚಿರಂತನ ಚಾರಿಟೇಬಲ್ ಟ್ರಸ್ಟ್ ನ ಮೂಲಕ ಪುತ್ತೂರು ರಸ್ತೆಯಲ್ಲಿರುವ ವಿಟ್ಲ ಪಟ್ಟಣ ಪಂಚಾಯತ್ ನ ಬಸ್ ನಿಲುದಾಣದಲ್ಲಿ ಕುಡಿಯುವ ತಂಪು ನೀರಿನ ವ್ಯವಸ್ಥೆಯನ್ನು ವಿಟ್ಲದ ಜನತೆಗಾಗಿ ನೀಡಲಾಗಿದೆ. ಸಂಸ್ಥೆಯ ಜಿ ಎಸ್ ಹೆಗಡೆ ಉದ್ಘಾಟಿಸಿದರು.
ಪಂಚಾಯತ್ ನ ಮಾಜಿ ಅಧ್ಯಕ್ಷರಾದ ರಮಾನಾಥ್ ವಿಟ್ಲ, ರಾಮದಾಸ್ ಶೆಣೈ, ರವೀಶ್ ವಿಟ್ಲ, ಅಶ್ರಫ್, ಚಿರಂತನದ ಭಾರವಿ ದೇರಾಜೆ ಹಾಗೂ ಶಿವಾನಂದ ರೈ ಮುಂತಾದವರು ಉಪಸ್ಥಿತರಿದ್ದರು.