ಬಂಟ್ವಾಳ

ಶರನ್ನವರಾತ್ರಿ: ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯ ವಿಶೇಷ ಕಾರ್ಯಕ್ರಮಗಳು

ಶರನ್ನವರಾತ್ರಿ: ಶ್ರೀ ರಕೇಶ್ವರೀ ದೇವಿ ಸನ್ನಿಧಿಯ ವಿಶೇಷ ಕಾರ್ಯಕ್ರಮಗಳು

VNR GOLD

ಶರನ್ನವರಾತ್ರಿ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಬ್ರಹ್ಮಶ್ರೀ ವೇ.ಮೂ.ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ವಿಶೇಷ ಪೂಜೆ, ಕಾರ್ಯಕ್ರಮಗಳು ಇರಲಿವೆ ಎಂದು ಸೇವಾ ಸಮಿತಿ ಅಧ್ಯಕ್ಷ ಬಿ.ಮೋಹನ್ ತಿಳಿಸಿದ್ದಾರೆ.

  • ದೈನಂದಿನ ಪೂಜೆಗಳು: ಪ್ರತಿದಿನ ಸಂಜೆ 6:00ರಿಂದ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ರಾತ್ರಿ 8:00 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.
  • ವಿಶೇಷ ಆರಾಧನೆಗಳು: ಅಕ್ಟೋಬರ್ 15 ಮತ್ತು 16ರಂದು ಪೂರ್ವಾಹ್ನ 11:30ಕ್ಕೆ ಹಗಲು ನಾಗಾರಾಧನೆ ನಡೆಯಲಿದೆ.
  • ದುರ್ಗಾಷ್ಟಮಿ: ಅಕ್ಟೋಬರ್ 19ರ ಸೋಮವಾರದಂದು ದುರ್ಗಾಷ್ಟಮಿಯ ಪ್ರಯುಕ್ತ ವಿಶೇಷ ದುರ್ಗಾನಮಸ್ಕಾರ ಪೂಜೆ ಜರುಗುವುದು.
  • ಆಯುಧ ಪೂಜೆ: ಆಯುಧ ಪೂಜೆ ಮಾಡಿಸುವ ಭಕ್ತರಿಗಾಗಿ ಅಕ್ಟೋಬರ್ 20ರ ಮಂಗಳವಾರ ಬೆಳಿಗ್ಗೆಯಿಂದ ದೇವಿಯ ಸನ್ನಿಧಿಯಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.
  • ಮಹಾ ಚಂಡಿಕಾಯಾಗ: ಅಕ್ಟೋಬರ್ 21ರ ಬುಧವಾರ ವಿಜಯದಶಮಿಯ ಶುಭದಿನದಂದು ಪೂರ್ವಾಹ್ನ 8:00 ಗಂಟೆಯಿಂದ ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಮಹಾ ಚಂಡಿಕಾಯಾಗ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ
  • ಪ್ರತಿದಿನ ಕಾರ್ಯಕ್ರಮಗಳು: ಪ್ರತಿದಿನವೂ ಭಜನೆ, ನಾಟ್ಯ, ಸಂಗೀತ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿದ್ದು, 21ರಂದು ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರದಿಂದ ರೋಹಿಣಿ ಉದಯ್ ಶಿಷ್ಯೆಯರ ನೃತ್ಯರಂಜನಿ ಇರಲಿದೆ.
ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.