ಬಂಟ್ವಾಳ ತಾಲೂಕು ಕಸಾಪ ವತಿಯಿಂದ ಸ್ವಾತಂತ್ರ್ಯೋತ್ಸವ
ಬಂಟ್ವಾಳ: ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಆಚರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಅಧ್ಯಕ್ಷರಾದ ವಿಶ್ವನಾಥ್ ಬಂಟ್ವಾಳ ಧ್ವಜಾರೋಹಣ ನೆರವೇರಿಸಿದರು. ನ್ಯಾಯವಾದಿ
ಉಮೇಶ್ ಕುಮಾರ್ ವೈ ಸ್ವಾತಂತ್ರ್ಯೋತ್ಸವದ ಸಂದೇಶ ನೀಡುತ್ತಾ ಸ್ವಾತಂತ್ರ್ಯಕ್ಕಾಗಿ ದುಡಿದ ಮಹನೀಯರನ್ನು ಸ್ಮರಿಸಿ ಅವರ ಕನಸನ್ನು ಸಾಕಾರಗೊಳಿಸುವ ಮೂಲಕ ಬಲಿಷ್ಠ ಭಾರತ ಕಟ್ಟೋಣ ಎಂದು ಹೇಳಿದರು. ಪ್ರಮುಖರಾದ ಸಂಕಪ್ಪ ಶೆಟ್ಟಿ, ಜಯರಾಮ್ ಪಡ್ರೆ, ನ್ಯಾಯವಾದಿ ರವೀಂದ್ರ ಕುಕ್ಕಾಜೆ, ಮಹಮ್ಮದ್ ಪಾಣೆಮಂಗಳೂರು, ರಜನಿ ಚಿಕ್ಕಯ್ಯಮಠ, ಸುಭಾಷ್ ಚಂದ್ರ ಜೈನ್, ಪತ್ರಕರ್ತ ಸಲೀಂ ಬೋಳಂಗಡಿ, ಲತೀಫ್ ಶಾಂತಿಅಂಗಡಿ ಉಪಸ್ಥಿತರಿದ್ದರು. ಬಿ.ಎ. ತುಂಬೆ ಪದವಿ ಪೂರ್ವ ಕಾಲೇಜು ನಿವೃತ್ತ ಪ್ರಾಂಶುಪಾಲ ವಿ.ಸು. ಭಟ್ ಕಾರ್ಯಕ್ರಮ ನಿರೂಪಿಸಿದರು ಅಧ್ಯಾಪಕರಾದ ಸಾಯಿರಾಮ್ ನಾಯಕ್ ವಂದಿಸಿದರು.