ಬಿ.ಸಿ.ರೋಡ್ ನ ಶ್ರೀ ರಕ್ತೇಶ್ವರಿ ಸನ್ನಿಧಿಯ ಸಮೀಪ ಹಿಂದು ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ 47ನೇ ವರ್ಷದಲ್ಲಿ ಪೂಜಿಸಲ್ಪಟ್ಟ ಶ್ರೀಗಣೇಶನ ಭವ್ಯ ಶೋಭಾ ಯಾತ್ರೆ ಗುರುವಾರ ಸಂಜೆ ನಡೆಯಿತು.
ಈ ಸಂದರ್ಭ, ಶ್ರೀ ಗಣೇಶನಿಗೆ ಶ್ರೀ ರಾಮ ಗೆಳೆಯರ ಬಳಗ ಕೈಕಂಬ,ಬಿ .ಸಿ.ರೋಡ್ ವತಿಯಿಂದ ಕೈಕಂಬ ಪೊಳಲಿ ದ್ವಾರದಿಂದ ಮೆರವಣಿಗೆಯಲ್ಲಿ ಸಾಗಿ ಬೃಹತ್ ಗಾತ್ರದ ಶೇಂಗಾ ಚಿಕ್ಕಿ ಹಾರವನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾದ ಸದಾಶಿವ ಕೈಕಂಬ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು