ಬಂಟ್ವಾಳ

ಲಯನ್ಸ್, ಲಿಯೋ ಕ್ಲಬ್ ಬಂಟ್ವಾಳ ಪದಗ್ರಹಣ; ಆರ್ಥಿಕ ಸಹಾಯ ಹಸ್ತಾಂತರ

ಬಿ.ಸಿ.ರೋಡಿನ ಲಯನ್ಸ್ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಲಯನ್ಸ್ ಹಾಗೂ ಲಿಯೋ ಕ್ಲಬ್‌ನ ತಂಡದ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಕಲ್ಪತರು ಲಯನ್ಸ್ ಕ್ಲಬ್ ಬಂಟ್ವಾಳದ 54ನೇ ವರ್ಷದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಚಿತ್ರಾ ಜೆ. ಯಡಪಡಿತ್ತಾಯ, ಕಾರ್ಯದರ್ಶಿಯಾಗಿ ಜಯಂತಿ ಎಂ.ಪ್ರಭು, ಕೋಶಾಧಿಕಾರಿಯಾಗಿ ಸುಮ ಸುನಿಲ್, ಉಪಾಧ್ಯಕ್ಷರಾಗಿ ಫೆಲಿಕ್ಸ್ ರೇಗೊ ಕುಡುಪು ಹಾಗೂ ಲಿಯೋ ಕ್ಲಬ್ ಅಧ್ಯಕ್ಷೆಯಾಗಿ ಶಿಯಾಂಕ ಆಚಾರ್ಯ, ಕಾರ್ಯದರ್ಶಿಯಾಗಿ ಸ್ಪಟಿಕಾ.ಎಸ್ ಆಚಾರ್ಯ, ಕೋಶಾಧಿಕಾರಿಯಾಗಿ ಧ್ರುವಿ.ಆರ್.ಕಾರಂತ ಮತ್ತು ನಿರ್ದೇಶಕರು ಅಧಿಕಾರ ವಹಿಸಿಕೊಂಡರು.

VNR GOLD

ಪದಗ್ರಹಣ ಸಮಾರಂಭವನ್ನು ಲಯನ್ಸ್ ಜಿಲ್ಲಾ ದ್ವಿತೀಯ ಉಪ ಗವರ್ನರ್ ಗೋವರ್ಧನ.ಕೆ.ಶೆಟ್ಟಿ ಅವರು ನೆರವೇರಿಸಿದರು. ಲಯನ್ಸ್ ಸಂಸ್ಥೆಯಲ್ಲಿ  ಲಯನ್ಸ್ ಕ್ಲಬ್ ಬಂಟ್ವಾಳ ಕಳೆದ 54 ವರ್ಷಗಳಿಂದ ಸಮಾಜಕ್ಕೆ, ವಿದ್ಯಾರ್ಥಿಗಳಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ನೀಡಿದ ಸೇವೆ ಪರಮಾತ್ಮನು ಮೆಚ್ಚುವಂತದ್ದು. ಇಂತಹ ಸೇವೆಗಳಿಂದ ಸಮಾಜ ಮುಖಿಯಾಗಿ ಬಂಟ್ವಾಳ ಲಯನ್ಸ್ ಕ್ಲಬ್ ಗೌರವಕ್ಕೆ ಪಾತ್ರವಾಗಿದೆ ಎಂದು ಶ್ಲಾಘಿಸಿದರು.

ಜಾಹೀರಾತು

ಪದಗ್ರಹಣ ಸಮಾರಂಭದ ಹಿನ್ನೆಲೆಯಲ್ಲಿ ಪ್ರೌಢಶಾಲಾ ಹಾಗೂ ಕಾಲೇಜು ವಿಭಾಗದಲ್ಲಿ ಅತೀ ಹೆಚ್ಚು ಅಂಕ ಗಳಿಸಿ  ಬಂಟ್ವಾಳ ತಾಲೂಕಿನ ಗೌರವಕ್ಕೆ ಪಾತ್ರರಾದ 8 ಮಕ್ಕಳನ್ನು ಗೌರವಿಸಿ ಸನ್ಮಾನಿಸಲಾಯಿತು. 30 ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. ಸುಮಾರು 1.10 ಲಕ್ಷ ರೂ. ಗಳನ್ನು ಅನಾರೋಗ್ಯ ಪೀಡಿತರಿಗೆ ಹಾಗೂ ಬಡ ಕುಟುಂಬದ ಮನೆ ನಿರ್ಮಿಸಲು 25 ಸಾವಿರ ರೂ. ಸಹಾಯಧನ ವಿತರಿಸಲಾಯಿತು.

ನಿಕಟಪೂರ್ವ ಅಧ್ಯಕ್ಷ ರೋಹಿತಾಶ್ವ ಎಂ, ಕಾರ್ಯದರ್ಶಿ ಡಾ. ದಿವ್ಯಾ ವಸಂತ್ ಶೆಟ್ಟಿ, ಕೋಶಾಧಿಕಾರಿ ರಾಮಕೃಷ್ಣ ರಾವ್, ಪ್ರಾಂತೀಯ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್, ವಲಯಾಧ್ಯಕ್ಷ ಉಮೇಶ್ ಆಚಾರ್ಯ, ಸಂಸ್ಥಾಪಾಧ್ಯಕ್ಷ ಡಾ. ವಸಂತ ಬಾಳಿಗಾ, ಡಾ.ಶ್ಯಾಮ್ ಭಟ್, ಸುಧಾಕರ ಆಚಾರ್ಯ, ಡೊನಾಲ್ಡ್ ಬಂಟ್ವಾಳ್ ಮುಂತಾದವರು ಉಪಸ್ಥಿತರಿದ್ದರು ಡಾ. ಧೀರಜ್ ಹೆಬ್ರಿ ನಿರೂಪಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.