ಇಂದಿನ ವಿಶೇಷ

ಕರಾವಳಿ ಜಿಲ್ಲೆಗಳು: ಬಿಸಿಲು, ಮೋಡದ ವಾತಾವರಣ

ಮಂಗಳೂರು: ಕರಾವಳಿಯ ಉ.ಕ.ದ ಘಟ್ಟಪ್ರದೇಶಗಳ ಕೆಲವೆಡೆ ನಿನ್ನೆ ಸಣ್ಣ ಮಳೆಯಾಗಿದ್ದು, ಉಡುಪಿ ದ.ಕ, ಕಾಸರಗೋಡು ಕರಾವಳಿ ತೀರಗಳ ಅಲ್ಲಲ್ಲಿ ಮುಂಜಾನೆ ತುಂತುರು – ಸಾಮಾನ್ಯ ಮಳೆಯಾಗಿದೆ.

ದಕ್ಷಿಣ ಒಳನಾಡಿನ  ಚಾಮರಾಜನಗರ ರಾಮನಗರ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು ಮೈಸೂರು ಮಂಡ್ಯ ತುಮಕೂರು ಚಿಕ್ಕಬಳ್ಳಾಪುರ ಬೆಂಗಳೂರು ಹಾಸನ ಚಿಕ್ಕಮಗಳೂರು ಜಿಲ್ಲೆಗಳ ಹಲವು ತಾಲ್ಲೂಕುಗಳಲ್ಲಿ ನಿನ್ನೆ ಸಾಧಾರಣ ಮಳೆಯಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ 117 ಮಿ ಮೀ ಗರಿಷ್ಠ ಮಳೆಯಾಗಿದೆ.

ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ  ಭಾಗಷಃ -ಮೋಡ  ವಾತಾವರಣ  ಮುಂದುವರೆಯಲಿದೆ.  ಕಾಸರಗೋಡು ದ.ಕ ಉಡುಪಿ ಉ.ಕ ಜಿಲ್ಲೆಗಳ ಅಲ್ಲಲ್ಲಿ ಸಂಜೆ – ನಾಳೆ ಮುಂಜಾನೆ ಸಣ್ಣ ಮಳೆಯಾಗಬಹುದು. ಮಲೆನಾಡಿನಲ್ಲಿ ಮಳೆಯ ಮುನ್ಸೂಚನೆ ಇರುವ ಕಾರಣ ಸಂಜೆ ದ.ಕ ಉಡುಪಿ ಉ.ಕ, ಘಟ್ಟಪ್ರದೇಶಗಳಲ್ಲಿ ಗುಡುಗು ಮಳೆಯ ಸಾಧ್ಯತೆಯೂ ಇದೆ. ಮುಂದಿನ 2-3 ದಿನ ಇದೇ ರೀತಿಯ ಹವೆ ಇರಲಿದ್ದು ಬಂಗಾಳ ಕೊಲ್ಲಿಯ ವಾಯುಭಾರಕುಸಿತ ಒಂದೆರಡು ದಿನ ತಡವಾಗಿ 20/21ಕ್ಕೆ ಸಂಭವಿಸುವ ಕಾರಣ ಕರಾವಳಿ ಜಿಲ್ಲೆಗಳಲ್ಲಿ  ಸೆ 20 ರ ನಂತರ 2-3 ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಜಾಹೀರಾತು

ಮಲೆನಾಡಿನ   ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಘಟ್ಟಪ್ರದೇಶಗಳ ಸಮೀಪದ ತಾಲ್ಲೂಕುಗಳಲ್ಲಿ ಸಂಜೆ  ಗುಡುಗು ಸಹಿತ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಇನ್ನೊಂದು ವಾರ ಮಲೆನಾಡಿನ ಜಿಲ್ಲೆಗಳಲ್ಲಿ  ಸಂಜೆ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ.

