ಸ್ನೇಹಂಜಲಿ ಸೇವಾ ಸಂಘ (ರಿ.) ಅಜ್ಜಿಬೆಟ್ಟು ಇದರ 2026–27ನೇ ಸಾಲಿನ ನೂತನ , ಅಧ್ಯಕ್ಷರಾಗಿ ಜಯಂತ್ ಅಗ್ರಬೈಲ್ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ ಪ್ರಮೋದ್ ಅಜ್ಜಿಬೆಟ್ಟು ಉಪಾಧ್ಯಕ್ಷರಾಗಿ ನಿತಿನ್ ಅಜ್ಜಿಬೆಟ್ಟು ಹಾಗೂ ಗಣೇಶ್ ಆಚಾರ್ಯ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಆಶಿಶ್ ಅಜ್ಜಿಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ಮನೋಜ್ ಅಜ್ಜಿಬೆಟ್ಟು, ಕೋಶಾಧಿಕಾರಿಯಾಗಿ ಹರೀಶ್ ಅಗ್ರಬೈಲು, ಜೊತೆ ಕೋಶಾಧಿಕಾರಿಯಾಗಿ ಚರಣ್ ಅಗ್ರಬೈಲು ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಪ್ರದೀಪ್ ಅಜ್ಜಿಬೆಟ್ಟು ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಕ್ರೀಡಾ ಕಾರ್ಯದರ್ಶಿಗಳಾಗಿ ಸಂತೋಷ್ ಅಜ್ಜಿಬೆಟ್ಟು ಮತ್ತು ಯತೀಶ್ ಮೈಕ್ರೋ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಪ್ರಣಾಮ್ ಅಜ್ಜಿಬೆಟ್ಟು ಹಾಗೂ ಪ್ರವೀಣ್ ಅಜ್ಜಿಬೆಟ್ಟು ಆಯ್ಕೆಯಾಗಿದ್ದಾರೆ.
ಸಂಘದ ಸಾಮಾಜಿಕ ಸೇವೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಯುವಜನರ ಭಾಗವಹಿಸುವಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಂಘ ಕಾರ್ಯನಿರ್ವಹಿಸಲಿದೆ ಎಂದು ಅಧ್ಯಕ್ಷ ಜಯಂತ್ ತಿಳಿಸಿದ್ದಾರೆ.