ದಕ್ಷಿಣ ಒಳನಾಡಿನ ಚಿಕ್ಕಬಳ್ಳಾಪುರ ಕೋಲಾರ ಮೈಸೂರು ಚಾಮರಾಜನಗರ ರಾಮನಗರ   ಮಂಡ್ಯ ಬೆಂಗಳೂರು – ಗ್ರಾಮಾಂತರ ತುಮಕೂರು ಜಿಲ್ಲೆಗಳಲ್ಲಿ ಸಂಜೆ ಮೋಡದ ವಾತಾವರಣ ಇರಲಿದ್ದು  ಸಂಜೆ – ರಾತ್ರಿ  ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ದಾವಣಗೆರೆ ಚಿತ್ರದುರ್ಗ ವಿಜಯನಗರ ಜಿಲ್ಲೆಗಳ ಕೆಲವೆಡೆ ಸಂಜೆ ಗುಡುಗು ಮಳೆಯಾಗುವ ಸಾಧ್ಯತೆ ಇದೆ. ವಾಯುಭಾರ ಕುಸಿತದ ಪ್ರಭಾವದ ಮಳೆ ಒಂದು ವಾರ ಮುಂದುವರೆಯಬಹುರದು.

ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಇವತ್ತು ಮೋಡ ಬರುವ ಮುನ್ಸೂಚನೆ ಇದೆ. ಬೆಳಗಾವಿ  ಧಾರವಾಡ ಗದಗ ಹಾವೇರಿ ಬಾಗಲಕೋಟೆ ಬಿಜಾಪುರ ಕಲ್ಬುರ್ಗಿ ಬೀದರ್ ಯಾದಗಿರಿ ರಾಯಚೂರು ಬಳ್ಳಾರಿ ಕೊಪ್ಪಳ ಜಿಲ್ಲೆಗಳ  ಅಲ್ಲಲ್ಲಿ ಗುಡುಗು  ಮಳೆಯಾಗಬಹುದು. ಉತ್ತರ ಒಳನಾಡಿನಲ್ಲಿ ಸೆ 25 ತನಕ ಗುಡುಗು ಮಳೆ ಮುಂದುವರೆಯುವ  ಮುನ್ಸೂಚನೆ ಇದೆ.

 ದಕ್ಷಿಣ ಬಂಗಾಳಕೊಲ್ಲಿಯಲ್ಲಿ ತಮಿಳುನಾಡು ದಕ್ಷಿಣ ಕರ್ನಾಟಕ ತನಕ ಟ್ರಫ್ (Trough) ಮುಂದುವರೆದಿದೆ. ಇದರಿಂದಾಗಿ ದಕ್ಷಿಣ ಕರ್ನಾಟಕದಲ್ಲಿ ಮಳೆಯಾಗುತ್ತಿದ್ದು ಸೆಪ್ಟೆಂಬರ್ 20/21 ಕ್ಕೆ ಮಾಯನ್ಮಾರ್ ಸಮೀಪ ವಾಯುಭಾರಕುಸಿತ ಆಗಿ ಒರಿಸ್ಸಾದತ್ತ ಚಲಿಸುವ ಕಾರಣ   ಕರ್ನಾಟಕದ ದಕ್ಷಿಣ/ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಲೆನಾಡಿನಲ್ಲಿ  ಒಂದು ವಾರ ಉತ್ತಮ ಮಳೆಯ ಮುನ್ಸೂಚನೆ ಇದೆ. ಆದರೇ  ಕರಾವಳಿ ಜಿಲ್ಲೆಗಳಲ್ಲಿ  ಪಶ್ಚಿಮದ ಮುಂಗಾರು ಗಾಳಿಯು ಪ್ರಬಲ ಆಗಿರುವ ಕಾರಣ ಪೂರ್ವದ ಗುಡುಗು ಆರಂಭ ಆಗಲಿಲ್ಲ. ಪಶ್ಚಿಮದ ಮೋಡ ಬಂದರೇ ಮಾತ್ರ ಎಲ್ಲಾ ಕಡೆ ಉತ್ತಮ ಮಳೆಯಾಗಬಹುದು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರಿನ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಪರ ಮಹತ್ವದ ನಿರ್ಧಾರ ಕೈಗೊಳ್ಳಲಿ

Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…

2 days ago